ಬ್ರೇಕಿಂಗ್ ನ್ಯೂಸ್
30-12-22 02:45 pm HK News Desk ದೇಶ - ವಿದೇಶ
ಬ್ರೆಜಿಲ್, ಡಿ.30: ಫುಟ್ಬಾಲ್ ದಂತಕಥೆ ಪೀಲೆ ಎಂದೇ ಖ್ಯಾತರಾಗಿದ್ದ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ(82) ಗುರುವಾರ ರಾತ್ರಿ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾರೆ.
ಫುಟ್‌ಬಾಲ್‌ನ ಗ್ರೇಟ್ ಆಫ್ ಆಲ್ ಟೈಮ್(GOAT) ಎಂದೇ ಕರೆಯಲ್ವಡುತ್ತಿದ್ದ, ಜಾಗತಿಕ ಕಾಲ್ಚೆಂಡಿನ ಕ್ರೀಡಾ ಹೀರೋ ಆಗಿ ಆಭಿಮಾನಿಗಳ ಹೃದಯ ಗೆದ್ದಿದ್ದ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ ಬ್ರೆಜಿಲ್‌ನ ಮಾಜಿ ಕ್ರೀಡಾ ಸಚಿವರಾಗಿಯೂ ಸೇವೆ ಮಾಡಿದ್ದಾರೆ.
ಪುಟ್ಬಾಲ್ನ್ನು ಒಂದು ಸುಂದರ ಕ್ರೀಡೆಯಾಗಿಸಿದ ಕಾಲ್ಚೆಂಡಿನ ದಿಗ್ಗಜ, ಗ್ಯಾಸೋಲಿನಾ, ದಿ ಬ್ಲ್ಯಾಕ್ ಪರ್ಲ್ ಮತ್ತು ಓ ರೇ (ದಿ ಕಿಂಗ್) ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಪೀಲೆ ಎಂದೇ ಹೆಸರಾಗಿದ್ದ 82 ವರ್ಷದ ಎಡ್ಸನ್ ಗುರುವಾರ ರಾತ್ರಿ ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಕರುಳಿನ ಕ್ಯಾನ್ಸರ್‌ನಿಂದ ನಿಧನರಾದರು.
ಫುಟ್ಬಾಲ್‌ನ ಮಾಸ್ಟರ್ ಮೈಂಡ್ ಎನಿಸಿದ್ದ ಪೀಲೆ ಮೂರು ಬಾರಿ ವಿಶ್ವಕಪ್ ಗೆದ್ದಿದ್ದರು. ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕೀಮೋಥೆರಪಿ ಬಳಿಕ ಶ್ವಾಸಕೋಶ ಸೋಂಕಿನಿಂದ ಉಸಿರಾಟದ ತೊಂದರೆ ಅನುಭವಿಸಿದ್ದರು. ಮೂರು ಸಲ ವಿವಾಹವಾಗಿದ್ದ ಪೀಲೆಗೆ ಒಟ್ಟು 7 ಮಕ್ಕಳಿದ್ದಾರೆ. ಬ್ರೆಜಿಲ್‌ನ ಸ್ಟಾರ್ ಆಟಗಾರರಾಗಿದ್ದ ಅವರು, ಅಲ್ಲಿನ ಆರಾಧ್ಯದೈವ ಕೂಡಾ ಆಗಿದ್ದರು.
