ಏಕರೂಪದ ನಾಗರಿಕ ಸಂಹಿತೆ ; ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರ ವಿರೋಧ ನಡುವೆಯೇ ಖಾಸಗಿ ಮಸೂದೆ ಮಂಡನೆ, ದೇಶಾದ್ಯಂತ ಮಸೂದೆ ಜಾರಿಗೆ ಚಿಂತನೆ

09-12-22 10:45 pm       HK News Desk   ದೇಶ - ವಿದೇಶ

ದೇಶಾದ್ಯಂತ ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿ ಮಸೂದೆ ಜಾರಿಗೆ ಕೇಂದ್ರ ಸರಕಾರ ಮುಂದಾಗಿದೆ. ಅದರ ಮೊದಲ ಪ್ರಯತ್ನವಾಗಿ ರಾಜ್ಯಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಕುರಿತ ಖಾಸಗಿ ಮಸೂದೆಯನ್ನು ಮಂಡನೆ ಮಾಡಲಾಗಿದೆ.

ನವದೆಹಲಿ, ಡಿ.9: ದೇಶಾದ್ಯಂತ ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿ ಮಸೂದೆ ಜಾರಿಗೆ ಕೇಂದ್ರ ಸರಕಾರ ಮುಂದಾಗಿದೆ. ಅದರ ಮೊದಲ ಪ್ರಯತ್ನವಾಗಿ ರಾಜ್ಯಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಕುರಿತ ಖಾಸಗಿ ಮಸೂದೆಯನ್ನು ಮಂಡನೆ ಮಾಡಲಾಗಿದೆ. ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ, ಪ್ರತಿಪಕ್ಷ ಸದಸ್ಯರ ವಿರೋಧದ ನಡುವೆಯೇ ಮಸೂದೆಯನ್ನು ಮಂಡಿಸಿದ್ದಾರೆ.

ಈ ಖಾಸಗಿ ಮಸೂದೆಯು ಏಕರೂಪ ನಾಗರಿಕ ಮಸೂದೆಯನ್ನು ರೂಪಿಸಲು ರಾಷ್ಟ್ರೀಯ ಪರಿಶೀಲನೆ ಮತ್ತು ತನಿಖಾ ಆಯೋಗಕ್ಕೆ ಸಾಂವಿಧಾನಿಕ ಅವಕಾಶ ನೀಡಲಿದೆ. ದೇಶಾದ್ಯಂತ ಈ ಮಸೂದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ವಿವಿಧ ಅಂಶಗಳನ್ನು ಒಳಗೊಳಿಸುವ ಬಗ್ಗೆ ಸಮಿತಿಯು ಚರ್ಚಿಸಲಿದೆ. ಖಾಸಗಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕರಿಸಲಾಯಿತು. ಮಸೂದೆ ಪರವಾಗಿ 63 ಹಾಗೂ ವಿರೋಧವಾಗಿ 23 ಮಂದಿ ಮತ ಚಲಾಯಿಸಿದ್ದಾರೆ. ಆದರೆ ಮಸೂದೆ ಕುರಿತ ಚರ್ಚೆ ಮತ್ತು ಧ್ವನಿಮತದ ಅಂಗೀಕಾರ ಸಂದರ್ಭದಲ್ಲಿ ವಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳ ಸದಸ್ಯರು ಸಂಸತ್ತಿನಲ್ಲಿ ಇರಲಿಲ್ಲ. ಬಿಜೆಡಿ, ಜೆಡಿಯು ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

Hindu Fascism 101: What is the RSS? | by Alliance for Justice and  Accountability | Medium

