ಜಮ್ಮುನಲ್ಲಿ ಉಗ್ರರ ಅಟ್ಟಹಾಸದ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿಗಳ ಮನೆ ಬಳಿ ಬಾಂಬ್ ಪತ್ತೆ ; ಭಾರತೀಯ ಸೇನೆಯಿಂದ ತನಿಖೆ ! 

02-01-23 08:03 pm       HK News Desk   ದೇಶ - ವಿದೇಶ

ಚಂಡೀಗಢದಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಬಳಿ ಇಂದು ಸ್ಫೋಟಕ ಸಾಧನ ಎಂದು ಭಾವಿಸಲಾದ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದೆ.

ಚಂಡೀಗಢ, ಜ.2 : ಚಂಡೀಗಢದಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಬಳಿ ಇಂದು ಸ್ಫೋಟಕ ಸಾಧನ ಎಂದು ಭಾವಿಸಲಾದ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದೆ.

ಪಂಜಾಬ್ ಮುಖ್ಯಮಂತ್ರಿ ನಿವಾಸದ ಬಳಿಯಿರುವ ಹೆಲಿಪ್ಯಾಡ್‌ನಿಂದ ಕೆಲವೇ ದೂರದಲ್ಲಿ ಬಾಂಬ್ ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ತಂಡ ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Bomb Found Near Punjab CM Bhagwant Mann's Residence

Bomb found near Punjab CM Bhagwant Mann's house in Chandigarh

ಸೋಮವಾರ ಸಂಜೆ 4 ರಿಂದ 4:30 ರ ಸುಮಾರಿಗೆ, ಕೊಳವೆಬಾವಿ ನಿರ್ವಾಹಕರು ಪಂಜಾಬ್ ಮುಖ್ಯಮಂತ್ರಿಯವರ ನಿವಾಸದ ಬಳಿಯ ಮಾವಿನ ತೋಟದಲ್ಲಿ ಜೀವಂತ ಬಾಂಬ್ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಕ್ಷಣಾ ಪಡೆಗಳು ಬಾಂಬ್ ಪತ್ತೆಯಾದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

A suspicious object, presumed to be an explosive device, was today found near Punjab Chief Minister Bhagwant Mann's residence in Chandigarh. A bomb disposal squad was immediately dispatched to the spot, which is a short distance from a helipad used by the Punjab Chief Minister. The Indian Army's Western Command has also been looped in to investigate.