ಮಗಳ ಕಣ್ಣೀರ ವಿದಾಯ: 'ನಾವೆಲ್ಲರೂ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ನಾವು ನಿಮ್ಮನ್ನು ಅನಂತವಾಗಿ ಪ್ರೀತಿಸುತ್ತೇವೆ. ಶಾಂತಿಯಿಂದ ವಿಶ್ರಾಂತಿ ಪಡೆಯಿರಿ' ಎಂದು ಮಗಳು ಕೆಲಿ ನಾಸಿಮೆಂಟೊ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಅಕ್ಟೋಬರ್ 23, 1940 ರಂದು ಬ್ರೆಜಿಲ್‌ನ ಟ್ರೆಸ್ ಕೊರಾಕೋಸ್‌ನಲ್ಲಿ ಜನಿಸಿದ ಪೀಲೆ 92 ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಸೆಲೆಕಾವೊ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದರು. ಶ್ರೇಷ್ಠ ಆಟಗಾರ ಪೀಲೆ ಅವರ ನಿಧನಕ್ಕೆ ಜಗತ್ತಿನ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಪೀಲೆ ಆರಂಭ: ಬ್ರೆಸಿಲಿಯಾದ ಫುಟ್ಬಾಲ್ ಕ್ಲಬ್ ಸ್ಯಾಂಟೋಸ್ ಮತ್ತು ಬ್ರೆಜಿಲ್‌ನ ರಾಷ್ಟ್ರೀಯ ತಂಡದೊಂದಿಗೆ ಸುಮಾರು 2 ದಶಕಗಳ ಕಾಲ ಆಡಿ ಅಭಿಮಾನಿಗಳನ್ನು ಗೆದ್ದಿದ್ದರು. ಪೀಲೆ 650 ಲೀಗ್ ಮತ್ತು 1,281 ಸೀನಿಯರ್ ಪಂದ್ಯಗಳಿಂದಾಗಿ 'ಕಾಲ್ಚೆಂಡಿನ ಕಿಂಗ್' ಎಂದು ಕರೆಸಿಕೊಂಡರು. ಪೀಲೆ 17ನೇ ವಯಸ್ಸಿನಲ್ಲಿ ಅಂದರೆ 1958ರಲ್ಲಿ ಸ್ವೀಡನ್ನಲ್ಲಿ ನಡೆದ ವಿಶ್ವಕಪ್ ಮೂಲಕ ಪದಾರ್ಪಣೆ ಮಾಡಿದರು.
ಬ್ರಿಟನ್ ರಾಣಿಯಿಂದ ಪ್ರತಿಷ್ಠಿತ ನೈಟ್ ಪದವಿಗೆ 1997ರಲ್ಲಿ ಪಿಲೆ ಭಾಜರಾದರು. 92 ಅಂತಾರಾಷ್ಟ್ರೀಯ ಪಮದ್ಯಗಳಲ್ಲಿ 77 ಗೋಲುಗಳನ್ನು ಗಳಿಸಿದ್ದಾರೆ. ಎಲ್ಲ ಕ್ಲಬ್ಗಳನ್ನು ಸೇರಿಸಿ 840 ಪಂದ್ಯಗಳನ್ನಾಡಿದ್ದು 775 ಗೋಲುಗಳು ಇವರ ಹೆಸರಿನಲ್ಲಿದೆ. 100ಕ್ಕೂ ಹೆಚ್ಚು ಬಾರಿ ಹ್ಯಾಟ್ರಿಕ್ ಪಡೆದ ಆಟಗಾರನೂ ಹೌದು.
ಪೀಲೆ 1958, 1962, 1972 ರಲ್ಲಿ ಬ್ರೆಜಿಲ್ಗೆ ಫುಟ್ಬಾಲ್ ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ. ಮೂರು ವಿಶ್ವಕಪ್ ಗೆದ್ದ ಆಟಗಾರ ಎಂಬ ಖ್ಯಾತಿ ಇನ್ನೂ ಪೀಲೆ ಹೆಸರಿನಲ್ಲೇ ಇದೆ. 1999 ರಲ್ಲಿ ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿಯಿಂದ ಶತಮಾನದ ಅಥ್ಲೀಟ್ ಎಂದು ಹೆಸರಿಸರಿಸಿದೆ. ಫುಟ್‌ಬಾಲ್‌ನ ವಿಶ್ವ ಆಡಳಿತ ಮಂಡಳಿಯಾದ ಫಿಫಾ ಶ್ರೇಷ್ಠ ಆಟಗಾರ ಎಂಬ ಹೆಸರಿನಿಂದ ಕರೆದಿದೆ.
ಟೈಮ್ ಮ್ಯಾಗಜೀನ್‌ನ 20 ನೇ ಶತಮಾನದ 100 ಶ್ರೇಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ ಗುರುತಿಸಿದೆ. ಪೀಲೆ 2000 ರಲ್ಲಿ ವಿಶ್ವ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫುಟ್ಬಾಲ್ ಹಿಸ್ಟರಿ & ಸ್ಟ್ಯಾಟಿಸ್ಟಿಕ್ಸ್ (IFFHS) ನಿಂದ ಶತಮಾನ ಮತ್ತು ಫಿಫಾ ಪ್ಲೇಯರ್ ಆಫ್ ದಿ ಸೆಂಚುರಿ ಪ್ರಶಸ್ತಿಯ ಇಬ್ಬರು ಜಂಟಿ ವಿಜೇತರಲ್ಲಿ ಪೀಲೆ ಕೂಡ ಒಬ್ಬರು.
