ಬಂದೂಕುಧಾರಿಗಳಿಂದ ಮೆಕ್ಸಿಕೋ  ಜೈಲಿನ ಮೇಲೆ ಗುಂಡಿನ ದಾಳಿ: 14 ಮಂದಿ ಬಲಿ, ಹೊಸ ವರ್ಷದ ದಿನವೇ ದುರಂತ ! 

02-01-23 08:59 pm       HK News Desk   ದೇಶ - ವಿದೇಶ

ಬಂದೂಕುಧಾರಿಗಳು ಜೈಲಿನ ಮೇಲೆ ಗುಂಡಿನ ದಾಳಿ ಮಾಡಿ 14 ಜನರನ್ನು ಹತ್ಯೆಗೈದಿರುವ ಘಟನೆ ಮೆಕ್ಸಿಕೋದ ಜುವಾರೆಜ್ ನಲ್ಲಿ ನಡೆದಿದೆ. 

ಮೆಕ್ಸಿಕೋ, ಜ.2 : ಬಂದೂಕುಧಾರಿಗಳು ಜೈಲಿನ ಮೇಲೆ ಗುಂಡಿನ ದಾಳಿ ಮಾಡಿ 14 ಜನರನ್ನು ಹತ್ಯೆಗೈದಿರುವ ಘಟನೆ ಮೆಕ್ಸಿಕೋದ ಜುವಾರೆಜ್ ನಲ್ಲಿ ನಡೆದಿದೆ. 

ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ವಾಹನದಲ್ಲಿ ಬಂದ ವ್ಯಕ್ತಿಗಳು ಜೈಲಿನ ಮೇಲೆ ಗುಂಡು ಹಾರಿಸಿದ್ದಾರೆ.

ಕೈದಿಗಳು,ಭದ್ರತಾ ಸಿಬ್ಬಂದಿಗಳು ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಓಡುವ ಭರದಲ್ಲಿ 14 ಮಂದಿ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. 

14 killed after gunmen in armoured vehicles open fire at Mexico state prison  - The Week

10 ಮಂದಿ ಸಿಬ್ಬಂದಿಗಳು, ನಾಲ್ವರು ಕೈದಿಗಳು ಮೃತಪಟ್ಟಿದ್ದು, 24 ಮಂದಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ಪೊಲೀಸರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೈದಿ ಹಾಗೂ ಸಿಬ್ಬಂದಿಗಳು ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಮೆಕ್ಸಿಕನ್ ಜೈಲಿನಲ್ಲಿ ಕಳೆದ ಆಗಸ್ಟ್‌ ನಲ್ಲಿ ಈ ರೀತಿಯ ಘಟನೆ ನಡೆದಿತ್ತು. ಆ ಘಟನೆಯಲ್ಲಿ 11 ಜನ ಮೃತಪಟ್ಟಿದ್ದರು.

ಈ ಸಂಬಂಧ ನಾಲ್ವರನ್ನು ಪೊಲೀಸರು ಸೆರೆ ಹಿಡಿದು  ತನಿಖೆ ನಡೆಸುತ್ತಿದ್ದಾರೆ.

Ten guards and four inmates were killed early Sunday when gunmen in armoured vehicles attacked a state prison in Ciudad Juarez across the border from El Paso, Texas, according to state officials. The Chihuahua state prosecutor's office said in a statement that around 7 a.m. various armoured vehicles arrived at the prison and gunmen opened fire on guards. In addition to those killed, 13 people were wounded and at least 24 inmates escaped.