ಕಾಬೂಲ್‌ನಲ್ಲಿರುವ ವಿದೇಶಾಂಗ ಸಚಿವಾಲಯದ ಬಳಿಯೇ ಆತ್ಮಾಹುತಿ ಬಾಂಬ್‌ ದಾಳಿ ; 20ಕ್ಕೂ ಅಧಿಕ ಮಂದಿ ಸಾವು ! 

11-01-23 10:44 pm       HK News Desk   ದೇಶ - ವಿದೇಶ

ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರದ್ದೇ ಆಡಳಿತವಿದ್ದರೂ ಉಗ್ರರ ದಾಳಿಗಳು ಮಾತ್ರ ನಿಲ್ಲುತ್ತಿಲ್ಲ. ಕಾಬೂಲ್‌ನಲ್ಲಿರುವ ವಿದೇಶಾಂಗ ಸಚಿವಾಲಯದ ಬಳಿಯೇ ಬುಧವಾರ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಕಬುಲ್, ಜ.11 : ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರದ್ದೇ ಆಡಳಿತವಿದ್ದರೂ ಉಗ್ರರ ದಾಳಿಗಳು ಮಾತ್ರ ನಿಲ್ಲುತ್ತಿಲ್ಲ. ಕಾಬೂಲ್‌ನಲ್ಲಿರುವ ವಿದೇಶಾಂಗ ಸಚಿವಾಲಯದ ಬಳಿಯೇ ಬುಧವಾರ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 4 ಗಂಟೆ ಸುಮಾರಿಗೆ ವಿದೇಶಾಂಗ ಸಚಿವಾಲಯದ ಬಳಿ ವ್ಯಕ್ತಿಯೊಬ್ಬ ಸುಧಾರಿತ ಸ್ಫೋಟಕ ಸಾಧನಗಳನ್ನು (IED) ಸ್ಫೋಟಿಸಿಕೊಂಡಿದ್ದಾನೆ. ತೀವ್ರ ಪ್ರಮಾಣದ ಸ್ಫೋಟ ಸಂಭವಿಸಿದೆ. ಇದರಿಂದಾಗಿ 20ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Suicide blast near Afghanistan's foreign ministry, more than 20 casualties-  The New Indian Express

ಆತ್ಮಾಹುತಿ ದಾಳಿಕೋರನು ಸಚಿವಾಲಯ ಪ್ರವೇಶಿಸಲು ಯತ್ನಿಸಿದ್ದ, ಆದರೆ, ಅದು ಫಲಿಸಲಿಲ್ಲ. ಇಲ್ಲದಿದ್ದರೆ, ಇಡೀ ಸಚಿವಾಲಯವನ್ನೇ ಉಡಾಯಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸಚಿವಾಲಯದಲ್ಲಿ ಚೀನಾ ನಿಯೋಗದ ಜತೆ ಸಭೆ ನಡೆಯುತ್ತಿರುವಾಗಲೇ ದಾಳಿ ನಡೆದಿರುವುದು ಹಲವು ಶಂಕೆ ಮೂಡಲು ಕಾರಣವಾಗಿದೆ. ಆದಾಗ್ಯೂ, ಯಾವುದೇ ಉಗ್ರ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ತಿಳಿದುಬಂದಿದೆ.

A suicide bomber blew himself up near Afghanistan's foreign ministry where a Chinese delegation had been due to meet on Wednesday, causing more than 20 casualties, Taliban officials and witnesses said. The Taliban claim to have improved security since storming back to power in 2021 but there have been scores of bomb blasts and attacks, many claimed by the local chapter of the Islamic State (IS) group.