ಪೀಲೆ 1994 ರಿಂದ ಯುನೆಸ್ಕೋ (UNESCO) ದ ಸದ್ಭಾವನಾ ರಾಯಭಾರಿಯಾಗಿದ್ದರು. 1995 ರಲ್ಲಿ, ಬ್ರೆಜಿಲಿಯನ್ ಅಧ್ಯಕ್ಷ ಫರ್ನಾಂಡೋ ಹೆನ್ರಿಕ್ ಕಾರ್ಡೋಸೊ ಅವರು ಪೀಲೆ ಅವರನ್ನು ಕ್ರೀಡೆಯ ಅಸಾಮಾನ್ಯ ಸಚಿವ ಸ್ಥಾನಕ್ಕೆ ನೇಮಿಸಿದರು. ಬ್ರೆಜಿಲಿಯನ್ ಫುಟ್‌ಬಾಲ್‌ನಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಶಾಸನವನ್ನು ಪ್ರಸ್ತಾಪಿಸಲು ಅವರು ಬಳಸಿಕೊಂಡರು, ಇದನ್ನು ಈಗ ಪೀಲೆ ಲಾ ಎಂದು ಕರೆಯಲಾಗುತ್ತದೆ.
ಬಹುಮುಖಿ ವ್ಯಕ್ತಿತ್ವ, ಪೀಲೆ ಅವರ ಆತ್ಮಕಥೆಗಳನ್ನು ಒಳಗೊಂಡಂತೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದ ಹಾಲಿವುಡ್ ಫ್ಲಿಕ್, ಎಸ್ಕೇಪ್ ಟು ವಿಕ್ಟರಿ, ಇದರಲ್ಲಿ ಸಿಲ್ವೆಸ್ಟರ್ ಸ್ಟಾಲೋನ್ ಮತ್ತು ಮೈಕೆಲ್ ಕೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ಬ್ರೆಜಿಲಿಯನ್ ಚಲನಚಿತ್ರಗಳು, ದೂರದರ್ಶನ ಧಾರಾವಾಹಿಗಳು ಮತ್ತು ಸಾಕ್ಷ್ಯಚಿತ್ರಗಳಲ್ಲಿ ನಟಿಸಿದ್ದಾರೆ.
Pele, the legendary Brazilian footballer, has died at the age of 82, according to a statement by his agent. Former Santos FC star had been hospitalized at Sao Paulo's Albert Einstein Israelite Hospital since November 29. Pale had been battling colon cancer for the last two years. A medical report just before Christmas revealed that Pale required treatment for cardiac and renal dysfunction.
22-12-24 10:23 am
HK News Desk
Bangalore Volvo Car Accident: ಕೋಟಿ ಬೆಲೆಯ ಕಾರಿ...
21-12-24 09:28 pm
CT Ravi Released: ಸಿ.ಟಿ.ರವಿ ಬಂಧನ ಖಂಡಿಸಿ ರಾಜ್ಯ...
20-12-24 10:43 pm
C T Ravi Arrested, Minister Lakshmi Hebbalkar...
19-12-24 08:05 pm
Chikkamagaluru, Elephant Attack: ಚಿಕ್ಕಮಗಳೂರಲ್...
19-12-24 06:36 pm
20-12-24 05:01 pm
HK News Desk
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡ...
18-12-24 10:37 pm
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
22-12-24 06:04 pm
Udupi Correspondent
Celebrate Christmas and New Year in Style wit...
22-12-24 12:33 am
Mangalore Heli Tourism: ಮಂಗಳೂರು ನಗರ ದರ್ಶನಕ್ಕೆ...
21-12-24 08:16 pm
Praveen Nettaru Murder, NIA Arrest: ಪ್ರವೀಣ್ ನ...
21-12-24 11:30 am
Anil Lobo MCC Bank Arrest, Court: ಬ್ಯಾಂಕ್ ಸಾಲ...
20-12-24 09:48 pm
22-12-24 07:23 pm
Bangalore Correspondent
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm
Puttur, Gold Robbery, Mangalore Crime: ಪುತ್ತೂ...
21-12-24 07:45 pm
Mangalore, Fraud case, Odisha: ನಕಲಿ ಷೇರು ಮಾರು...
21-12-24 06:24 pm
Kodagu Fake Gold Bank Case; ಕೇರಳದಲ್ಲಿ ನಕಲಿ ಚಿ...
20-12-24 08:20 pm