Israel-Iran war: ಇಸ್ರೇಲ್ ಮೇಲೆ ಮುಗಿಬಿದ್ದ ಇರಾನ್ ; ರಾತ್ರೋರಾತ್ರಿ 400ಕ್ಕೂ ಹೆಚ್ಚು ಕ್ಷಿಪಣಿ ದಾಳಿ, ಬಾಂಬ್ ಸುರಿಮಳೆಗೆ ರಾಜಧಾನಿ ಟೆಲ್ ಅವೀವ್ ನಲ್ಲಿ ಬಂಕರಿನೊಳಗೆ ಅವಿತುಕೊಂಡ ಜನರು, ಇರಾನ್ ದೊಡ್ಡ ರೀತಿಯ ಬೆಲೆ ತೆರಲಿದೆ ಎಂದ ನೆತನ್ಯಾಹು  

02-10-24 11:43 am       HK News Desk   ದೇಶ - ವಿದೇಶ

ಇರಾನ್, ಲೆಬನಾನ್ ಮೇಲಿನ ಭಯಾನಕ ದಾಳಿ ಬೆನ್ನಲ್ಲೇ ಇರಾನ್ ಸೇನಾಪಡೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದು, ನಿನ್ನೆ ರಾತ್ರಿ 400ಕ್ಕೂ ಹೆಚ್ಚು ಬಾಂಬ್ ದಾಳಿ ನಡೆಸಿದೆ.

ಟೆಲ್ ಅವೀವ್, ಅ.2: ಇರಾನ್, ಲೆಬನಾನ್ ಮೇಲಿನ ಭಯಾನಕ ದಾಳಿ ಬೆನ್ನಲ್ಲೇ ಇರಾನ್ ಸೇನಾಪಡೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದು, ನಿನ್ನೆ ರಾತ್ರಿ 400ಕ್ಕೂ ಹೆಚ್ಚು ಬಾಂಬ್ ದಾಳಿ ನಡೆಸಿದೆ. ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ರಾತ್ರೋರಾತ್ರಿ ಬಾಂಬ್ ದಾಳಿಯಾಗಿದ್ದು, ಇಸ್ರೇಲಿನ ಐರನ್ ಡೋಮ್ ತಂತ್ರಜ್ಞಾನ ಕ್ಷಿಪಣಿಗಳನ್ನು ಆಕಾಶದಲ್ಲೇ ಹಿಮ್ಮೆಟ್ಟಿಸುವ ಪ್ರಯತ್ನ ಮಾಡಿದೆ. ಆದರೆ ಏಕಕಾಲದಲ್ಲಿ ನೂರಾರು ರಾಕೆಟ್ ದಾಳಿ ಆಗಿರುವುದರಿಂದ ಅದನ್ನು ಪುಡಿಗಟ್ಟುವುದಕ್ಕೆ ಇಸ್ರೇಲಿಗೆ ಸಾಧ್ಯವಾಗಿಲ್ಲ.

ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಲು ಸಜ್ಜಾಗಿದೆ ಎಂದು ದಾಳಿ ಆಗುವ ಕೆಲವೇ ಗಂಟೆಗಳ ಮೊದಲು ಅಮೆರಿಕಾ ಮುನ್ಸೂಚನೆ ನೀಡಿತ್ತು. ಇದರಿಂದಾಗಿ ರಾಜಧಾನಿ ಟೆಲ್ ಅವೀವ್ ನಗರದಲ್ಲಿ ಒಂದು ಕೋಟಿಗೂ ಹೆಚ್ಚು ಜನರನ್ನು ಬಂಕರಿನೊಳಗೆ ಅವಿತುಕೊಳ್ಳಲು ಇಸ್ರೇಲ್ ಸೇನೆ ಸೂಚಿಸಿದೆ. ಹೀಗಾಗಿ ಇಸ್ರೇಲಿನಲ್ಲಿ ಭಯಾನಕ ವಾತಾವರಣ ಮನೆಮಾಡಿದೆ. ಒಂದೆಡೆ, ಬಾಂಬ್ ದಾಳಿ ಆಗುತ್ತಿದ್ದಾಗಲೇ ಮತ್ತೊಂದೆಡೆ ಉಗ್ರರು ಟೆಲ್ ಅವೀವ್ ಬಳಿಯ ರೈಲ್ವೇ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಎಂಟು ಮಂದಿ ಇಸ್ರೇಲ್ ನಾಗರಿಕರು ಬಲಿಯಾಗಿದ್ದಾರೆ. ಇಬ್ಬರು ಉಗ್ರರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

Iran Targets Mossad Headquarters In Missile Strike Among Key Sites Hit -  TheDailyGuardian

Israel-Hezbollah live updates: Iran says it has concluded its attack on  Israel

Israel-Hamas war latest: Israel intercepts Hezbollah's farthest strike yet  in 11 months of exchanges - The Economic Times

