ಬ್ರೇಕಿಂಗ್ ನ್ಯೂಸ್
13-08-23 10:07 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 13: ಪಿಎಫ್ಐ ಹವಾಲಾ ನೆಟ್ವರ್ಕ್, ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭಾನುವಾರ ಏಕಕಾಲದಲ್ಲಿ ಐದು ರಾಜ್ಯಗಳ 14 ಕಡೆ ದಾಳಿ ನಡೆಸಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಕೇಳದ ಕಣ್ಣೂರು, ಮಲಪ್ಪುರಂ, ಕರ್ನಾಟಕದ ದಕ್ಷಿಣ ಕನ್ನಡ, ಮಹಾರಾಷ್ಟ್ರದ ನಾಶಿಕ್, ಕೊಲ್ಲಾಪುರ, ಪಶ್ಚಿಮ ಬಂಗಾಳದ ಮುರ್ಶಿದಾಬಾದ್, ಬಿಹಾರದ ಕತಿಯಾರ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಶಂಕಿತ ವ್ಯಕ್ತಿಗಳ ಮನೆ, ಇತರ ಕಡೆಗಳಿಗೆ ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ. ಪಿಎಫ್ಐ ಸಂಘಟನೆಗೆ ಸಂಬಂಧಪಟ್ಟ ಡಿಜಿಟಲ್ ಸಾಕ್ಷ್ಯಗಳು, ದೇಶ ವಿರೋಧಿ ಕೃತ್ಯಕ್ಕೆ ಸಂಚು ನಡೆಸಿದ ಕುರಿತ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ.
2047ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಬೇಕೆಂಬ ಗುರಿ ಇಟ್ಟುಕೊಂಡು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಭಾರೀ ಸಂಚು ನಡೆಸಿದ್ದು ಬಯಲಿಗೆ ಬಂದಿತ್ತು. ಇದರ ಬೆನ್ನಲ್ಲೆ ಕಳೆದ 2022ರ ಸೆಪ್ಟಂಬರ್ ತಿಂಗಳಲ್ಲಿ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ್ದಲ್ಲದೆ, ದೇಶಾದ್ಯಂತ ಸಂಘಟನೆಯ ಪ್ರಮುಖ ನಾಯಕರನ್ನು ಬಂಧಿಸಲಾಗಿತ್ತು. ಬಳಿಕ ನಡೆದ ತನಿಖೆಯಲ್ಲಿ ಯುವಕರನ್ನು ಬ್ರೇನ್ ವಾಷ್ ಮಾಡಿ ದೇಶದ್ರೋಹಿ ಕೃತ್ಯಕ್ಕೆ ತಯಾರಿ ನಡೆಸುತ್ತಿರುವುದು, ಅವರಲ್ಲಿ ವಿಧ್ವಂಸಕ ಕೃತ್ಯ, ಸಮಾಜದಲ್ಲಿ ಹಿಂಸಾಚಾರ ಮಾಡಿಸುತ್ತಿರುವ ತಂತ್ರಗಾರಿಕೆ ಪತ್ತೆಯಾಗಿತ್ತು.
