ಬ್ರೇಕಿಂಗ್ ನ್ಯೂಸ್
09-01-23 02:41 pm HK News Desk ದೇಶ - ವಿದೇಶ
ತೆಲಂಗಾಣ , ಜ.9 : ಅವರಿಬ್ಬರೂ ಒಡಹುಟ್ಟಿದ್ದವರು. ಆದರೆ, ಚಿಕ್ಕಂದಿನಿಂದಲೂ ಪ್ರಾಣ ಸ್ನೇಹಿತರಂತಿದ್ದರು. ಇವರಿಗೆ ಮತ್ತೊಬ್ಬ ಕಿರಿ ಸಹೋದರನೂ ಇದ್ದಾನೆ. ಉನ್ನತ ವ್ಯಾಸಂಗ ಮುಗಿಸಿ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದು ಹಬ್ಬ-ಹರಿದಿನಗಳಲ್ಲಿ ಒಂದೆಡೆ ಸೇರಿ ಸಂತಸದಿಂದ ಕಾಲ ಕಳೆಯುತ್ತಿದ್ದರು. ಈ ಸಂಕ್ರಾಂತಿಯನ್ನೂ ಖುಷಿಯಿಂದ ಆಚರಿಸಲು ಸಿದ್ಧತೆ ನಡೆಸುತ್ತಿರುವಾಗಲೇ ಇಬ್ಬರು ಸಹೋದರರ ಪ್ರಾಣಪಕ್ಷಿ ಹಾರಿ ಹೋಗಿದೆ.
ಹಿರಿ ಸಹೋದರನಿಗೆ ತನ್ನ ಮೊದಲನೇ ಕಿರಿ ಸಹೋದರನ ಅಕಾಲಿಕ ಮರಣವನ್ನು ಅರಗಿಸಿಕೊಳ್ಳಲಾಗಲಿಲ್ಲ. ತಮ್ಮನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಹಿರಿ ಸಹೋದರ ಅಳುತ್ತಾಲೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಕೆಲವೇ ಗಂಟೆಗಳಲ್ಲಿ ಸಹೋದರರಿಬ್ಬರೂ ಹೃದಯಾಘಾತದಿಂದ ಮೃತಪಟ್ಟಿದ್ದು ಕುಟುಂಬಸ್ಥರು, ಸಂಬಂಧಿಕರು ತೀವ್ರ ದುಃಖಿತರಾಗಿದ್ದರು. ಇಂಥದ್ದೊಂದು ಮನಕಲಕುವ ಘಟನೆ ಜಗಿತ್ಯಾಲ ಜಿಲ್ಲೆಯ ಮೆಟ್ಪಲ್ಲಿ ಪಟ್ಟಣದಲ್ಲಿ ನಡೆದಿದೆ.
ಸಂಬಂಧಿಕರು ಮತ್ತು ಸ್ಥಳೀಯರು ಹೇಳುವಂತೆ, ಮೆಟ್ಪಲ್ಲಿ ಪಟ್ಟಣದ ಬೋಗ ಭೂಷಣ್ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಹಿರಿಯ ಪುತ್ರ ಸಚಿನ್ (38) ಕೋರುಟ್ಲ ಪಟ್ಟಣದ ಕೆಡಿಸಿಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಎರಡನೇ ಮಗ ಶ್ರೀನಿವಾಸ್ (36) ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಮೂರನೇ ಮಗ ಅರವಿಂದ್ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀನಿವಾಸ್‌ಗೆ ಶನಿವಾರ ಹೈದರಾಬಾದ್‌ನಲ್ಲಿ ಹಠಾತ್ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟೊತ್ತಿಗಾಗಲೇ ಶ್ರೀನಿವಾಸ್ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು. ಈ ಸುದ್ದಿ ತಿಳಿದು ಶ್ರೀನಿವಾಸ್ ಪೋಷಕರು ಮತ್ತು ಸಂಬಂಧಿಕರು ಹೈದರಾಬಾದ್ಗೆ ತೆರಳಿದ್ದರು. ಶ್ರೀನಿವಾಸ್ನನ್ನು ನೋಡಿದ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಪೋಷಕರು ಮತ್ತು ಸಂಬಂಧಿಕರು ಶ್ರೀನಿವಾಸ್ ಮೃತದೇಹವನ್ನು ಸ್ವಗ್ರಾಮಕ್ಕೆ ತಂದು ಮುಂದಿನ ಕ್ರಾರ್ಯಕ್ರಮ ಕೈಗೊಂಡಿದ್ದರು. ಇತ್ತ ತನ್ನ ಸಹೋದರನ ಸಾವಿನ ಸುದ್ದಿ ಕೇಳಿದ ಸಚಿನ್ ಭಾವನಾತ್ಮಕವಾಗಿ ವಿಪರೀತ ನೋವು ಅನುಭವಿಸಿದ್ದರು. ಭಾನುವಾರ ಪಟ್ಟಣದಲ್ಲಿ ಅಂತಿಮ ಸಂಸ್ಕಾರ ನಡೆಸುತ್ತಿದ್ದಾಗಲೇ ಸಚಿನ್ ಮತ್ತಷ್ಟು ದುಃಖಿತರಾಗಿದ್ದರು. ಅಳುತ್ತಲೇ ಕುಸಿದು ಬಿದ್ದಿದ್ದರು. ಸಂಬಂಧಿಕರು ಮತ್ತು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಇತ್ತ ಪೋಷಕರು ಶ್ರೀನಿವಾಸ್ ಅಂತ್ಯಕ್ರಿಯೆ ನೆರವೇರಿಸಿ ಆಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಸಚಿನ್ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ತಿಳಿದ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮನಕಲಕುವಂತಿತ್ತು. ಕೆಲವೇ ಗಂಟೆಗಳಲ್ಲಿ ಇಬ್ಬರು ಪುತ್ರರನ್ನು ಕಳೆದುಕೊಂಡೆವಲ್ಲಾ ಎಂದು ಪೋಷಕರು ರೋದಿಸುತ್ತಿದ್ದರು. ಸಚಿನ್ ಅವರ ಅಂತ್ಯಸಂಸ್ಕಾರ ಮುಗಿಸಿದ ಪಾಲಕರು ಹಾಗೂ ಸಂಬಂಧಿಕರು ದುಃಖ ಮುಗಿಲು ಮುಟ್ಟಿತ್ತು. ಸಚಿನ್‌ಗೆ ಪತ್ನಿ ಇದ್ದಾರೆ. ಶ್ರೀನಿವಾಸ್ ಅವರಿಗೆ ಪತ್ನಿ ಜೊತೆ 14 ತಿಂಗಳ ಹೆಣ್ಣು ಮಗು ಇದೆ. ಎಲ್ಲರಿಗೂ ಆತ್ಮೀಯರಾಗಿದ್ದ ಅಣ್ಣ-ತಮ್ಮನ ದಿಢೀರ್ ಸಾವು ಗ್ರಾಮದಲ್ಲಿ ಸ್ಮಶಾನ ಮೌನ ಉಂಟುಮಾಡಿದೆ.
Elder brother dies during the last rites of the younger brother in Jagityala district telangana
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
21-12-25 08:55 pm
HK News Desk
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm