ನೇಪಾಳದಲ್ಲಿ ವಿಮಾನ ಪತನ ; ಐವರು ಭಾರತೀಯರ ಸಹಿತ 67  ಮಂದಿ ಸಾವು 

15-01-23 06:11 pm       HK News Desk   ದೇಶ - ವಿದೇಶ

ನೇಪಾಳದಲ್ಲಿ 72 ಜನರಿದ್ದ ವಿಮಾನ ಪತನಗೊಂಡಿದ್ದು ಘಟನೆಯಲ್ಲಿ ಸುಮಾರು 67 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಕಾಠ್ಮಂಡುವಿನಿಂದ ಹೊರಟಿದ್ದ ವಿಮಾನ ಪೊಖಾರಾ ಎಂಬಲ್ಲಿನ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. 

ನವದೆಹಲಿ, ಜ.15 : ನೇಪಾಳದಲ್ಲಿ 72 ಜನರಿದ್ದ ವಿಮಾನ ಪತನಗೊಂಡಿದ್ದು ಘಟನೆಯಲ್ಲಿ ಸುಮಾರು 67 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಕಾಠ್ಮಂಡುವಿನಿಂದ ಹೊರಟಿದ್ದ ವಿಮಾನ ಪೊಖಾರಾ ಎಂಬಲ್ಲಿನ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. 

ಭಾನುವಾರ ಬೆಳಗ್ಗೆ ಘಟನೆ ಸಂಭವಿಸಿದ್ದು ವಿಮಾನದಲ್ಲಿ 68 ಮಂದಿ ಪ್ರಯಾಣಿಕರು ಮತ್ತು ನಾಲ್ಕು ಮಂದಿ ಸಿಬಂದಿ ಇದ್ದರು. ವಿಮಾನದಲ್ಲಿ 15 ವಿದೇಶಿ ಪ್ರಜೆಗಳು, ಆರು ಮಂದಿ ಮಕ್ಕಳು ಇದ್ದರು. 53 ನೇಪಾಳಿ ಪ್ರಜೆಗಳು, ಐವರು ಭಾರತೀಯರು, ನಾಲ್ಕು ಮಂದಿ ರಷ್ಯನ್ನರು, ಇಬ್ಬರು ಕೊರಿಯಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಐರ್ಲೆಂಡ್, ಫ್ರಾನ್ಸ್ ಮೂಲದ ತಲಾ ಒಬ್ಬರು ಇದ್ದರೆಂದು ನೇಪಾಳದ ವಿಮಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

Nepal plane crash with 72 onboard leaves at least 67 dead | Nepal | The  Guardian

Nepal plane crash LIVE updates: At least 68 killed in Yeti Airlines plane  crash | Mint

Passenger plane with 72 people onboard crashes in Nepal's Pokhara; Death  toll rises to 67

ಬೆಳಗ್ಗೆ 10.30ಕ್ಕೆ ಕಾಠ್ಮಂಡು ಏರ್ಪೋರ್ಟ್ ನಿಂದ ಹೊರಟಿದ್ದ ವಿಮಾನ ಪೋಕರಾ ಏರ್ಪೋರ್ಟ್ ಇಳಿಯಲು ಕೆಲವೇ ನಿಮಿಷಗಳಿದ್ದಾಗ ಸೇತಿ ನದಿಯ ಬಳಿ ನೆಲಕ್ಕೆ ಅಪ್ಪಳಿಸಿದೆ. ವಿಮಾನ ಪತನವಾಗುತ್ತಲೇ ಬೆಂಕಿ ಹತ್ತಿಕೊಂಡಿದ್ದು ಸಂಪೂರ್ಣ ಭಸ್ಮ ಆಗಿದೆ. 31 ಮಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. 36 ಶವಗಳನ್ನು ಸ್ಥಳದಿಂದ ಸಂಗ್ರಹ ಮಾಡಲಾಗಿದೆ. 

68 confirmed dead after plane crashes in Nepal resort town - The San Diego  Union-Tribune

Nepal Airport Plane Crash: 72-Seater Passenger Aircraft Crashes On Runway At  Pokhara International Airport In Nepal

ರಾಜಧಾನಿ ಕಾಠ್ಮಂಡುವಿನಿಂದ ಪೊಖಾರಾಗೆ 25 ನಿಮಿಷಗಳ ಪ್ರಯಾಣ. ಅವಳಿ ನಗರಗಳ ಮಧ್ಯೆ ವಿಮಾನ ಹಾರಾಟ ನಡೆಸುತ್ತಿದ್ದಾಗ ಪತನಗೊಂಡಿದೆ. ಘಟನೆ ಬಗ್ಗೆ ತನಿಖೆಗೆ ನೇಪಾಳ ಪ್ರಧಾನಿ ಆದೇಶ ಮಾಡಿದ್ದು ಐವರು ಸದಸ್ಯರ ಸಮಿತಿಯನ್ನು ನಿಯೋಜಿಸಿದ್ದಾರೆ.

At least 68 people died today in Nepal after a plane carrying about 72 people from capital Kathmandu crashed in Pokhara this morning, news agency AFP said, quoting the police. There were 68 passengers and four crew members on board the  plane that crashed between the old and new airports in the city, located in western Nepal. The twin-engine ATR 72 aircraft operated by Yeti Airlines was en route from Nepal's capital Kathmandu.