ಸಿಧು ಮೂಸೆವಾಲಾ ಹತ್ಯೆ ; ನಟೋರಿಯಸ್ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ

02-12-22 02:42 pm       HK News Desk   ದೇಶ - ವಿದೇಶ

ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ತಾನೇ ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದ ನಟೋರಿಯಸ್ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ನನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ.

ಚಂಡೀಗಢ, ಡಿ.2: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ತಾನೇ ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದ ನಟೋರಿಯಸ್ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ನನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ಗೋಲ್ಡಿ ಬ್ರಾರ್ ನನ್ನು ಬಂಧಿಸಿರುವುದನ್ನು ಪಂಜಾಬ್ ಸಿಎಂ ಭಗವಂತ್ ಮಾನ್ ದೃಢಪಡಿಸಿದ್ದಾರೆ. ಶೀಘ್ರದಲ್ಲೇ ಆತನನ್ನು ಭಾರತಕ್ಕೆ ಕರೆತರಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ಭಾರತದ ತನಿಖಾ ಏಜನ್ಸಿಗಳು ಕೂಡ ಗೋಲ್ಡಿ ಬ್ರಾರ್ ಬಂಧನವನ್ನು ಖಚಿತಪಡಿಸಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕ್ಯಾಲಿಫೋರ್ನಿಯಾ ಪೊಲೀಸರು ನೀಡಿಲ್ಲ.

Punjab Chief Minister Bhagwant Mann Admitted to Hospital Due to Stomach  ache: Report

ಕಳೆದ ಮೇ 29ರಂದು ಪಂಜಾಬಿನ ಮಾನಸ ಜಿಲ್ಲೆಯಲ್ಲಿ ಜೀಪಿನಲ್ಲಿ ಸಾಗುತ್ತಿದ್ದ ಗಾಯಕ ಮತ್ತು ರಾಜಕಾರಣಿಯಾಗಿದ್ದ ಸಿಧು ಮೂಸೆವಾಲಾ ಅವರನ್ನು ಅಪರಿಚಿತರ ತಂಡ ಸುತ್ತುವರಿದು ಗುಂಡು ಹಾರಿಸಿ ಕೊಂದು ಹಾಕಿತ್ತು. ಪ್ರಕರಣದಲ್ಲಿ ಪಂಜಾಬ್ ಮತ್ತು ದೆಹಲಿ ಪೊಲೀಸರು 25ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ದೀಪಕ್ ಮುಂಡಿ ಎಂಬಾತ ಈ ಪೈಕಿ ಪ್ರಮುಖನಾಗಿದ್ದು, ಕೆನಡಾದಲ್ಲಿರುವ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಅಣತಿಯಂತೆ ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದ. ಅಲ್ಲದೆ, ಗೋಲ್ಡಿ ಬ್ರಾರ್ ಕೂಡ ತಾನೇ ಕೃತ್ಯ ಎಸಗಿದ್ದಾಗಿ ಜಾಲತಾಣದಲ್ಲಿ ಹೇಳಿಕೊಂಡಿದ್ದ. ಪಂಜಾಬ್ ಮೂಲದ ಗೋಲ್ಡಿ ಬ್ರಾರ್ ಹಲವು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದೇ ಪಂಜಾಬ್, ದೆಹಲಿಯಲ್ಲಿ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡಿದ್ದ. ಹೀಗಾಗಿ ಭಾರತದ ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ಈತನೂ ಒಬ್ಬ.

Gangster Goldy Brar, allegedly the mastermind behind Punjabi singer Sidhu Moose Wala's murder in May, has been detained in the US, sources have told NDTV. A member of the Lawrence Bishnoi gang, Goldy Brar had recently moved to the US from Canada, where he was based since 2017. The gangster was detained in California around November 20, the sources said, adding that the Indian government is yet to receive any official statement from California.