ಇದಕ್ಕಾಗಿ ಪಿಎಫ್ಐ, ದೇಶಾದ್ಯಂತ ಆಯಕಟ್ಟಿನ ಜಾಗಗಳಲ್ಲಿ ಮಾಸ್ಟರ್ ಟ್ರೈನರ್ ಗಳನ್ನು ಇಟ್ಟುಕೊಂಡಿತ್ತು. ದೇಶ ವಿರೋಧಿ ಚಟುವಟಿಕೆಗೆ ತಯಾರಾಗುವ ಯುವಕರಿಗೆ ಅಲ್ಲಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದರು. ಶಿಬಿರದಲ್ಲಿ ಆಧುನಿಕ ರೀತಿಯ ಶಸ್ತ್ರಾಸ್ತ್ರ, ಕಬ್ಬಿಣದ ರಾಡ್, ಕತ್ತಿ, ಚೂರಿಗಳನ್ನು ಬಳಕೆ ಮಾಡುವುದರ ಬಗ್ಗೆ ಹೇಳಿಕೊಡಲಾಗುತ್ತಿತ್ತು. ಪಿಎಫ್ಐ ನಿಷೇಧ ಆಗುವುದಕ್ಕೂ ಕೆಲವು ತಿಂಗಳ ಹಿಂದೆ ಈ ರೀತಿಯ ಶಿಬಿರಗಳನ್ನು ನಡೆಸುತ್ತಿದ್ದ ಬಗ್ಗೆ ಪೂರಕ ದಾಖಲೆಗಳನ್ನು, ಟ್ರೈನಿಂಗ್ ಕೊಡುತ್ತಿದ್ದವರನ್ನು ಬಂಧಿಸಲಾಗಿದೆ. ಈ ಕುರಿತಾಗಿ ಎನ್ಐಎ ದೆಹಲಿ ವಿಭಾಗದಲ್ಲಿ 2022ರ ಎಪ್ರಿಲ್ ತಿಂಗಳಲ್ಲಿ ಎಫ್ಐಆರ್ ದಾಖಲು ಮಾಡಲಾಗಿತ್ತು. ಆನಂತರ ಸೆಪ್ಟಂಬರ್ ತಿಂಗಳಲ್ಲಿ ದೇಶಾದ್ಯಂತ ಪಿಎಫ್ಐ ಸಂಘಟನೆಯ ಮುಂಚೂಣಿ ನಾಯಕರನ್ನು ಬಂಧಿಸಲಾಗಿತ್ತು. ಈ ಪೈಕಿ 19 ಮಂದಿಯ ವಿರುದ್ಧ 2023ರ ಮಾರ್ಚ್ ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆನಂತರ ಕಳೆದ ಎಪ್ರಿಲ್ ತಿಂಗಳಲ್ಲಿ ಪಿಎಫ್ಐನಿಂದ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದ್ದ ಬಗ್ಗೆ ಮತ್ತು ಅದರ ನ್ಯಾಶನಲ್ ಕೋಆರ್ಡಿನೇಟರ್ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಪಿಎಫ್ಐ ಬೇರು ಬಿಟ್ಟಿದ್ದ ಜಾಗಗಳಲ್ಲಿ ಹುದುಗಿ ಹೋಗಿರಬಹುದಾದ ದೇಶದ್ರೋಹಿ ಕೃತ್ಯಗಳನ್ನು ಪತ್ತೆಹಚ್ಚಲು ಎನ್ಐಎ ದಾಳಿ ಇನ್ನೂ ಮುಂದುವರಿಯಲಿದೆ. ಭಾರತ ಸ್ವಾತಂತ್ರ್ಯ ಪಡೆದು ನೂರು ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ದೇಶವನ್ನು ಇಸ್ಲಾಮಿಕ್ ಹಿಡಿತಕ್ಕೆ ತಂದುಕೊಳ್ಳುವುದೇ ಪಿಎಫ್ಐ ಕ್ರಿಮಿಗಳ ಅಜೆಂಡಾ ಆಗಿತ್ತು ಅನ್ನೋದನ್ನು ತನಿಖೆಯ ಸಂದರ್ಭದಲ್ಲಿ ಪತ್ತೆ ಮಾಡಲಾಗಿದೆ ಎಂದು ಎನ್ಐಎ ದೆಹಲಿ ವಿಭಾಗ ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದೆ.
The National Investigation Agency on Sunday conducted a series of raids in five states as part of its continued efforts to foil the Popular Front of India's conspiracy to disturb peace by driving a communal wedge among the people and destabilise the country, an official said. Fourteen locations were searched in Kerala, Karnataka, Maharashtra, West Bengal and Bihar, leading to the seizure of several digital devices as well as incriminating documents, a spokesperson of the federal agency said.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 10:14 pm
Mangalore Correspondent
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm