ಬ್ರೇಕಿಂಗ್ ನ್ಯೂಸ್
09-01-23 01:27 pm HK News Desk ದೇಶ - ವಿದೇಶ
ಮುಂಬೈ, ಜ.9 : ಟೀಮ್ ಇಂಡಿಯಾದ ಬ್ಯಾಟಿಂಗ್ ತಾರೆ ಸೂರ್ಯ ಕುಮಾರ್ ಯಾದವ್ ಮೂಲತಃ ಉತ್ತರ ಪ್ರದೇಶದವರು. ಕ್ರಿಕೆಟ್ ಬದುಕು ಕಟ್ಟಿಕೊಂಡದ್ದು ಮುಂಬೈನಲ್ಲಿ. ಉತ್ತರ ಪ್ರದೇಶದಲ್ಲಿ ಹುಟ್ಟಿ ಮುಂಬೈನಲ್ಲಿ ಕ್ರಿಕೆಟ್ ತಾರೆಯಾಗಿ ಬೆಳೆದಿರುವ ಸೂರ್ಯ ಕುಮಾರ್ ಯಾದವ್ “ತುಳುನಾಡಿನ ಅಳಿಯ” ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶನಿವಾರ ನಡೆದ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್, ಕೇವಲ 51 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸಿ ಭಾರತಕ್ಕೆ ಸರಣಿ ಗೆಲುವು ತಂದುಕೊಟ್ಟಿದ್ದರು. ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಕನ್ನಡಿಗ, ಮಂಗಳೂರು ಮೂಲದ ಕೆ.ಎಲ್ ರಾಹುಲ್ ಸೂರ್ಯನ ಶತಕಕ್ಕೆ ತುಳು ಭಾಷೆಯಲ್ಲಿ ಶಹಬ್ಬಾಸ್ ಹೇಳಿದ್ದಾರೆ.


ಸೂರ್ಯ ಕುಮಾರ್ ಉದ್ದೇಶಿಸಿ ರಾಹುಲ್, ''ಬಾರಿ ಎಡ್ಡೆ ಗೊಬ್ಬಿಯ'' ಎಂದು ಇನ್'ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ತುಳುವಿನಲ್ಲಿ ''ಬಾರಿ ಎಡ್ಡೆ ಗೊಬ್ಬಿಯ'' ಎಂದರೆ ''ತುಂಬಾ ಚೆನ್ನಾಗಿ ಆಡಿದೆ'' ಎಂದರ್ಥ. ದೇಶೀಯ ಮಟ್ಟದಲ್ಲಿ ತುಳು ಭಾಷೆಗೆ ಮಾನ್ಯತೆ ಇಲ್ಲ. ಸೂರ್ಯ ಕುಮಾರ್ ಆಗಲೀ, ಕ್ರಿಕೆಟ್ ಸಂಗಡಿಗರಾಗಲೀ ತುಳುವಿನ ಬಗ್ಗೆ ತಿಳಿದವರೂ ಅಲ್ಲ. ಆದರೆ, ತುಳು ಭಾಷಿಗ ಕೆ.ಎಲ್. ರಾಹುಲ್, ಈ ರೀತಿ ಹೇಳುವ ಮೂಲಕ ತನ್ನ ಭಾಷಾ ಪ್ರೇಮವನ್ನು ಮೆರೆದಿದ್ದಲ್ಲದೆ, ಆತನ ತುಳುನಾಡಿನ ನಂಟನ್ನೂ ತೆರೆದಿಟ್ಟಿದ್ದಾರೆ. ಇದಕ್ಕೆ ಕಾರಣವಾಗಿದ್ದು ಸೂರ್ಯ ಕುಮಾರ್ ಯಾದವ್ ಅವರ ಪತ್ನಿ ಮಂಗಳೂರು ಮೂಕದ ದೇವಿಶಾ ಶೆಟ್ಟಿ ತುಳುವಿನಲ್ಲೇ ಪ್ರತಿಕ್ರಿಯಿಸಿದ್ದು. “ಚೂರ್ ತುಳು ಕಲ್ಪಾವೊಡು ಆರೆಗ್ ನನ” (ಅವರಿಗೆ ಇನ್ನು ಸ್ವಲ್ಪ ತುಳು ಕಲಿಸಬೇಕು) ಎಂದು ದೇವಿಶಾ ಶೆಟ್ಟಿ, ಕೆಎಲ್ ರಾಹುಲ್ ಹಾಕಿದ್ದ ಇನ್’ಸ್ಟಾಗ್ರಾಂ ಪೋಸ್ಟ್ ಬಗ್ಗೆ ಕಮೆಂಡ್ ಹಾಕಿದ್ದರು. ಇದರ ಬೆನ್ನಲ್ಲೇ ರಾಹುಲ್ ಹಾಕಿದ್ದ ಪೋಸ್ಟ್ ಭಾರೀ ವೈರಲ್ ಆಗಿದೆ. ತುಳು ಭಾಷಿಗರೆಲ್ಲ ಈ ಪೋಸ್ಟ್ ಅನ್ನು ಮರು ಪೋಸ್ಟ್ ಮಾಡಿದ್ದಾರೆ.

ಸೂರ್ಯ ಕುಮಾರ್ ಪತ್ನಿ ದೇವಿಶಾ ಶೆಟ್ಟಿ ಕರಾವಳಿ ಮೂಲದವರು. ದೇವಿಶಾ ತಂದೆ ತಾಯಿ ತುಳುನಾಡಿನವರು. ಹೆತ್ತವರು ಮುಂಬೈನಲ್ಲಿ ನೆಲೆ ನಿಂತರೂ ತುಳು ಭಾಷೆ ಮಾತನಾಡುತ್ತಾರೆ. ಹೀಗಾಗಿ ಮಗಳಿಗೆ ತುಳುವೇ ಮಾತೃಭಾಷೆ. 2016ರಲ್ಲಿ ಮಂಗಳೂರು ಮೂಲ ದೇವಿಶಾ ಶೆಟ್ಟಿ ಅವರನ್ನು ಸೂರ್ಯ ಕುಮಾರ್ ಯಾದವ್ ಮದುವೆಯಾಗಿದ್ದರು. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾಗ ಇಬ್ಬರೂ ಪ್ರೀತಿಸಿ 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಸೂರ್ಯ ಕುಮಾರ್ ಯಾದವ್ ತುಳುನಾಡಿನ ಅಳಿಯ ಎಂಬ ವಿಚಾರ ತುಂಬಾ ಮಂದಿಗೆ ಗೊತ್ತಿರಲಿಲ್ಲ. ಇದೀಗ ಕೆ.ಎಲ್ ರಾಹುಲ್ ತುಳುವಿನಲ್ಲಿ ಮಾಡಿದ ಒಂದು ಇನ್’ಸ್ಟಾಗ್ರಾಂ ಪೋಸ್ಟ್ ತುಳುನಾಡಿನ ನಂಟನ್ನು ತೆರೆದಿಟ್ಟಿದೆ.
Team India's dynamic batter Suryakumar Yadav captivated onlookers with his batting exploits during the third and final T20I against Sri Lanka on Saturday, January 7. Yadav remained unbeaten on 112 off just 51 balls, taking the Men in Blue to a massive total of 228 in the crucial series decider at Rajkot. Several members of the cricket fraternity reacted to the swashbuckler's scintillating knock.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm