ಬರೋಬ್ಬರಿ 300 ಅಡಿಯಿಂದ ಬಂಡೆಗಳಿರುವ ಪ್ರಪಾತಕ್ಕೆ ಬಿದ್ದ ಟೆಸ್ಲಾ ಕಾರು ; ನಾಲ್ವರು ಅಪಾಯದಿಂದ ಪಾರು 

04-01-23 01:17 pm       HK News Desk   ದೇಶ - ವಿದೇಶ

ಕುಟುಂಬವೊಂದು ಪ್ರಯಾಣಿಸುತ್ತಿದ್ದ ಟೆಸ್ಲಾ ಕಾರು ಬರೋಬ್ಬರಿ 300 ಅಡಿಯಿಂದ ಬಂಡೆಗಳಿರುವ ಪ್ರಪಾತಕ್ಕೆ ಬಿದ್ದಿದೆ. ಆದರೂ ಕಾರಿನಲ್ಲಿದ್ದ ನಾಲ್ವರ ಜೀವಕ್ಕೆ ಅಪಾಯವಿಲ್ಲದೇ ಬದುಕುಳಿದಿರುವ ಘಟನೆ ವರದಿಯಾಗಿದೆ.

ಕ್ಯಾಲಿಫೋರ್ನಿಯಾ, ಜ.4 : ಕುಟುಂಬವೊಂದು ಪ್ರಯಾಣಿಸುತ್ತಿದ್ದ ಟೆಸ್ಲಾ ಕಾರು ಬರೋಬ್ಬರಿ 300 ಅಡಿಯಿಂದ ಬಂಡೆಗಳಿರುವ ಪ್ರಪಾತಕ್ಕೆ ಬಿದ್ದಿದೆ. ಆದರೂ ಕಾರಿನಲ್ಲಿದ್ದ ನಾಲ್ವರ ಜೀವಕ್ಕೆ ಅಪಾಯವಿಲ್ಲದೇ ಬದುಕುಳಿದಿರುವ ಘಟನೆ ವರದಿಯಾಗಿದೆ.

ಕ್ಯಾಲಿಫೊರ್ನಿಯ ಸನಿಹದ ಸಮುದ್ರ ತೀರದಲ್ಲಿರುವ ಡೆವಿಲ್ ಸ್ಲೈಡ್ ಎಂಬ ಕಡಿದಾದ ಬೆಟ್ಟಗುಡ್ಡದ ಪ್ರದೇಶದಲ್ಲಿ ಕುಟುಂಬವೊಂದು ಟೆಸ್ಲಾ ಕಾರಿನಲ್ಲಿ ಪ್ರಯಾಣಿಸುತ್ತಿತ್ತು.

ಈ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು 300 ಅಡಿ ಪ್ರಪಾತಕ್ಕೆ ಬಿದ್ದಿದೆ.

Family-of-four miraculously SURVIVE after Tesla they are driving plunges  250-feet | Daily Mail Online

ಇದರಿಂದ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಹಾಗೂ ಇಬ್ಬರು ವಯಸ್ಕರರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸುದ್ದಿ ತಿಳಿದು ಪರಿಹಾರ ಕಾರ್ಯಾಚರಣೆ ತಂಡ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಏರ್ ಲಿಫ್ಟ್‌ ಮಾಡಿದ್ದಾರೆ.

Family-of-four miraculously SURVIVE after Tesla they are driving plunges  250-feet | Daily Mail Online

ಕ್ಯಾಲಿಪೋರ್ನಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ಜೀವಕ್ಕೆ ಅಪಾಯವಿಲ್ಲವೆಂದು ವೈದ್ಯರು ತಿಳಿಸಿರುವುದಾಗಿ ಫಾಕ್ಸ್‌ ನ್ಯೂಸ್ ವರದಿ ಮಾಡಿದೆ.

ಘಟನೆ ಸಂದರ್ಭದಲ್ಲಿ ಕಾರು ಅತ್ಯಂತ ಭಯಾನಕವಾಗಿ ಹಾನಿಯಾಗಿದೆ. ಆದರೂ ಪವಾಡಸದೃಶ್ಯವಾಗಿ ಕಾರಿನಲ್ಲಿದ್ದವರು ಬದಕುಳಿದ್ದಿದ್ದಾರೆ.

Family-of-four miraculously SURVIVE after Tesla they are driving plunges  250-feet | Daily Mail Online

ಹೆಲಿಕಾಪ್ಟರ್‌ನಲ್ಲಿ ಪರಿಹಾರ ಕಾರ್ಯಾಚರಣೆ ತಂಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನೆಟ್ಟಿಗರು ಇದೊಂದು ವಿಷ್ಮಯವೇ ಸರಿ! ಎಂದು ಉದ್ಘಾರ ತೆಗೆದಿದ್ದಾರೆ.

The driver of a Tesla that fell 300 feet over an infamous California cliff has been charged with attempted murder and child abuse. Two children and one woman were also inside the car at the time. Dharmesh Arvind Patel, 40, was arrested on Monday at Stanford Hospital, per an arrest report by the California Highway Patrol that was shared with PEOPLE.