ವಿಪಕ್ಷ ಸದಸ್ಯರು ಈ ರೀತಿಯ ಮಸೂದೆಯು ದೇಶದ ಜಾತ್ಯತೀತ ತತ್ವಗಳಿಗೆ ಧಕ್ಕೆ ತರಲಿದೆ ಎಂದು ಹೇಳಿದ್ದಾರೆ. ನಿಮಗೆ ಮೆಜಾರಿಟಿ ಇದೆಯೆಂದು ಆರೆಸ್ಸೆಸ್ ಸಿದ್ಧಾಂತವನ್ನು ದೇಶಕ್ಕೆ ಹೇರುವುದನ್ನು ಮಾಡಬೇಡಿ. ಈಗಾಗಲೇ ಕಾಶ್ಮೀರವನ್ನು ಮುಗಿಸಿ ಬಿಟ್ಟಿದ್ದೀರಿ. ಇಂತಹ ನಡೆಗಳಿಂದ ಅಲ್ಪಸಂಖ್ಯಾತರನ್ನು ದೇಶದಿಂದ ವಿಭಜಿಸುತ್ತೀರಿ. ಅವರನ್ನು ಭೀತಿಯಿಂದ ಬದುಕುವಂತೆ ಮಾಡುತ್ತೀರಿ ಎಂದು ಎಂಡಿಎಂಕೆಯ ವೈಕೋ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಪಿಐ ಸದಸ್ಯ ಎಳಮರ ಕರೀಂ, ಈ ಮಸೂದೆ ದೇಶವನ್ನು ಸುಡಲಿದೆ, ಮತ್ತೆ ವಿಭಜನೆ ಹಾದಿಯತ್ತ ದೂಡಲಿದೆ ಎಂದು ಹೇಳಿದ್ದಾರೆ.

Uniform Civil Code Bill: ವಿರೋಧದ ನಡುವೆಯೇ ರಾಜ್ಯಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ  ಮಸೂದೆ ಮಂಡನೆ-uproar in rajya sabha after private member s bill on uniform  civil code introduced

ಏನಿದು ಏಕರೂಪದ ನಾಗರಿಕ ಸಂಹಿತೆ

ಏಕರೂಪದ ನಾಗರಿಕ ಸಂಹಿತೆ ದೇಶಾದ್ಯಂತ ಜಾರಿಗೆ ಬಂದಲ್ಲಿ ಅಲ್ಪಸಂಖ್ಯಾತರ ಕೆಲವು ನಿರ್ದಿಷ್ಟ ಸ್ವಾತಂತ್ರ್ಯಗಳಿಗೆ ಕಡಿವಾಣ ಬೀಳಲಿದೆ. ಮುಸ್ಲಿಮರು ನಾಲ್ಕು ಮದುವೆಯಾಗಬಹುದು ಎನ್ನುವ ಮುಸ್ಲಿಂ ವೈಯಕ್ತಿಕ ಕಾನೂನು ಇಲ್ಲಿ ಅನ್ವಯ ಆಗಲ್ಲ. ಜನಸಂಖ್ಯಾ ನೀತಿ ತರಬೇಕೆಂಬ ಒತ್ತಡಕ್ಕೆ ಪರೋಕ್ಷವಾಗಿ ಈ ಮಸೂದೆ ಉತ್ತರ ನೀಡಲಿದೆ. ಹಿಂದು, ಮುಸ್ಲಿಂ, ಕ್ರಿಸ್ತಿಯನ್, ಪಾರ್ಸಿ ಸಮುದಾಯದ ಮಂದಿ ಮದುವೆ, ವೈಯಕ್ತಿಕ ಹಕ್ಕುಗಳ ವಿಚಾರದಲ್ಲಿ ಒಂದೇ ನಿಯಮವನ್ನು ಅನುಸರಿಸಬೇಕಾಗುತ್ತದೆ.

Gujarat poll results: Spike in BJP vote share does not match with number of  the seats it won

ಬಿಜೆಪಿ ಪ್ರತಿ ಚುನಾವಣೆಯ ಸಂದರ್ಭದಲ್ಲೂ ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಈ ಕಾನೂನು ತರುವುದಕ್ಕಾಗಿ ಈಗಾಗಲೇ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆದಿದೆ. ಮಧ್ಯಪ್ರದೇಶದಲ್ಲಿ ಮಸೂದೆ ಜಾರಿ ನಿಟ್ಟಿನಲ್ಲಿ ಡಿ.2ರಂದು ಪ್ರಸ್ತಾವನೆ ಮಂಡಿಸಲಾಗಿದೆ.

Private member’s Bill to provide for the constitution of the National Inspection and Investigation Committee for preparation of the Uniform Civil Code and its implementation across the country was introduced in Rajya Sabha today. The Uniform Civil Code Bill 2022 was moved by BJP MP Dr. Kirodi Lal Meena.  During division, 63 members of the House voted in favour of the introduction of the Bill while 23 voted against it.  Several opposition MPs objected to the introduction of the Bill. Left MPs described it as against the Constitution and demanded its withdrawal.