ಅಮೇರಿಕಾದಲ್ಲಿ "ಬಾಂಬ್ ಸೈಕ್ಲೋನ್", ಮೊಂಟಾನಾದಲ್ಲಿ - 45 ಡಿಗ್ರಿ ಸೆಲ್ಸಿಯಸ್ ತಾಪಮಾನ ; ಮಳೆ, ಚಳಿ, ಗಾಳಿಗೆ ಜನತೆ ಗಡಗಡ !

24-12-22 06:51 pm       HK News Desk   ದೇಶ - ವಿದೇಶ

ಕ್ರಿಸ್‌ಮಸ್ ರಜೆಯನ್ನು ಸಂಭ್ರಮದಿಂದ ಕಳೆಯಲು ಬಯಸಿದ್ದ ಅಮೆರಿಕನ್ನರ ಬಯಕೆಯನ್ನು 'ಬಾಂಬ್ ಸೈಕ್ಲೋನ್' ನುಚ್ಚುನೂರು ಮಾಡಿದೆ. ಐತಿಹಾಸಿಕ ಚಳಿಗಾಲದ ಬಿರುಗಾಳಿಯು ಲಕ್ಷಾಂತರ ಜನರು ಮನೆಯಿಂದ ಹೊರಗೆ ಬಾರದಂತೆ ಮಾಡಿದೆ.

ಕ್ಯಾಲಿಫೋರ್ನಿಯಾ, ಡಿ.24: ಕ್ರಿಸ್‌ಮಸ್ ರಜೆಯನ್ನು ಸಂಭ್ರಮದಿಂದ ಕಳೆಯಲು ಬಯಸಿದ್ದ ಅಮೆರಿಕನ್ನರ ಬಯಕೆಯನ್ನು 'ಬಾಂಬ್ ಸೈಕ್ಲೋನ್' ನುಚ್ಚುನೂರು ಮಾಡಿದೆ. ಐತಿಹಾಸಿಕ ಚಳಿಗಾಲದ ಬಿರುಗಾಳಿಯು ಲಕ್ಷಾಂತರ ಜನರು ಮನೆಯಿಂದ ಹೊರಗೆ ಬಾರದಂತೆ ಮಾಡಿದೆ. ಗಡಗಡ ನಡುಗುವ ಚಳಿ, ಭಾರಿ ಬಿರುಗಾಳಿ ಮಳೆಯಿಂದ ತತ್ತರಿಸಿರುವ ಜನರಿಗೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮ ಕಹಿಯಾಗಿ ಪರಿಣಮಿಸಿದೆ.

14 ಲಕ್ಷಕ್ಕೂ ಹೆಚ್ಚಿನ ಮನೆಗಳು ಮತ್ತು ಉದ್ಯಮಗಳು ಬಾಂಬ್ ಸೈಕ್ಲೋನ್ ಕಾರಣದಿಂದ ತೀವ್ರ ಹೊಡೆತ ಅನುಭವಿಸಿವೆ. ಸಂಪರ್ಕ ಕಡಿತ, ವಿದ್ಯುತ್ ಅಭಾವ ಮತ್ತು ತಾಪಮಾನ ಕುಸಿತದ ಸಂಕಷ್ಟ ಜನರನ್ನು ಕಂಗಾಲಾಗಿಸಿದೆ. ಪೂರ್ವ ಅಮೆರಿಕದಲ್ಲಿ ಚಂಡಮಾರುತದ ಹಾವಳಿ ವಿಪರೀತವಾಗಿದೆ. ಭಾರಿ ವೇಗವಾಗಿ ಬೀಸುತ್ತಿರುವ ಗಾಳಿಯು ಮರಗಳು ಹಾಗೂ ವಿದ್ಯುತ್ ಕಂಬಗಳನ್ನು ಧರೆಗುರುಳಿಸಿವೆ.

Arctic 'bomb cyclone' threatens holiday travel for millions of Americans -  SABC News - Breaking news, special reports, world, business, sport coverage  of all South African current events. Africa's news leader.

Arctic 'bomb cyclone' threatens holiday travel for millions of Americans

Arctic 'bomb cyclone' threatens holiday travel for millions of Americans |  Reuters

ಅಮೆರಿಕದ ಪಶ್ಚಿಮ ರಾಜ್ಯ ಮೊಂಟಾನಾದಲ್ಲಿ ತಾಪಮಾನ -45 ಡಿಗ್ರಿಗೆ ಕುಸಿದಿದೆ. ಚಂಡಮಾರುತದ ಅಬ್ಬರದಿಂದಾಗಿ ಎಲ್ಲ ಕೇಂದ್ರ ರಾಜ್ಯಗಳಲ್ಲಿ ಉಷ್ಣಾಂಶ ಭಾರಿ ಕುಸಿತ ಕಂಡಿದೆ. ಡೆಸ್ ಮೋಯಿನ್ಸ್, ಲೋವಾದಂತಹ ಸ್ಥಳಗಳಲ್ಲಿ ತಾಪಮಾನ -37 ಫ್ಯಾರನ್ ಹೀಟ್ ದಾಖಲಾಗಿದೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.

