ಶ್ರದ್ದಾ ವಾಲ್ಕರ್ ಹತ್ಯೆ ಪ್ರಕರಣ ; ಕಾಡಿನಲ್ಲಿ ಸಿಕ್ಕ ಎಲುಬು ಆಕೆಯದ್ದೇ ಎಂದು ಡಿಎನ್ಎ ಪರೀಕ್ಷೆಯಲ್ಲಿ ಪತ್ತೆ, ಅಫ್ತಾಬ್ ಕೃತ್ಯಕ್ಕೆ ಸಾಕ್ಷ್ಯ ತೋರಿಸಿದ ಫಾರೆನ್ಸಿಕ್ ತಜ್ಞರು! 

15-12-22 10:26 pm       HK News Desk   ದೇಶ - ವಿದೇಶ

ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಫಾರೆನ್ಸಿಕ್ ಸೈನ್ಸ್ ಲ್ಯಾಬ್ ದೆಹಲಿ ಪೊಲೀಸರಿಗೆ ವರದಿ ನೀಡಿದೆ. ಮೆಹ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದ ಶ್ರದ್ಧಾ ವಾಲ್ಕರ್ ನದ್ದು ಎನ್ನಲಾದ ಎಲುಬು ತುಂಡುಗಳನ್ನು ಆಕೆಯ ತಂದೆಯ ಡಿಎನ್ಎ ಜೊತೆಗೆ ಪರೀಕ್ಷೆಗೆ ಒಳಪಡಿಸಿದ್ದು, ಪಾಸಿಟಿವ್ ತೋರಿಸಿದೆ. ಅಲ್ಲದೆ, ಪಾಲಿಗ್ರಾಫ್ ಪರೀಕ್ಷೆಯಲ್ಲಿ ಆರೋಪಿ ಅಫ್ತಾಬ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂಬುದಾಗಿಯೂ ವರದಿ ನೀಡಿದೆ.

ನವದೆಹಲಿ, ಡಿ.15: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಫಾರೆನ್ಸಿಕ್ ಸೈನ್ಸ್ ಲ್ಯಾಬ್ ದೆಹಲಿ ಪೊಲೀಸರಿಗೆ ವರದಿ ನೀಡಿದೆ. ಮೆಹ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದ ಶ್ರದ್ಧಾ ವಾಲ್ಕರ್ ನದ್ದು ಎನ್ನಲಾದ ಎಲುಬು ತುಂಡುಗಳನ್ನು ಆಕೆಯ ತಂದೆಯ ಡಿಎನ್ಎ ಜೊತೆಗೆ ಪರೀಕ್ಷೆಗೆ ಒಳಪಡಿಸಿದ್ದು, ಪಾಸಿಟಿವ್ ತೋರಿಸಿದೆ. ಅಲ್ಲದೆ, ಪಾಲಿಗ್ರಾಫ್ ಪರೀಕ್ಷೆಯಲ್ಲಿ ಆರೋಪಿ ಅಫ್ತಾಬ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂಬುದಾಗಿಯೂ ವರದಿ ನೀಡಿದೆ.

ಕಳೆದ ನವೆಂಬರ್ 12ರಂದು ಕೃತ್ಯ ಬೆಳಕಿಗೆ ಬಂದ ಬಳಿಕ ಶ್ರದ್ಧಾ ವಾಲ್ಕರ್ ದೇಹವನ್ನು 35 ಪೀಸ್ ಮಾಡಿ ಹಲವು ಕಡೆ ಎಸೆದಿದ್ದಾಗಿ ಆರೋಪಿ ನೀಡಿದ್ದ ಹೇಳಿಕೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಇದರ ಬೆನ್ನಲ್ಲೇ ಪೊಲೀಸರು ಆತನನ್ನು ವಿವಿಧ ಕಡೆಗಳಿಗೆ ಒಯ್ದು ಆಕೆಯ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದರು. ಮೆಹ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನ ಪ್ರದೇಶದಲ್ಲಿ ಕೆಲವು ಎಲುಬು ತುಂಡುಗಳು ಸಿಕ್ಕಿದ್ದವು. ದೇಹದ ಭಾಗಗಳನ್ನು ತುಂಡರಿಸಿ, ಫ್ರಿಡ್ಜ್ ನಲ್ಲಿಟ್ಟು ಒಂದೊಂದೇ ತುಂಡುಗಳನ್ನು ರಾತ್ರಿ ವೇಳೆ ಹೊರಗೊಯ್ದು ಎಸೆದು ಬರುತ್ತಿದ್ದ ಎನ್ನಲಾಗಿತ್ತು.

