ಕಾಂಗೋ ರಾಜಧಾನಿ ಕಿನ್ಶಾಸದಲ್ಲಿ ರಣಚಂಡಿ ಮಳೆ ; ಭೂಕುಸಿತಕ್ಕೆ 120ಕ್ಕೂ ಹೆಚ್ಚು ಮಂದಿ ಬಲಿ !

14-12-22 01:10 pm       HK News Desk   ದೇಶ - ವಿದೇಶ

ಭಾರೀ ಮಳೆ ಹಾಗೂ ಪ್ರವಾಹದಿಂದ ಭೂಕುಸಿತ ಉಂಟಾಗಿ 120 ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ರಾಜಧಾನಿ ಕಿನ್ಶಾಸದಲ್ಲಿ ನಡೆದಿದೆ.

ಕಾಂಗೋ, ಡಿ.14: ಭಾರೀ ಮಳೆ ಹಾಗೂ ಪ್ರವಾಹದಿಂದ ಭೂಕುಸಿತ ಉಂಟಾಗಿ 120 ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ರಾಜಧಾನಿ ಕಿನ್ಶಾಸದಲ್ಲಿ ನಡೆದಿದೆ.

ಭಾರೀ ಮಳೆಯಿಂದ ಪ್ರವಾಹ ಉಂಟಾಗಿದ್ದು, ರಸ್ತೆಗಳು ಕೆಸರುಮಯವಾಗಿದೆ. ಮನೆಗಳೆಲ್ಲಾ ಮುಳುಗಿ, ಭೂಕುಸಿತ ಉಂಟಾಗಿದೆ ಇದರ ಪರಿಣಾಮ 120 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಕಿನ್ಶಾಸದಿಂದ ಮಟಾಡಿಯ ಮುಖ್ಯ ಬಂದರಿಗೆ ಸಂಪರ್ಕಿಸುವ ರಸ್ತೆ ಅಲ್ಲಲ್ಲಿ ಕುಸಿತ ಉಂಟಾಗಿದ್ದು. ಈ ರಸ್ತೆಯನ್ನು 3-4 ದಿನಗಳ ಕಾಲ ಬಂದ್ ಮಾಡಲಾಗುತ್ತದೆ ಎಂದು ಅಲ್ಲಿನ ಪ್ರಧಾನ ಮಂತ್ರಿ ಕಚೇರಿ ಹೇಳಿದೆ.

Floods kill at least 120 in Congolese capital | Reuters

At least 120 killed as floods sweep DR Congo capital | Climate Crisis News  | Al Jazeera

At least 120 killed as floods sweep DR Congo capital | Climate Crisis News  | Al Jazeera

ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. 2009 ರಲ್ಲಿ ಕಿನ್ಶಾಸ ಸುತ್ತಮುತ್ತ ಇದೇ ರೀತಿಯ ಭೀಕರ ಪ್ರವಾಹ ಹಾಗೂ ಭೂಕುಸಿತ ಉಂಟಾಗಿತ್ತು. ಅದರಲ್ಲಿ 32 ಜನ ಸಾವನ್ನಪ್ಪಿದ್ದರು. ನಾಪತ್ತೆಯಾದ ಜನರ ಪತ್ತೆ ಹಾಗೂ ರಕ್ಷಣಾ ಕಾರ್ಯ ಸಾಗುತ್ತಿದೆ.

At least 120 people have been killed in the Democratic Republic of Congo capital Kinshasa after heavy rains unleashed floods and caused landslides, a government document seen by Reuters showed on Tuesday.