ಹತ್ತು ಲಕ್ಷಕ್ಕೂ ಅಧಿಕ ಜನರು ಸಂಪರ್ಕ ಕಡಿತ ಹಾಗೂ ವಿದ್ಯುತ್ ಕಡಿತ ಅನುಭವಿಸುತ್ತಿದ್ದಾರೆ. ಕಗ್ಗತ್ತಲಿನಲ್ಲಿ ದಿನಗಳನ್ನು ದೂಡುವಂತಾಗಿದೆ. ಹವಾಮಾನ ವೈಪರೀತ್ಯದ ಕಾರಣ 3,000ಕ್ಕೂ ಹೆಚ್ಚು ವಿಮಾನಗಳು ವಿಮಾನ ನಿಲ್ದಾಣದಿಂದ ಹೊರಡುವ ಸ್ಥಿತಿಯಲ್ಲಿಲ್ಲ. ಉತ್ತರ ಕ್ಯಾರೋಲಿನಾ, ವರ್ಜೀನಿಯಾ ಮತ್ತು ಟೆನ್ನೆಸ್ಸೀಗಳಲ್ಲಿ ಸೈಕ್ಲೋನ್ ಬಾಂಬ್ ಕಾರಣದಿಂದ ವ್ಯಾಪಕ ಸಂಪರ್ಕ ಕಡಿತ ಉಂಟಾಗಿದೆ.

Arctic 'bomb cyclone' threatens holiday travel for millions of Americans |  U.S. & World | gazette.com

Arctic 'bomb cyclone' threatens holiday travel for millions of Americans |  U.S. & World | gazette.com

ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ಶುಕ್ರವಾರ 13ಕ್ಕೆ ಏರಿಕೆಯಾಗಿದೆ. ಓಹಿಯೋದಲ್ಲಿ ಹವಾಮಾನ ಸಂಬಂಧಿ ಘಟನೆಗಳಿಂದ 9 ಮಂದಿ ಮೃತಪಟ್ಟಿದ್ದರೆ, ರಸ್ತೆ ಅಪಘಾತದಲ್ಲಿ ನಾಲ್ವರು ಬಲಿಯಾಗಿದ್ದಾರೆ. ಓಹಿಯೋದಲ್ಲಿ ರಸ್ತೆಗಳ ಸ್ಥಿತಿ ಅಪಾಯಕಾರಿಯಾಗಿದೆ. ಹೀಗಾಗಿ ಮನೆಯೊಳಗೇ ಜಾಗ್ರತೆಯಿಂದ ಇರಿ ಎಂದು ಜನರಿಗೆ ಸೂಚನೆ ನೀಡಲಾಗಿದೆ.

Arctic 'bomb cyclone' grips US, sparking Biden warning | South China  Morning Post

At below -40°C, Arctic 'bomb cyclone' to hit US; people warned of 'life- threatening cold'; Threatens holiday travel for millions of Americans — The  Indian Panorama

Brutal 'bomb cyclone' could put much of US in deep freeze for Christmas  holidays

ಚಂಡಮಾರುತದ ಕಾರಣದಿಂದ ತಾಪಮಾನದಲ್ಲಿ ಭಾರಿ ಏರಿಳಿತ ಉಂಟಾಗುತ್ತಿದೆ ಎಂದಿರುವ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್, ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. "ಮಂಜು, ಹಿಮ, ಪ್ರವಾಹ, ಮರಗಟ್ಟಿಸುವ ತಾಪಮಾನ- ಹೀಗೆ ಪ್ರಕೃತಿ ಮಾತೆಯು ಈ ವಾರಾಂತ್ಯದಲ್ಲಿ ಎಲ್ಲವನ್ನೂ ಅಪ್ಪಳಿಸುತ್ತಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ತಾಪಮಾನ ವೇಗವಾಗಿ ಕುಸಿಯುತ್ತಿರುವುದರಿಂದ ಮಳೆ ನೀರು ಹಿಮವಾಗಿ ಬದಲಾಗುತ್ತಿದೆ. ರಾಜ್ಯದ ಇತರೆ ಭಾಗಗಳಲ್ಲಿ ಪ್ರವಾಹದ ಅಪಾಯ ಉಂಟಾಗಿದೆ. ಇದು ಜೀವ ಬೆದರಿಕೆಯ ಸನ್ನಿವೇಶ" ಎಂದು ಅವರು ಹೇಳಿದ್ದಾರೆ.

A dangerously frigid arctic air mass gripped a vast expanse of the United States on Thursday as a looming winter storm of historic proportions threatened to upend travel plans for millions of Americans.