ಜಮ್ಮುನಲ್ಲಿ ಮತ್ತೆ ಉಗ್ರರ ಅಟ್ಟಹಾಸ ; 12 ಗಂಟೆಗಳಲ್ಲಿ 2ನೇ ಬಾರಿ ದಾಳಿ, ಐಇಡಿ ಸ್ಫೋಟಕ್ಕೆ ಮಗು ಬಲಿ, 7 ಮಂದಿಗೆ ಗಾಯ !

02-01-23 07:49 pm       HK News Desk   ದೇಶ - ವಿದೇಶ

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ನಾಲ್ವರು ಸಾವನಪ್ಪಿದ್ದಾರೆ. 

ಶ್ರೀನಗರ, ಜ.2  : ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಸೋಮವಾರ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು 12 ಗಂಟೆಗಳಲ್ಲಿ 2ನೇ ಬಾರಿ ದಾಳಿ ನಡೆಸಿ ದ್ದಾರೆ. ಐಇಡಿ ಸ್ಫೋಟದಲ್ಲಿ ಮಗು ಸಾವನ್ನಪ್ಪಿದೆ.

ಇಂದು ಸಂಭವಿಸಿದ ಸ್ಫೋಟದಲ್ಲಿ ಒಂದು ಮಗು ಸಾವನ್ನಪ್ಪಿ 7 ಜನರು ಗಾಯಗೊಂಡಿದ್ದಾರೆ.

ಐಇಡಿಯನ್ನು ಗೋಣಿ ಚೀಲದ ಕೆಳಗೆ ಇಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಇಬ್ಬರು ಉಗ್ರರು ಇರುವ ಬಗ್ಗೆ ಮಾಹಿತಿ ಲಭಿಸಿದ್ದು ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು ಶೋಧ ಕಾರ್ಯ ನಡೆಯುತ್ತಿದೆ.

Ied Blast At Civilian'S Home In J-K'S Rajouri Day After Terrorist Attack, Child  Killed, Several Injured

Terror attack targeting Hindus in Jammu's Rajouri and the subsequent  explosion: Read details

Rajouri Terrorist Attack: Blast Near Victim's House. Child Dead, 5 Injured.  Protest Held — Top Developments

ಭಾನುವಾರ ರಜೌರಿಯ ಅಪ್ಪರ್ ಧಂಗ್ರಿ ಗ್ರಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 5 ಮಂದಿ ಬಲಿಯಾಗಿದ್ದರು. ಸ್ಥಳಕ್ಕೆ ಎನ್‌ಐಎ ತಂಡ ಭೇಟಿ ನೀಡಲಿದೆ.

ನಿರಂತರ ದಾಳಿ ಬಳಿಕ ಸ್ಥಳೀಯರು ಲೆಫ್ಟಿನೆಂಟ್ ಗವರ್ನರ್ ಮತ್ತು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

One child was killed and seven people were injured after another improvised explosive device (IED) blast took place in Jammu and Kashmir’s Rajouri district on Monday. The explosion happened a day after four people were killed in a suspected terrorist attack in the same area.