ರಾಜಧಾನಿಯಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ಗುಡಿಸಿ ಹಾಕಿದ ಪೊರಕೆ ; ಪಾಲಿಕೆಯಲ್ಲಿ ಆಪ್ ಸ್ಪಷ್ಟ ಬಹುಮತ, ಇಡೀ ದೇಶಕ್ಕೆ ಸಂದೇಶ ಎಂದ ಕೇಜ್ರಿವಾಲ್  

07-12-22 06:17 pm       HK News Desk   ದೇಶ - ವಿದೇಶ

ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಪೊರಕೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಪೂರ್ತಿ ಗುಡಿಸಿ ಹಾಕಿದೆ. ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪೂರ್ಣ ಬಹುಮತ ಪಡೆದಿದ್ದು, ಹಾಲಿ ಆಡಳಿತಾರೂಢ ಬಿಜೆಪಿಗೆ ಮುಖಭಂಗ ಆಗುವಂತಾಗಿದೆ. 250 ಸದಸ್ಯ ಬಲದ ಪಾಲಿಕೆಯಲ್ಲಿ ಆಪ್ 134 ಸೀಟುಗಳನ್ನು ಗೆದ್ದು ಜಯಭೇರಿ ಬಾರಿಸಿದೆ.

ನವದೆಹಲಿ, ಡಿ.7: ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಪೊರಕೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಪೂರ್ತಿ ಗುಡಿಸಿ ಹಾಕಿದೆ. ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪೂರ್ಣ ಬಹುಮತ ಪಡೆದಿದ್ದು, ಹಾಲಿ ಆಡಳಿತಾರೂಢ ಬಿಜೆಪಿಗೆ ಮುಖಭಂಗ ಆಗುವಂತಾಗಿದೆ. 250 ಸದಸ್ಯ ಬಲದ ಪಾಲಿಕೆಯಲ್ಲಿ ಆಪ್ 134 ಸೀಟುಗಳನ್ನು ಗೆದ್ದು ಜಯಭೇರಿ ಬಾರಿಸಿದೆ.

ಬಿಜೆಪಿ 103 ಸೀಟು ಗೆದ್ದುಕೊಂಡರೆ, ಕಾಂಗ್ರೆಸ್ ಕೇವಲ ಹತ್ತು ಸೀಟುಗಳನ್ನಷ್ಟೇ ಪಡೆದಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 181 ಸೀಟು ಗೆದ್ದಿದ್ದರೆ, ಆಪ್ 40 ಸೀಟು ಮತ್ತು ಕಾಂಗ್ರೆಸ್ 30 ಸೀಟು ಗಳಿಸಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಆಪ್ ದೆಹಲಿಯನ್ನು ಪೂರ್ತಿ ಆವರಿಸಿದಂತಾಗಿದ್ದು, ನಗರ ಪ್ರದೇಶದ ಜನರು ಪೊರಕೆ ಹಿಡಿದು ಉಳಿದ ಪಕ್ಷಗಳನ್ನು ಗುಡಿಸಿ ಹಾಕಿದ್ದಾರೆ. ದೆಹಲಿಯ ಆಪ್ ಆಡಳಿತಕ್ಕೆ ಜೈಕಾರ ಹಾಕಿದ್ದಾರೆ.

MCD Election 2022 Results Live: AAP wins 134 of 250 wards; BJP settles at  104 | Hindustan Times

MCD elections: AAP on its way to seize Delhi civic body from BJP; What this  means for the party

MCD Election Results Live: Existing system of 'corruption and bribery' in  MCD will have to be ended, says Arvind Kejriwal | Deccan Herald

On May 26, Prime Minister Modi will travel to Hyderabad and Chennai.

ದೆಹಲಿಯಲ್ಲಿ ಜಯ ಗಳಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್, ರಾಜಧಾನಿಯ ಜನರು ಇಡೀ ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಮಹಾನಗರ ಪಾಲಿಕೆಯನ್ನು ಭ್ರಷ್ಟಾಚಾರ ಮುಕ್ತ ಮಾಡುವುದು ನಮ್ಮ ಗುರಿ. ಇದಕ್ಕಾಗಿ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿಯವರ ಆಶೀರ್ವಾದ ಕೋರುತ್ತೇನೆ. ಅಲ್ಲದೆ, ದೆಹಲಿಯನ್ನು ಇನ್ನಷ್ಟು ಉತ್ತಮ ಪಡಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸಹಕಾರ ಕೋರುತ್ತೇನೆ ಎಂದಿದ್ದಾರೆ.

Won't let protesters, unions disrupt operations: CM Bhagwant Mann to  industry - Hindustan Times

What next for Manish Sisodia, raided over Delhi liquor policy? - India Today

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರತಿಕ್ರಿಯಿಸಿ, ಇವತ್ತು ನಾವು ರಾಜಧಾನಿಯನ್ನು ಗೆದ್ದಿದ್ದೇವೆ. ನಾಳೆ ಗುಜರಾತನ್ನು ಗೆಲ್ಲುತ್ತೇವೆ ಎಂದಿದ್ದಾರೆ. ಇದು ನಮ್ಮ ಜಯವಲ್ಲ. ನಮಗೆ ದೊರೆತ ಹೊಸ ಜವಾಬ್ದಾರಿ. ದೆಹಲಿಯನ್ನು ಸ್ವಚ್ಛಗೊಳಿಸುವುದು ಮತ್ತು ಶೈನ್ ಆಗಿಸುವುದಕ್ಕೆ ದೊರೆತ ಅವಕಾಶ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

After the Aam Aadmi Party (AAP) Wednesday crossed the halfway mark with 134 seats in the Municipal Corporation of Delhi elections, Chief Minister Arvind Kejriwal thanked the people for AAP’s victory and sought the cooperation of the BJP and the Congress as well as the “blessings” of the Centre and Prime Minister Narendra Modi to improve civic amenities here. Addressing party workers at the headquarters, Kejriwal said, “Will try to live up to expectations of people, urge parties to come together to improve Delhi.”