ಬ್ರೇಕಿಂಗ್ ನ್ಯೂಸ್
20-01-23 03:23 pm HK News Desk ದೇಶ - ವಿದೇಶ
ಕ್ಯಾಲಿಫೋರ್ನಿಯಾ, ಜ.20: ಮನೆಯನ್ನು ಸ್ವಚ್ಛ ಮಾಡುವುದಕ್ಕೆಂದು ತಂದಿದ್ದ ರೋಬೋಟ್ ಒಂದು ಮನೆಯ ಯುವತಿ ಶೌಚಾಲಯದಲ್ಲಿರುವ ಫೋಟೋವನ್ನೇ ತೆಗೆದಿದ್ದು ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಬಾರಿ ವೈರಲಾಗಿದೆ.
ಅಮೆರಿಕದ ಮ್ಯಾಸಚೂಸೆಟ್ಸ್ ಮೂಲದ ಸಂಸ್ಥೆಯಾಗಿರುವ ಐರೊಬೋಟ್ 2020ರಲ್ಲಿ ರೂಂಬಾ ಹೆಸರಿನ ವಾಕ್ಯೂಮ್ ಕ್ಲೀನಿಂಗ್ ರೋಬೋಟ್ ಅನ್ನು ತಯಾರಿಸಿದೆ. ಈ ರೋಬೋಟ್‌ನ ಪರೀಕ್ಷೆ ಮಾಡುವುದಕ್ಕಾಗಿ ಒಂದಿಷ್ಟು ಸ್ವಯಂಸೇವಕರನ್ನು ಒಟ್ಟು ಮಾಡಿ, ಅವರ ಮನೆಗೆ ರೋಬೋಟ್ ಕಳುಹಿಸಿಕೊಡಲಾಗಿದೆ. ಅದನ್ನು ಬಳಸುವುದಕ್ಕೆ ಅವರಿಗೆ ಹಣವನ್ನೂ ಕೊಡಲಾಗಿದೆ.
ಈ ರೀತಿ ಯುವತಿಯೊಬ್ಬರ ಮನೆಯಲ್ಲಿ ಪರೀಕ್ಷೆಗೆಂದು ತರಲಾಗಿದ್ದ ರೂಂಬಾ ಆ ಯುವತಿ ಶೌಚಾಲಯದಲ್ಲಿದ್ದಾಗ ಆಕೆಯ ಫೋಟೋ ತೆಗೆದಿದೆ. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ, ವೈರಲ್ ಆಗಿದೆ.
ಐರೋಬೋಟ್ ಸಂಸ್ಥೆಯು ರೂಂಬಾ ರೋಬೋಟ್‌ಗೆ ವಸ್ತುಗಳ ಬಗ್ಗೆ ಜ್ಞಾನ ತುಂಬುವಂತೆ ಮಾಡುವುದಕ್ಕೆ ಸ್ಯಾನ್‌ಫ್ರಾನ್ಸಿಸ್ಕೋದ ಸ್ಕೇಲ್ ಎಐ ಹೆಸರಿನ ಸಂಸ್ಥೆಗೆ ಗುತ್ತಿಗೆಯನ್ನು ನೀಡಿತ್ತು. ಆ ಸಂಸ್ಥೆಯು ವೆನೆಜುವೆಲಾದಲ್ಲಿರುವ ಗುತ್ತಿಗೆ ಕೆಲಸಗಾರರಿಂದ ಆ ಕೆಲಸವನ್ನು ಮಾಡಿಸಿಕೊಂಡಿದೆ. ಪರೀಕ್ಷಾ ಹಂತದಲ್ಲಿದ್ದ ರೂಂಬಾ ಫೋಟೋಗಳನ್ನು ತೆಗೆದು ಸ್ಕೇಲ್‌ಗೆ ಕಳುಹಿಸಿದರೆ ಅವರು ಅದನ್ನು ಗುತ್ತಿಗೆ ಕೆಲಸಗಾರರಿಗೆ ನೀಡಿದ್ದಾರೆ. ಅಲ್ಲಿಂದ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾಗಿರುವುದಾಗಿ ಹೇಳಲಾಗಿದೆ.
ಈ ಘಟನೆಯ ಬಗ್ಗೆ ಐರೋಬೋಟ್ ಸಂಸ್ಥೆ ತನಿಖೆ ನಡೆಸುತ್ತಿದೆ. ಮತ್ತೊಮ್ಮೆ ರೂಂಬಾ ತಂತ್ರಜ್ಞಾನದಲ್ಲಿ ಪರಿಷ್ಕರಣೆಯನ್ನು ಮಾಡಿದ್ದು, ಅದನ್ನು ಅಮೆಜಾನ್ ಮೂಲಕ ಮಾರಾಟ ಮಾಡುವುದಕ್ಕೂ ಸಂಸ್ಥೆ ಸಿದ್ಧವಾಗಿದೆ.
In another edition of tech being way too pervasive and pervy, here’s how a woman’s private pic in her toilet ended up on Facebook, that she didn’t even take?! The images were snapped by an under development version of a vacuum cleaning iRobot’s Roomba J7 series. However the company claims your data is safe.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm