ವರುಣ್ ಗಾಂಧಿ ಸಿದ್ಧಾಂತ ಬೇರೆ, ನಮ್ಮ ಕುಟುಂಬದ್ದು ಬೇರೆ, ಒಟ್ಟು ಸೇರಲು ಸಾಧ್ಯವಿಲ್ಲ ; ರಾಹುಲ್ ಸ್ಪಷ್ಟನೆ

17-01-23 09:06 pm       HK News Desk   ದೇಶ - ವಿದೇಶ

ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡರೆ ಅವರಿಗೇ ಸಮಸ್ಯೆಯಾಗುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ನವದೆಹಲಿ, ಜ.17: ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ವರುಣ್ ಗಾಂಧಿಗೆ ಆತನ ಸಿದ್ಧಾಂತವೇ ಅಡ್ಡಿಯಾಗುತ್ತದೆ. ನಮ್ಮ ಕುಟುಂಬಕ್ಕೆ ಒಂದು ಸಿದ್ಧಾಂತ ಇದೆ, ವರುಣ್ ಗಾಂಧಿಯ ಸಿದ್ಧಾಂತ ಬೇರೆಯೇ ಇದೆ. ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡರೆ ಅವರಿಗೇ ಸಮಸ್ಯೆಯಾಗುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ವರುಣ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬ ಪ್ರಶ್ನೆಗೆ ರಾಹುಲ್ ವ್ಯತಿರಿಕ್ತ ಉತ್ತರ ನೀಡಿದ್ದಾರೆ. ವರುಣ್ ಗಾಂಧಿ ಬಿಜೆಪಿ ಪಕ್ಷವನ್ನು ಪ್ರತಿನಿಧಿಸುತ್ತಾರೆ. ಹಾಗಿರುವಾಗ ಅವರು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವುದು ಹೇಗೆ. ನಮ್ಮ ಕುಟುಂಬಕ್ಕೆ ಒಂದು ಸಿದ್ಧಾಂತ ಇದೆ, ವರುಣ್ ಗಾಂಧಿ ಅಳವಡಿಸಿಕೊಂಡಿರುವ ಸಿದ್ಧಾಂತವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನನ್ನಿಂದ ಆರೆಸ್ಸೆಸ್ ಕಚೇರಿಗೆ ತೆರಳಲು ಸಾಧ್ಯವಿಲ್ಲ. ಅಂಥ ಜಾಗಕ್ಕೆ ಹೋಗುವುದಂದ್ರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಹೇಳಿದ್ದಾರೆ.

Big ideas, call for action missing from Bharat Jodo Yatra- The New Indian  Express

Loksabha Election 2024, If Varun Gandhi Leaves BJP Then He Will Have Three  Options | Varun Gandhi News: अगर वरुण गांधी ने भाजपा को छोड़ा तो उनके पास  होंगे ये तीन विकल्प,

ಬಿಜೆಪಿ ಮತ್ತು ಕೇಂದ್ರ ಸರಕಾರದ ಬಗ್ಗೆ ಅಸಮಾಧಾನದ ಹೇಳಿಕೆ ನೀಡುತ್ತಿರುವ ವರುಣ್ ಗಾಂಧಿ ಕಾಂಗ್ರೆಸ್ ಸೇರುತ್ತಾರೆಯೇ ಎಂಬ ವದಂತಿ ಹಬ್ಬಿದೆ. ರಾಹುಲ್ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬ ಮಾತುಗಳೂ ಕೇಳಿಬಂದಿದ್ದವು. ಬಿಜೆಪಿ ಕುರಿತ ಹೇಳಿಕೆಗಳ ಪತ್ರಿಕಾ ತುಣುಕುಗಳು ವೈರಲ್ ಆಗುತ್ತಿದ್ದು, ಕೇಂದ್ರವನ್ನು ವಿರೋಧಿಸುವ ಅವರ ಹೇಳಿಕೆಗಳು ಚರ್ಚೆಗೆ ಕಾರಣವಾಗುತ್ತಿವೆ. ವರುಣ್ ಗಾಂಧಿ ಹೇಳಿಕೆಗಳು ಬಿಜೆಪಿಗೂ ಇರಿಸುಮುರಿಸು ತರುತ್ತಿದ್ದು, ಕೆಲವು ವಿಚಾರಗಳ ಬಗ್ಗೆ ಅದು ಅವರ ವೈಯಕ್ತಿಕ ಹೇಳಿಕೆಯೆಂದು ಹೇಳಿ ಪಕ್ಷದ ನಾಯಕರು ದೂರ ನಿಲ್ಲುತ್ತಿದ್ದಾರೆ.

Maneka Gandhi says BJP not naming her in national panel doesn't reduce her  stature | Latest News India - Hindustan Times

BJP gets ready for 2024 riding on G20

ಮನೇಕಾ ಗಾಂಧಿ ಮತ್ತು ವರುಣ್ ಗಾಂಧಿ ಉತ್ತರ ಪ್ರದೇಶದಲ್ಲಿ ಸಂಸದರಾಗಿದ್ದು, ತಮ್ಮ ಟ್ವಿಟರ್ ಇನ್ನಿತರ ಜಾಲತಾಣಗಳಲ್ಲಿ ಬಿಜೆಪಿ ಚಿಹ್ನೆಯನ್ನು ಬಳಸಿಕೊಳ್ಳುತ್ತಿಲ್ಲ. ಕಳೆದ ಉತ್ತರ ಪ್ರದೇಶ ಚುನಾವಣೆಯಲ್ಲೂ ಇವರಿಬ್ಬರು ಬಿಜೆಪಿ ಪರವಾಗಿ ಪ್ರಚಾರವನ್ನೂ ಮಾಡಿಲ್ಲ. ಪಕ್ಷದ ಯಾವುದೇ ಹೊಣೆಗಾರಿಕೆಯನ್ನೂ ಹೊಂದಿಲ್ಲ. ಹೀಗಾಗಿ ತಾಯಿ, ಮಗ ಕಾಂಗ್ರೆಸ್ ಸೇರುತ್ತಾರೆಯೇ ಎಂಬ ವದಂತಿ ಹಬ್ಬಿದೆ. ಈ ನಡುವೆ, ರಾಹುಲ್ ಗಾಂಧಿ ನೀಡಿರುವ ಹೇಳಿಕೆಯು ವರುಣ್ ಗಾಂಧಿ ಮೊದಲು ಬಿಜೆಪಿಯಿಂದ ಹೊರಬರಬೇಕು. ಪಕ್ಷಕ್ಕೆ ರಾಜಿನಾಮೆ ನೀಡಿ ತನ್ನ ನಿಲುವನ್ನು ತೋರಿಸಬೇಕು ಎನ್ನುವುದನ್ನು ಪರೋಕ್ಷವಾಗಿ ಸೂಚಿಸಿದೆ.

Congress MP Rahul Gandhi, who is leading the pan-India foot march 'Bharat Jodo Yatra', today said he can "lovingly meet" and hug his cousin Varun Gandhi, who is a BJP leader, but can never support the ideology he subscribes to. He said he'd rather be beheaded than go to the office of Rashtriya Swayamsevak Sangh the ideological parent of rival BJP.