ಗುಜರಾತಲ್ಲಿ ಬಿಜೆಪಿ ಮತ್ತೆ ಕಮಾಲ್ ; ಅಮೋಘ ಜಯಭೇರಿಯತ್ತ ಕೇಸರಿ ಕಲಿಗಳು, ಹಿಮಾಚಲದಲ್ಲಿ ಕಾಂಗ್ರೆಸ್ ಅಚ್ಚರಿಯ ಮುನ್ನಡೆ, ಅತಂತ್ರ ಫಲಿತಾಂಶ ಸಾಧ್ಯತೆ 

08-12-22 10:10 am       HK News Desk   ದೇಶ - ವಿದೇಶ

ದೇಶದ ಜನ ಭಾರೀ ನಿರೀಕ್ಷೆ ಇಟ್ಟುಕೊಂಡಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ ಇಂದು ಹೊರಬೀಳುತ್ತಿದೆ. ನಿರೀಕ್ಷೆಯಂತೆ ಗುಜರಾತಿನಲ್ಲಿ ಬಿಜೆಪಿ ಮತ್ತೆ ಕಮಾಲ್ ಮಾಡುವುದು ಖಚಿತವಾಗಿದೆ.

ನವದೆಹಲಿ, ಡಿ.8: ದೇಶದ ಜನ ಭಾರೀ ನಿರೀಕ್ಷೆ ಇಟ್ಟುಕೊಂಡಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ ಇಂದು ಹೊರಬೀಳುತ್ತಿದೆ. ನಿರೀಕ್ಷೆಯಂತೆ ಗುಜರಾತಿನಲ್ಲಿ ಬಿಜೆಪಿ ಮತ್ತೆ ಕಮಾಲ್ ಮಾಡುವುದು ಖಚಿತವಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ಹೊರಬಿದ್ದ ಫಲಿತಾಂಶದಲ್ಲಿ ಬಿಜೆಪಿ ಬರೋಬ್ಬರಿ 135 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಆಮ್ ಆದ್ಮಿ 9 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. 

ಹಿಮಾಚಲ ಪ್ರದೇಶದಲ್ಲಿ ಅಚ್ಚರಿ ಎನ್ನುವಂತೆ ಕಾಂಗ್ರೆಸ್, ಬಿಜೆಪಿಯನ್ನು ಹಿಂದಿಕ್ಕಿ ಮುನ್ನುಗ್ಗುವ ಲಕ್ಷಣ ಕಂಡುಬಂದಿದೆ. ಇಲ್ಲಿ ಜಿದ್ದಾಜಿದ್ದಿನ ಪೈಪೋಟಿ ಎದುರಾಗಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದವು. ಅದೇ ರೀತಿ, ಕಾಂಗ್ರೆಸ್ 36 ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದರೆ, ಬಿಜೆಪಿ 32 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಹೆಚ್ಚಿನ ಕ್ಷೇತ್ರಗಳಲ್ಲಿ ತೀರಾ ನಿಕಟ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್- ಬಿಜೆಪಿ ನಡುವೆ ನೇರ ಪೈಪೋಟಿ ಉಂಟಾಗಿದೆ. ಹಿಮಾಚಲದಲ್ಲಿ ಆಮ್ ಆದ್ಮಿ ಪಕ್ಷ ಯಾವುದೇ ಖಾತೆ ತೆರೆಯುವ ಲಕ್ಷಣ ಕಂಡುಬಂದಿಲ್ಲ. ಇತರರು ನಾಲ್ಕು ಮಂದಿ ಮುನ್ನಡೆಯಲ್ಲಿದ್ದಾರೆ. 

