ಬ್ಯಾಂಕಾಕ್ - ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರ ನಡುವೆ ಮಾರಾಮಾರಿ ; ವಿಡಿಯೊ ವೈರಲ್

29-12-22 01:19 pm       HK News Desk   ದೇಶ - ವಿದೇಶ

ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರು ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಈ ಘಟನೆ ನಡೆದಿದೆ.

ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರು ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರು ಘಟನೆಯನ್ನು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋದಲ್ಲಿ ಇಬ್ಬರು ಪುರುಷರು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ಜೊತೆಗೆ ವಿಮಾನದ ಸಿಬ್ಬಂದಿಗಳು ಪರಿಸ್ಥಿತಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ.

Bangkok Kolkata flight mid air fight turns physical passengers hit viral  video Thai Smile Airways | India News – India TV

ಪುರುಷರಲ್ಲಿ ಒಬ್ಬರು "ಶಾಂತಿ ಸೆ ಬಾತ್" (ಸದ್ದಿಲ್ಲದೆ ಕುಳಿತುಕೊಳ್ಳಿ) ಎಂದು ಹೇಳುವುದನ್ನು ಕೇಳಬಹುದು. ಆದರೆ ಇನ್ನೊಬ್ಬರು "ಹಾತ್ ನೀಚೆ ಕರ್" (ನಿಮ್ಮ ಕೈಯನ್ನು ಕೆಳಕ್ಕೆ ಇರಿಸಿ) ಎಂದು ಹೇಳುತ್ತಾರೆ. ಕೆಲವೇ ಸೆಕೆಂಡುಗಳಲ್ಲಿ ಈ ಮಾತುಗಳು ವಿಕೋಪಕ್ಕೆ ತಿರುಗಿ ದೈಹಿಕ ಹಲ್ಲೆ ನಡೆಯುತ್ತದೆ. ಪ್ರಯಾಣಿಕನ ಮೇಲೆ ಹಲವಾರು ಪ್ರಯಾಣಿಕರು ಹಲ್ಲೆ ಮಾಡುತ್ತಾರೆ.

Seat reclined during taxiing phase of Bangkok-Kolkata flight leads to fight  onboard - Times of India

ವ್ಯಕ್ತಿ ತನ್ನ ಕನ್ನಡಕವನ್ನು ತೆಗೆದು ನಂತರ ಇನ್ನೊಬ್ಬ ವ್ಯಕ್ತಿಗೆ ಹೊಡೆಯುವುದನ್ನು ಕಾಣಬಹುದು. ವ್ಯಕ್ತಿಯ ಸ್ನೇಹಿತರು ಜಗಳಕ್ಕೆ ಸೇರುತ್ತಾರೆ. ಹೊಡೆಸಿಕೊಳ್ಳುವ ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಮಾತ್ರ ಕಾಣಬಹುದು.

News, Breaking News, Latest News, News Headlines, Live News, Today News  CNN-News18

ಕೆಲವು ಫ್ಲೈಟ್ ಅಟೆಂಡೆಂಟ್‌ಗಳು ಇಬ್ಬರನ್ನು ಜಗಳವನ್ನು ತಡೆಯಲು ಪ್ರಯತ್ನಿಸುತ್ತಾರೆ. ಮೊದಲು ಸಹ-ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಜಗಳವನ್ನು ನಿಲ್ಲಿಸುವಂತೆ ವ್ಯಕ್ತಿಯನ್ನು ಕೇಳಿಕೊಳ್ಳುತ್ತಾರೆ. ಆದರೆ ಪ್ರಯಾಣಿಕರು ಅವರ ಮಾತನ್ನು ಕೇಳುವುದಿಲ್ಲ. ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಥಾಯ್ ಸ್ಮೈಲ್ ಏರ್‌ವೇಸ್ ಈ ಸಮಸ್ಯೆಗೆ ಪ್ರತಿಕ್ರಿಯಿಸಿಲ್ಲ ಮತ್ತು ಅಪರಾಧಿಗಳ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ.

The Bureau of Civil Aviation Security, an organisation that monitors aviation security, has taken cognisance of a viral video that showed passengers engaged in a brawl on a Bangkok-Kolkata flight. It has sought a detailed report of the incident.