shraddha murder case update bone fragments were found in mehrauli forests  matched with fathers dna | Shraddha Murder Case: महरौली के जंगलों में मिली  हड्डियां श्रद्धा की निकलीं, पिता के DNA से

ಮೇ 18ರಂದು ಕೊಲೆ ಕೃತ್ಯ ನಡೆದು ಎರಡು ವಾರ ಕಾಲ ಶವದ ತುಂಡುಗಳನ್ನು ತನ್ನದೇ ಮನೆಯಲ್ಲಿಟ್ಟು ಹೊರಗೆ ಬಿಸಾಕಿ ವಿಲೇವಾರಿ ಮಾಡಿದ್ದರಿಂದ ಶವದ ಪತ್ತೆ ಸಾಧ್ಯವಾಗಿರಲಿಲ್ಲ. ಆದರೆ ಕೃತ್ಯ ನಡೆದಿದ್ದ ಮನೆಯಲ್ಲಿ ರಕ್ತದ ಕಲೆಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇದಲ್ಲದೆ, ವೈಜ್ಞಾನಿಕ ಸಾಕ್ಷ್ಯಗಳ ಕಲೆಹಾಕಿದ್ದರು. ಈ ನಡುವೆ, ವಿವಿಧ ಕಡೆಗಳಲ್ಲಿ ದೊರೆತಿದ್ದ 13 ಎಲುಬು ತುಂಡುಗಳನ್ನು ಆಕೆಯ ತಂದೆಯ ಡಿಎನ್ಎ ಜೊತೆಗೆ ತಾಳೆ ಹಾಕಿ ನೋಡಿದ್ದಾರೆ. ಡಿಎನ್ಎ ಟೆಸ್ಟ್ ನಲ್ಲಿ ಅದು ಆಕೆಯದ್ದೇ ಎಲುಬು ಎನ್ನುವುದು ಕಂಡುಬಂದಿದೆ.

DNA from recovered bones match with Shraddha Walkar's father; police to  address media soon

ಈ ನಡುವೆ, ಆರೋಪಿಯನ್ನು ಪಾಲಿಗ್ರಾಫ್ ಮತ್ತು ನಾರ್ಕೋ ಅನಾಲಿಸಿಸ್ ಪರೀಕ್ಷೆಗೂ ಫಾರೆನ್ಸಿಕ್ ತಜ್ಞರು ಒಳಪಡಿಸಿದ್ದಾರೆ. ಅದರಲ್ಲಿ ಕೃತ್ಯವನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆಂದು ವರದಿ ನೀಡಿದ್ದಾರೆ. ಆದರೆ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪ ಭಾವನೆ ಆತನಿಗೆ ಇಲ್ಲವೆಂದು ವರದಿಯಲ್ಲಿ ಹೇಳಿದ್ದಾರೆ.

Few bones that recovered from Delhi’s Mehrauli and Gurugram forest matched the DNA of Shraddha Walkar’s father, news agency ANI reported quoting sources. The forensic lab matched the blood clot and bones to Shraddha’s father Vikas Walkar’s DNA sample.  Some of the bone and blood samples recovered in the tiles of the flat rented by Shraddha and her live-in partner, accused Aaftab Poonawala, are also being tested. The DNA test report of the victim’s body parts has not been received by police yet.