ಐಸಿಐಸಿಐ ಬ್ಯಾಂಕ್ ವಂಚನೆ  ಕೇಸ್ ; ಮಾಜಿ ಸಿಇಒ ಚಂದಾ ಕೊಚ್ಚರ್‌, ಪತಿಗೆ ಜಾಮೀನು ಮಂಜೂರು

09-01-23 06:46 pm       HK News Desk   ದೇಶ - ವಿದೇಶ

ವೀಡಿಯೋಕಾನ್‌ ಸಮೂಹಕ್ಕೆ ಸಾಲ ಮಂಜೂರಾತಿಯಲ್ಲಿ ಅಕ್ರಮ, ವಂಚನೆ ಆರೋಪದಡಿ ಬಂಧಿತರಾಗಿದ್ದ ಐಸಿಐಸಿಐ ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚರ್‌, ಪತಿ ದೀಪಕ್‌ ಕೊಚ್ಚರ್‌ ಅವರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಮುಂಬೈ, ಜ.9: ವೀಡಿಯೋಕಾನ್‌ ಸಮೂಹಕ್ಕೆ ಸಾಲ ಮಂಜೂರಾತಿಯಲ್ಲಿ ಅಕ್ರಮ, ವಂಚನೆ ಆರೋಪದಡಿ ಬಂಧಿತರಾಗಿದ್ದ ಐಸಿಐಸಿಐ ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚರ್‌, ಪತಿ ದೀಪಕ್‌ ಕೊಚ್ಚರ್‌ ಅವರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಸಿಬಿಐ ಈ ಪ್ರಕರಣದಲ್ಲಿ ನಮ್ಮನ್ನು ಅಕ್ರಮವಾಗಿ ಬಂಧಿಸಿದೆ ಎಂದು ಆರೋಪಿಸಿ ಚಂದಾ ಕೊಚ್ಚರ್‌, ಪತಿ ದೀಪಕ್‌ ಕೊಚ್ಚರ್‌ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದೇಶವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಕಾಯ್ದಿರಿಸಿತ್ತು.

Bombay High Court asks Maharashtra govt what steps it has taken to set up  more family courts - India Today

ಸೋಮವಾರ ಬಾಂಬೆ ಹೈಕೋರ್ಟ್‌ “ಕಾನೂನಿಗೆ ಅನುಗುಣವಾಗಿ ಬಂಧಿಸಲಾಗಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, 1 ಲಕ್ಷ ರೂಪಾಯಿ ಬಾಂಡ್ ಮೇಲೆ ದಂಪತಿಯನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲು ಆದೇಶ ನೀಡಿದೆ. ಡಿ.23 ರಂದು ಐಸಿಐಸಿಐ ಬ್ಯಾಂಕ್ - ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಸಿಬಿಐ ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಿತ್ತು.

ICICI Bank - Wikipedia

ಐಸಿಐಸಿಐ ಬ್ಯಾಂಕ್‌ನಿಂದ 3,250 ಕೋಟಿ ರೂ. ಸಾಲ ಪಡೆದ ಕೆಲವು ತಿಂಗಳಲ್ಲೇ ವಿಡಿಯೊಕಾನ್‌ ಗ್ರೂಪ್‌ನ ವೇಣುಗೋಪಾಲ್‌, ನ್ಯೂಪವರ್‌ ರಿನ್ಯೂವಬಲ್ಸ್‌ ಕಂಪೆನಿಯಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು. ಐಸಿಐಸಿಐ ಬ್ಯಾಂಕ್‌ಗೆ ವಂಚನೆ ಮಾಡಲೆಂದೇ ಇತರೆ ಆರೋಪಿಗಳ ಜತೆ ಸೇರಿಕೊಂಡು ಚಂದಾ ಕೊಚ್ಚರ್‌ ಖಾಸಗಿ ಕಂಪೆನಿಗೆ ಸಾಲ ಮಂಜೂರು ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.

The Bombay High Court on Monday granted interim relief to former ICICI Bank MD & CEO Chanda Kochhar and her husband Deepak Kochhar in the ICICI Bank-Videocon case, observing that their arrests were not in accordance with the law.