ಕಳಸಾ ಬಂಡೂರಿ ಯೋಜನೆಗೆ ಅಂಕಿತ, ಗೋವಾಕ್ಕೆ ಅನ್ಯಾಯ ; ಅನುಮತಿ ರದ್ದುಪಡಿಸದಿದ್ದರೆ ರಾಜಿನಾಮೆ- ಸಚಿವ ಶ್ರೀಪಾದ ನಾಯ್ಕ್ ಎಚ್ಚರಿಕೆ

02-01-23 09:39 pm       HK News Desk   ದೇಶ - ವಿದೇಶ

ಕಳಸಾ-ಬಂಡೂರಿ ಕುಡಿಯುವ ನೀರು ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಕರ್ನಾಟಕಕ್ಕೆ ನೀಡಿರುವ ಅನುಮೋದನೆ ಹಿಂಪಡೆಯದೇ ಇದ್ದರೆ, ತಾನು ರಾಜೀನಾಮೆ ನೀಡಲು ಸಿದ್ಧ ಎಂದು ಕೇಂದ್ರ ಬಂದರು, ಹಡಗು, ಜಲಮಾರ್ಗ ಹಾಗೂ ಪ್ರವಾಸೋದ್ಯಮ ಖಾತೆಯ ಸಹಾಯಕ ಸಚಿವ ಶ್ರೀಪಾದ ನಾಯ್ಕ್ ಹೇಳಿದ್ದಾರೆ. 

ಪಣಜಿ, ಜ.2 : ಕಳಸಾ-ಬಂಡೂರಿ ಕುಡಿಯುವ ನೀರು ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಕರ್ನಾಟಕಕ್ಕೆ ನೀಡಿರುವ ಅನುಮೋದನೆ ಹಿಂಪಡೆಯದೇ ಇದ್ದರೆ, ತಾನು ರಾಜೀನಾಮೆ ನೀಡಲು ಸಿದ್ಧ ಎಂದು ಕೇಂದ್ರ ಬಂದರು, ಹಡಗು, ಜಲಮಾರ್ಗ ಹಾಗೂ ಪ್ರವಾಸೋದ್ಯಮ ಖಾತೆಯ ಸಹಾಯಕ ಸಚಿವ ಶ್ರೀಪಾದ ನಾಯ್ಕ್ ಹೇಳಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಬಗ್ಗೆ ಕರ್ನಾಟಕ ಸಲ್ಲಿಸಿರುವ ಡಿಪಿಆರ್ ಗೆ ಅನುಮೋದನೆ ನೀಡುವ ಮುನ್ನ ಕೇಂದ್ರ ಸರಕಾರ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಗೋವಾದ ಹಿತಾಸಕ್ತಿಯನ್ನು ಕೇಂದ್ರ ಸರಕಾರ ರಕ್ಷಿಸದೇ ಇದ್ದರೆ, ತಾನು ರಾಜೀನಾಮೆ ನೀಡಲು ಹಿಂಜರಿಯಲಾರೆ ಎಂದವರು ಹೇಳಿದ್ದಾರೆ.

''ನಾವೆಲ್ಲರೂ ಈ ನಿರ್ಧಾರವನ್ನು ವಿರೋಧಿಸುತ್ತೇವೆ. ಮಹಾದಾಯಿ ನದಿಗೆ ಸಂಬಂಧಿಸಿ ಗೋವಾದ ಹಿತಾಸಕ್ತಿ ಕಾಪಾಡಲು ಈ ನಿರ್ಧಾರ ಹಿಂಪಡೆಯುವಂತೆ ಕೇಂದ್ರವನ್ನು ಆಗ್ರಹಿಸಲು ರಾಜಕೀಯ ಬದಿಗಿರಿಸಿ ಸಂಘಟಿತರಾಗುವಂತೆ ತಾನು ಎಲ್ಲ ಪ್ರತಿಪಕ್ಷಗಳ ನಾಯಕರನ್ನು ಆಗ್ರಹಿಸುತ್ತೇನೆ'' ಎಂದರು.

ಅಲ್ಲದೆ, ಈ ಅನುಮೋದನೆಯನ್ನು ಹಿಂಪಡೆಯುವಂತೆ ತಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಿದ್ದೇನೆ ಎಂದು ನಾಯ್ಕ್ ತಿಳಿಸಿದ್ದಾರೆ. ಗೋವಾ ಹಾಗೂ ಮಹಾರಾಷ್ಟ್ರದ ವಿರೋಧವನ್ನು ಎದುರಿಸುತ್ತಿರುವ ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಯ ಡಿಪಿಆರ್ ಅನ್ನು ಕೇಂದ್ರ ಅನುಮೋದಿಸಿರುವುದರಿಂದ ಗೋವಾದ ಜನರಿಗೆ ಅನ್ಯಾಯವಾಗಿದೆ ಎಂದವರು ಹೇಳಿದರು.

Union Minister of State for Ports, Shipping, Waterways and Tourism, Shripad Naik on Saturday said that he is ready to resign if the state’s detailed project report (DPR) approval granted to Karnataka for the Kalasa Bhanduri drinking water project is not withdrawn.