ಹಿಮಾಚಲದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ; ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿ ! ಶಾಸಕರನ್ನು ಹಿಡಿದಿಡಲು ಮುಂದಾದ ನಾಯಕರು

08-12-22 03:54 pm       HK News Desk   ದೇಶ - ವಿದೇಶ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತಿದ್ದಂತೆ ಬಿಜೆಪಿಯಿಂದ ಕುದುರೆ ವ್ಯಾಪಾರ ಭೀತಿ ವ್ಯಕ್ತವಾಗಿದೆ. ಪಕ್ಷದ ಶಾಸಕರನ್ನು ಹಿಡಿದಿಡಲು ಕಾಂಗ್ರೆಸ್ ಹೈಕಮಾಂಡ್ ತನ್ನ ಮೂವರು ನಾಯಕರನ್ನು ಹಿಮಾಚಲಕ್ಕೆ ಕಳಿಸಿಕೊಟ್ಟಿದೆ.

ನವದೆಹಲಿ, ಡಿ.8 : ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತಿದ್ದಂತೆ ಬಿಜೆಪಿಯಿಂದ ಕುದುರೆ ವ್ಯಾಪಾರ ಭೀತಿ ವ್ಯಕ್ತವಾಗಿದೆ. ಪಕ್ಷದ ಶಾಸಕರನ್ನು ಹಿಡಿದಿಡಲು ಕಾಂಗ್ರೆಸ್ ಹೈಕಮಾಂಡ್ ತನ್ನ ಮೂವರು ನಾಯಕರನ್ನು ಹಿಮಾಚಲಕ್ಕೆ ಕಳಿಸಿಕೊಟ್ಟಿದೆ. ಇದರ ನಡುವಲ್ಲೇ ಶಾಸಕರನ್ನು ಛತ್ತೀಸ್‌ಗಢಕ್ಕೆ ಅಥವಾ ಚಂಡೀಗಢಕ್ಕೆ ಶಿಫ್ಟ್‌ ಮಾಡಲು ಕಾಂಗ್ರೆಸ್‌ ಮುಂದಾಗಿದೆ.

ಮಧ್ಯಾಹ್ನ 2.30ರ ವರೆಗಿನ ಫಲಿತಾಂಶದಲ್ಲಿ ಟ್ರೆಂಡ್‌ ಪ್ರಕಾರ ಕಾಂಗ್ರೆಸ್‌ 39, ಬಿಜೆಪಿ 25, ಇತರರು 5 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿ 68 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸುವುದು ನಿಚ್ಚಳವಾಗಿದೆ. 

ಪ್ರತಿ ಚುನಾವಣೆಯಲ್ಲಿಯೂ ಹಿಮಾಚಲದಲ್ಲಿ ಸರ್ಕಾರ ಬದಲಾಗುತ್ತಿದೆ. ಹಲವು ಸಮೀಕ್ಷೆಗಳು ಬಿಜೆಪಿಗೆ ಈ ಬಾರಿ ಹಿನ್ನಡೆ ಮತ್ತು ಅಲ್ಪ ಬಹುಮತ ಸಿಗಬಹುದು ಎಂದು ಭವಿಷ್ಯ ನುಡಿದಿದ್ದವು. 2017ರ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನ ಗಳಿಸಿದ್ದರೆ, ಕಾಂಗ್ರೆಸ್‌ 21 ಸ್ಥಾನ ಪಡೆದಿತ್ತು. ಮುಖ್ಯಮಂತ್ರಿ ಜೈರಾಮ್ ಠಾಕೂರ್ ನೇತೃತ್ವದಲ್ಲಿ ಚುನಾವಣೆ ನಡೆದರೂ, ಪ್ರಧಾನಿ ಮೋದಿ ತನಗೇ ವೋಟ್ ಹಾಕುವಂತೆ ಪ್ರಚಾರ ನಡೆಸಿದ್ದರು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಇದೇ ರಾಜ್ಯದವರಾಗಿದ್ದರಿಂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.‌ 

JP Nadda Himachal Visit: हिमाचल में दो दिन चुनावी हुंकार भरेंगे नड्डा,  जनप्रतिनिधियों से संवाद कर देंगे संदेश - JP Nadda Himachal Pradesh Visit  BJP President Will Attend Election ...

A look into PM Modi's packed schedule on his 72nd birthday | Mint

ಬಿಜೆಪಿ ಸರಕಾರದ ಬಗ್ಗೆ ಅಪಸ್ವರ ಇದ್ದರೂ, ಅಧ್ಯಕ್ಷ ನಡ್ಡಾ ಅದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಹಲವರು ದೂರು ಹೇಳಿಕೊಂಡಿದ್ದರೂ ಕ್ರಮ ಜರುಗಿಸಿರಲಿಲ್ಲ. ಇದೀಗ ಬಿಜೆಪಿ ನಾಯಕರು ಫಲಿತಾಂಶದಲ್ಲಿ ಬೆಲೆ ತೆತ್ತಿದ್ದಾರೆ.‌ ಕಾಂಗ್ರೆಸ್ ಮುನ್ನಡೆ ಆಗಿರುವುದರಿಂದ ಬಿಜೆಪಿ ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆಂಬ ಭೀತಿಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ.

Rahul Gandhi meets Congress veteran G-23 member Bhupinder Singh Hooda -  Oneindia News

Amid Nationwide Raids, Chhattisgarh Chief Minister Bhupesh Baghel's Warning  To Central Agencies

हिमाचल में 50 से ज्यादा सीटें जीतकर सरकार बनाने जा रही कांग्रेस : राजीव  शुक्ला - congress leader rajeev shukla-mobile

ಮೂಲಗಳ ಪ್ರಕಾರ ಆಡಳಿತಾರೂಢ ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿಯಿಂದ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದರ್ ಹೂಡಾ, ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಅವರನ್ನು ಶಿಮ್ಲಾಕ್ಕೆ ಕಳುಹಿಸಲಾಗಿದೆ.

The Congress is rushing Chhattisgarh Chief Minister Bhupesh Baghel who is also an observer for Himachal elections along with other senior leaders like Bhupinder Hooda and the party’s Congress in-charge Rajiv Shukla to the hill state, where the party seems likely to win. Baghel addressing reporters here today said there were apprehensions of poaching of Congress MLAs.