Exit polls predict photo finish in Himachal Pradesh elections | Deccan  Herald

ಗುಜರಾತಿನಲ್ಲಿ ತಮ್ಮದೇ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ತೋರಿದ್ದ ಆಮ್ ಆದ್ಮಿ ಪಕ್ಷವು ಕೆಲವೇ ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಆದರೆ ಹೆಚ್ಚಿನ ಕಡೆ ಕಾಂಗ್ರೆಸ್ ಮತಗಳನ್ನು ಆಮ್ ಆದ್ಮಿ ಪಾರ್ಟಿ ಪಡೆದಿರುವುದರಿಂದ ಗುಜರಾತಿನಲ್ಲಿ ಬಿಜೆಪಿ ಇತಿಹಾಸದಲ್ಲೇ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲು ಕಾರಣ ಆಗುತ್ತಿದೆ. ಆಪ್ ಇಲ್ಲಿ ಸ್ಥಾನಗಳನ್ನು ಗೆಲ್ಲುವ ಬದಲು ಹೆಚ್ಚಿನ ಕಡೆ ಕಾಂಗ್ರೆಸನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಮೊದಲ ಚುನಾವಣೆಯಲ್ಲೇ ಆಪ್ ಪರವಾಗಿ ಜನರು ಹೆಚ್ಚು ಮತ ಚಲಾಯಿಸಿದ್ದು ಕಂಡುಬಂದಿದೆ. 15 ಶೇಕಡಾದಷ್ಟು ಮತದಾರರು ಆಪ್ ಪರ ಮತ ಚಲಾಯಿಸಿದ್ದಾರೆ. ಈ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆಯೂ ಸಿಗಲಿದೆ. 

Amid row, Arvind Kejriwal writes to PM Modi on 'Lakshmi-Ganesha' photos on  notes | Latest News India - Hindustan Times

ಆಮ್ ಆದ್ಮಿಯ ಕಾರಣದಿಂದಾಗಿ ನಡುಕ ಹೊಂದಿದ್ದ ಬಿಜೆಪಿಗೆ ಈ ಚುನಾವಣೆಯಲ್ಲಿ ಮತ್ತಷ್ಟು ಲಾಭವಾಗಿದೆ. 2002ರಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಮೋದಿ 127 ಸ್ಥಾನಗಳನ್ನು ಪಡೆದು ಅತಿ ಹೆಚ್ಚು ಸ್ಥಾನ ಪಡೆದ ಇತಿಹಾಸ ನಿರ್ಮಿಸಿದ್ದರು. ಈ ಬಾರಿ ತ್ರಿಕೋನ ಸ್ಪರ್ಧೆಯಿಂದಾಗಿ ಬಿಜೆಪಿಗೆ ಲಾಭ ಆಗಿದ್ದು 135 ಸ್ಥಾನಗಳಲ್ಲಿ ಮುನ್ನಡೆ ಕಂಡಿರುವುದು 187 ಸದಸ್ಯಬಲದ ವಿಧಾನಸಭೆಯಲ್ಲಿ ಅಮೋಘ ಜಯಭೇರಿ ಸಾಧಿಸುವ ಲಕ್ಷಣ ತೋರಿಸಿದೆ. ಗುಜರಾತಿನಲ್ಲಿ ಈ ಹಿಂದಿಗಿಂತ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದು ಗೃಹ ಸಚಿವ ಅಮಿತ್ ಷಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಸಚಿವ ಅಮಿತ್ ಷಾ ಮಾತುಗಳು ಮತ್ತೆ ಸಾಬೀತಾಗುವ ಸಾಧ್ಯತೆ ಕಂಡುಬಂದಿದೆ. ಸೇತುವೆ ಕುಸಿತದಿಂದ 135 ಜನರು ಸಾವಿಗೀಡಾಗಿದ್ದ ಮೋರ್ಬಿ ಜಿಲ್ಲೆಯ ಮೂರು ಸೀಟುಗಳಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಿದೆ.

BJP raced to its best-ever result in Gujarat, with the Aam Aadmi Party (AAP) cutting into Congress votes, as votes were counted today in two states. In Himachal Pradesh, the BJP and Congress are fighting a close contest.The BJP is ahead in 146 seats in Gujarat, Prime Minister Narendra Modi's home state. The Congress, which delivered a strong performance in the last election, is leading in 26 seats.