ಆ ದೇಶದಲ್ಲಿನ್ನು ದಾಂಪತ್ಯ ಮೀರಿ ಅಕ್ರಮ ಸಂಬಂಧ ಇಟ್ಟುಕೊಂಡರೆ ಒಂದು ವರ್ಷ ಜೈಲು !

02-12-22 08:39 pm       HK News Desk   ದೇಶ - ವಿದೇಶ

ಇಂಡೋನೇಶ್ಯಾದಲ್ಲಿ ವಿಚಿತ್ರ ಕಾನೂನು ಜಾರಿಗೆ ಅಲ್ಲಿನ ಸರಕಾರ ಮುಂದಾಗಿದೆ. ಮದುವೆಯಾಗದೇ ಹೆಣ್ಣು ಅಥವಾ ಗಂಡು ಬೇರೆ ವ್ಯಕ್ತಿಗಳ ಜೊತೆಗೆ ಲೈಂಗಿಕ ಸಂಪರ್ಕ ನಡೆಸಿದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಲ್ಲ ಕಾನೂನು ಜಾರಿಗೆ ಚಿಂತನೆ ನಡೆಸಿದೆ.

ನವದೆಹಲಿ, ಡಿ.2: ಇಂಡೋನೇಶ್ಯಾದಲ್ಲಿ ವಿಚಿತ್ರ ಕಾನೂನು ಜಾರಿಗೆ ಅಲ್ಲಿನ ಸರಕಾರ ಮುಂದಾಗಿದೆ. ಮದುವೆಯಾಗದೇ ಹೆಣ್ಣು ಅಥವಾ ಗಂಡು ಬೇರೆ ವ್ಯಕ್ತಿಗಳ ಜೊತೆಗೆ ಲೈಂಗಿಕ ಸಂಪರ್ಕ ನಡೆಸಿದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಲ್ಲ ಕಾನೂನು ಜಾರಿಗೆ ಚಿಂತನೆ ನಡೆಸಿದೆ. ಈ ಕುರಿತ ಕ್ರಿಮಿನಲ್ ಕಾಯ್ದೆಯನ್ನು ಇದೇ ತಿಂಗಳಲ್ಲಿ ಸಂಸತ್ತಿನಲ್ಲಿ ಪಾಸ್ ಮಾಡಲು ಇಂಡೋನೇಶ್ಯಾ ಸರಕಾರ ಉದ್ದೇಶಿಸಿದೆ.

ಯಾರೇ ಆಗಲಿ ಪತ್ನಿ ಅಥವಾ ಗಂಡ ಮದುವೆಯಾದವರ ಜೊತೆಗಲ್ಲದೆ ಬೇರೆ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ನಡೆಸಿದರೆ ಒಂದು ವರ್ಷ ಶಿಕ್ಷೆ ವಿಧಿಸಬಲ್ಲ ಕಾನೂನು ಜಾರಿಯಾಗಲಿದೆ. ಆದರೆ, ಈ ಬಗ್ಗೆ ಗಂಡ ಅಥವಾ ಪತ್ನಿಯರು ಅಕ್ರಮ ಸಂಬಂಧ ಬಗ್ಗೆ ಪೊಲೀಸ್ ದೂರು ನೀಡಬೇಕು. ಅಥವಾ ತಮ್ಮ ಮಕ್ಕಳ ಅಕ್ರಮ ಸಂಬಂಧ ಬಗ್ಗೆ ಹೆತ್ತವರು ದೂರು ನೀಡಬೇಕಾಗುತ್ತದೆ. ಅಲ್ಲಿನ ಸಂವಿಧಾನದ ಸೆಕ್ಷನ್ 144 ಪ್ರಕಾರ, ಕೋರ್ಟಿನಲ್ಲಿ ಸೂಕ್ತ ಸಮಯದಲ್ಲಿ ವಿಚಾರಣೆ ನಡೆಯದೇ ಇದ್ದಲ್ಲಿ ಇಂತಹ ದೂರು ಅನೂರ್ಜಿತವಾಗುತ್ತದೆ.

How to come up with compelling arguments for your clients in court?

ಮೂರು ವರ್ಷಗಳ ಹಿಂದೆ ಇದೇ ರೀತಿಯ ಕಾನೂನು ಜಾರಿಗೆ ಇಂಡೋನೇಶ್ಯಾ ಸರಕಾರ ಮುಂದಾಗಿತ್ತು. ಆನಂತರ, ಜನರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರಿಂದ ಕಾನೂನು ಹಿಂಪಡೆದಿತ್ತು. ಇಂಡೋನೇಶ್ಯಾ ಮುಸ್ಲಿಂ ರಾಷ್ಟ್ರವಾಗಿದ್ದರೂ, ಅನೈತಿಕ ಚಟುವಟಿಕೆ ಹತ್ತಿಕ್ಕುವ ದೃಷ್ಟಿಯಿಂದ ಮತ್ತು ಮದುವೆ ಮೀರಿ ಲೈಂಗಿಕ ಸಂಪರ್ಕವನ್ನು ತಡೆಯಲು ಇಂತಹ ಕಾನೂನು ತರಲು ಮುಂದಾಗಿದೆ. ಆದರೆ ಇಂಡೋನೇಶ್ಯಾದಲ್ಲಿ ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗುವುದು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ತೀವ್ರವಾಗಿ ದಮನಿಸಲಾಗುತ್ತದೆ. ಇದೀಗ ಅಕ್ರಮ ಸಂಬಂಧ ಕುರಿತು ಕಾನೂನು ತಂದಲ್ಲಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬೀಳಲಿದೆ ಎನ್ನುವ ಆತಂಕವೂ ಅಲ್ಲಿನ ಉದ್ಯಮ ವಲಯದಲ್ಲಿದೆ.

Indonesian Parliament is set to pass a new criminal code that will penalise premarital sex, with a punishment of up to one year in jail, local media reports said. The Draft Criminal Code (RKUHP) is expected to be passed in the Parliament in the coming days.