ಬ್ರೇಕಿಂಗ್ ನ್ಯೂಸ್
03-01-23 10:38 am HK News Desk ದೇಶ - ವಿದೇಶ
ನವದೆಹಲಿ, ಜ.3: ಕೇಂದ್ರ ಸರಕಾರದ ನೋಟು ಅಮಾನ್ಯ ನಿರ್ಣಯದ ಬಗ್ಗೆ ಸುಪ್ರೀಂ ಕೋರ್ಟ್ ನಿನ್ನೆಯಷ್ಟೆ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ರಿಸರ್ವ್ ಬ್ಯಾಂಕ್, ದೇಶದ ನೋಟು ಚಲಾವಣೆ ಬಗ್ಗೆ ಆರ್ಬಿಐ ವರದಿ ನೀಡಿದ್ದು ನೋಟು ರದ್ದತಿಯ 6 ವರ್ಷಗಳ ಬಳಿಕವೂ ದೇಶದಲ್ಲಿ ನಗದು ಚಲಾವಣೆಯೇ ಮುಂಚೂಣಿಯಲ್ಲಿದೆ ಎಂದಿದೆ. 6 ವರ್ಷದಲ್ಲಿ ಸಾರ್ವಜನಿಕರ ನಗದು ಬಳಕೆಯ ಪ್ರಮಾಣ ಶೇ. 83ಕ್ಕೆ ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ವರದಿಯಲ್ಲಿ ತಿಳಿಸಿದೆ.
ಈ ಕುರಿತ ದತ್ತಾಂಶಗಳನ್ನು ಆರ್‌ಬಿಐ ಬಿಡುಗಡೆಗೊಳಿಸಿದ್ದು, ನೋಟು ರದ್ದತಿಗೆ ಮುನ್ನ ಅಂದರೆ, 2016ರ ನ.4ರ ಸಮಯಕ್ಕೆ ದೇಶದಲ್ಲಿ 17.74 ಲಕ್ಷ ಕೋಟಿ ರೂ. ನಗದು ಚಲಾವಣೆಯಲ್ಲಿತ್ತು. ಈಗ ಇದರ ಮೌಲ್ಯ ದ್ವಿಗುಣಗೊಂಡಿದ್ದು, 2022ರ ಡಿ.23ರ ವೇಳೆಗೆ ದೇಶದಲ್ಲಿ 32.42 ಲಕ್ಷ ಕೋಟಿ ರೂ. ಮೌಲ್ಯದ ನಗದು ಚಲಾವಣೆಯಲ್ಲಿದೆ ಎಂದು ತಿಳಿಸಿದೆ.

ನೋಟು ಅಮಾನ್ಯದ ಬಳಿಕವೂ ದೇಶದಲ್ಲಿ ನಕಲಿ ನೋಟುಗಳ ಮುದ್ರಣ ಸಮಸ್ಯೆ ಮುಂದುವರಿದಿರುವುದನ್ನು ವರದಿ ಸೂಚ್ಯವಾಗಿ ತಿಳಿಸಿದೆ. ಹೀಗಾಗಿಯೇ ಆರ್ಬಿಐ ಮುದ್ರಿತ ನೋಟುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಕಲಿ ನೋಟುಗಳೇ ಚಲಾವಣೆಯಲ್ಲಿವೆ. 2016ರಿಂದ ಈವರೆಗೆ 245.33 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ದೇಶಾದ್ಯಂತ ವಶಪಡಿಸಲಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿ ಆರ್‌ಬಿ) ತಿಳಿಸಿದೆ.
ನೋಟ್ ರದ್ದತಿ ಆದ ವರ್ಷದಲ್ಲಿ 15.92 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು, 2020ರಲ್ಲಿ 92.17 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿತ್ತು.
The Supreme Court on Monday held that the 2016 demonetisation exercise did not suffer from any flaws in the decision-making process. The records were produced by the Central government and the Reserve Bank of India (RBI) on the petitioners’ insistence that the court would not be able to satisfy itself without examining those documents.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm