ಇನ್ಮುಂದೆ ವಿಮಾನ ನಿಲ್ದಾಣದಲ್ಲಿ ಮುಖದ ಸ್ಕ್ಯಾನ್ ; ಹೊಸ ಡಿಜಿ ಯಾತ್ರಾ ವ್ಯವಸ್ಥೆ ಜಾರಿ 

02-12-22 12:54 pm       HK News Desk   ದೇಶ - ವಿದೇಶ

ವಿಮಾನ ಪ್ರಯಾಣಿಕರ ಸುರಕ್ಷತೆ ಮತ್ತು ಅಪರಾಧ ಪತ್ತೆಗಾಗಿ ಡಿಜಿ ಯಾತ್ರಾ ವ್ಯವಸ್ಥೆಯನ್ನು ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪರಿಚಯಿಸಲಾಗುತ್ತಿದೆ.

ನವದೆಹಲಿ, ಡಿ.2 : ವಿಮಾನ ಪ್ರಯಾಣಿಕರ ಸುರಕ್ಷತೆ ಮತ್ತು ಅಪರಾಧ ಪತ್ತೆಗಾಗಿ ಡಿಜಿ ಯಾತ್ರಾ ವ್ಯವಸ್ಥೆಯನ್ನು ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪರಿಚಯಿಸಲಾಗುತ್ತಿದೆ. ಪ್ರಯಾಣಿಕರ ಸಂಪರ್ಕ ರಹಿತ ಮತ್ತು ತಡೆರಹಿತ ಪ್ರಯಾಣಕ್ಕಾಗಿ ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ (ಎಫ್‌ಆರ್‌ಟಿ) ಆಧಾರದ ಮೇಲೆ ಇದನ್ನು ವಿನ್ಯಾಸ ಮಾಡಲಾಗಿದೆ. 

ಮುಖದ ವೈಶಿಷ್ಟ್ಯಗಳನ್ನೇ ಬಳಸಿಕೊಂಡು ವಿಮಾನ ನಿಲ್ದಾಣಗಳಲ್ಲಿರುವ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಪ್ರಯಾಣಿಕರು ಸಲೀಸಾಗಿ ತೆರಳಬಹುದು. ಇದನ್ನು ಬೋರ್ಡಿಂಗ್ ಪಾಸ್‌ನೊಂದಿಗೆ ಲಿಂಕ್ ಮಾಡುವ ಮೂಲಕ ಮುಖವನ್ನು ಸ್ಕ್ಯಾನ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

DigiYatra App Launch: Facial recognition installed at these three airports  today - BusinessToday

ದೆಹಲಿ, ಬೆಂಗಳೂರು ಮತ್ತು ವಾರಣಾಸಿ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಆರಂಭವಾಗಿದ್ದು, ಮೊದಲ ಹಂತದಲ್ಲಿ ದೇಶದ ಏಳು ವಿಮಾನ ನಿಲ್ದಾಣಗಳಲ್ಲಿ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಹೀಗಾಗಿ ಹೈದರಾಬಾದ್, ಕೋಲ್ಕತ್ತಾ, ಪುಣೆ, ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಶೀಘ್ರ ಆರಂಭವಾಗಲಿದೆ. ಬಳಿಕ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿಯೂ ಈ ನಿಯಮ ಜಾರಿಯಾಗಲಿದೆ.

ಆಧಾರ್‍ ದೃಢೀಕರಣ ಮತ್ತು ಸೆಲ್ಪೀ ಫೋಟೋಗಳನ್ನು ಡಿಜಿ ಯಾತ್ರಾ ಅಪ್ಲಿಕೇಶನ್‌ನಲ್ಲಿ ನೋಂದಣಿ ಮಾಡಿದರೆ ಸೌಲಭ್ಯ ಬಳಸಲು ಸಾಧ್ಯವಾಗುತ್ತದೆ. ಪ್ರಯಾಣಿಕರ ಗುರುತಿನ ಚೀಟಿ, ಪ್ರಯಾಣದ ಪುರಾವೆಗಳನ್ನು ಅವರ ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ಸಂಗ್ರಹಿಸಿ ಮಾಹಿತಿ ಸುರಕ್ಷಿತವಾಗಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

On Thursday, Civil Aviation Minister Jyotiraditya Scindia launched DigiYatra, that allows entry of air passengers based on a facial recognition system at the airport in the nation's capital. "DigiYatra, a biometric enabled seamless travel experience based on facial recognition technology aims to provide a new digital experience for air travellers in #India," the Ministry of Civil Aviation, Government of India, tweeted.