Iranian missiles targeted Mossad HQ in Tel Aviv: Report – Firstpost

Iran Launches Over 100 Ballistic Missiles at Israel: Live Updates - The New  York Times

Israel-Hezbollah live updates: Iran says it has concluded its attack on  Israel

September 30, 2024 - news on the Israel-Hezbollah war | CNN

ಬಾಂಬ್ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ಈ ರಾತ್ರಿ ದೊಡ್ಡ ಮಿಸ್ಟೇಕ್ ಮಾಡಿಕೊಂಡಿದೆ. ಇದಕ್ಕೆ ದೊಡ್ಡ ರೀತಿಯ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ. ಇರಾನ್ ದೇಶದ ಪ್ರಮುಖ ಬೇಸ್ ಆಗಿರುವ ಪೆಟ್ರೋಲಿಯಂ ಸ್ಥಾವರಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇಸ್ಲಾಮಿಕ್ ರಾಷ್ಟ್ರಗಳು ಒಂದಾಗಿ ಇಸ್ರೇಲ್ ಮೇಲೆ ಮುಗಿಬಿದ್ದರೆ ಅಮೆರಿಕವೂ ಇಸ್ರೇಲ್ ಜೊತೆಗೆ ಕೈಜೋಡಿಸಲಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಕಾರ್ಮೋಡ ಆವರಿಸಿದೆ.

ಇತ್ತೀಚೆಗೆ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರುಲ್ಲಾ, ಇರಾನ್ ಬ್ರಿಗೇಡಿಯರ್ ಜನರಲ್ ಅಬ್ಬಾಸ್ ನೀಲ್ಫರುಶಾನ್, ಹಮಾಸ್ ಉಗ್ರರ ನಾಯಕ ಇಸ್ಮಾಯಿಲ್ ಹನಿಯೆ ಸೇರಿದಂತೆ ಲೆಬನಾನ್, ಇರಾನ್ನಲ್ಲಿ ಅಡಗಿರುವ ಉಗ್ರ ನಾಯಕರನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿ ಕೊಂದು ಹಾಕಿತ್ತು. ಲೆಬನಾನಲ್ಲಿ ಹೆಬ್ಜುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್ ಗಳನ್ನೇ ಸ್ಫೋಟಿಸಿ ಆತಂಕ ಹುಟ್ಟಿಸಿತ್ತು. ಇದರಿಂದ ಕೆರಳಿರುವ ಇರಾನ್ ಮತ್ತು ಲೆಬನಾನಲ್ಲಿರುವ ಉಗ್ರ ಸಂಘಟನೆಗಳು ಇಸ್ರೇಲ್ ಮೇಲೆ ಹಗೆ ತೀರಿಸಿಕೊಳ್ಳಲು ಮುಂದಾಗಿವೆ. ಇಸ್ರೇಲ್ ಮೇಲೆ ಇರಾನ್ ಬಾಂಬ್ ದಾಳಿ ನಡೆಸಿರುವುದನ್ನು ಜಪಾನ್, ಯುಕೆ, ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳ ನಾಯಕರು ಖಂಡಿಸಿದ್ದಾರೆ.

ರಾತ್ರೋರಾತ್ರಿ ಇಸ್ರೇಲ್ ಮೇಲೆ ಇರಾನ್ ರಾಕೆಟ್ ದಾಳಿ ನಡೆಸಿರುವುದರ ವಿಡಿಯೋ ವೈರಲ್ ಆಗಿದೆ. ರಾತ್ರಿ ವೇಳೆ ದೀಪಾವಳಿ ಪಟಾಕಿ ಸಿಡಿಸಿದ ರೀತಿಯಲ್ಲಿ ಬಾಂಬ್ ದಾಳಿ ಆಗಿದ್ದು, ಅದರ ವಿಡಿಯೋವನ್ನು ಬೇರೆ ವಿಮಾನಗಳಲ್ಲಿ ಹೋಗುತ್ತಿದ್ದವರು ಮೊಬೈಲಿನಲ್ಲಿ ಚಿತ್ರೀಕರಿಸಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೆ, ಇಸ್ರೇಲಿನ ಐರನ್ ಡೋಮ್ ತಂತ್ರಜ್ಞಾನದಲ್ಲಿ ಪ್ರತಿದಾಳಿಯ ರಾಕೆಟ್ ಗಳನ್ನು ಆಕಾಶದಲ್ಲೇ ಸ್ಫೋಟಿಸುವ ಚಿತ್ರಣವೂ ಸೆರೆಯಾಗಿದೆ.

Reports have surfaced indicating that one of the targets in a recent Iranian missile strike on Israel was the Mossad headquarters in Tel Aviv. The strike, part of a barrage of approximately 180 missiles, was launched late Tuesday night and authorized by Iran’s Supreme Leader, Ali Khamenei.