ಕೇಂದ್ರ ಬಜೆಟ್ ಮಂಡನೆ ; ಕೃಷಿಕರು, ಮಧ್ಯಮ ವರ್ಗಕ್ಕೆ ನಿರ್ಮಲಕ್ಕ ಕೊಡುಗೆ, ವೇತನ ತೆರಿಗೆ ವಿನಾಯ್ತಿ 12.75 ಲಕ್ಷಕ್ಕೆ, ಧನ್ ಧ್ಯಾನ್ ಕೃಷಿ ಯೋಜನೆ ಘೋಷಣೆ, ಮಹಿಳೆಯರು, ಎಸ್‌ಸಿ- ಎಸ್‌ಟಿ ಉದ್ಯಮಿಗಳಿಗೆ ಸಾಲ ಮಿತಿ ಹೆಚ್ಚಳ 

01-02-25 02:10 pm       HK News Desk   ದೇಶ - ವಿದೇಶ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಎಂಟನೇ ಬಾರಿ ಬಜೆಟ್‌ ಮಂಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಆರ್ಥಿಕ ಹಿಂಜರಿತ, ನಿರುದ್ಯೋಗ ಹೆಚ್ಚಳದ ನಡುವೆ ದೇಶದ ಹೊಸ ಮುನ್ನೋಟ ನೀಡುವುದಕ್ಕಾಗಿ ದೇಶದ ಸಾಮಾನ್ಯ ರೈತರು ಮತ್ತು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ಅಲ್ಲದೆ, ಒಟ್ಟು ಬಜೆಟನ್ನು ಮಧ್ಯಮ ವರ್ಗದ ಜನರ ಉತ್ತೇಜನಕ್ಕಾಗಿ ಹಲವು ಉಪಕ್ರ‌ಮಗಳನ್ನು ಘೋಷಣೆ ಮಾಡಿದ್ದಾರೆ. 

ನವದೆಹಲಿ, ಫೆ.1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಎಂಟನೇ ಬಾರಿ ಬಜೆಟ್‌ ಮಂಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಆರ್ಥಿಕ ಹಿಂಜರಿತ, ನಿರುದ್ಯೋಗ ಹೆಚ್ಚಳದ ನಡುವೆ ದೇಶದ ಹೊಸ ಮುನ್ನೋಟ ನೀಡುವುದಕ್ಕಾಗಿ ದೇಶದ ಸಾಮಾನ್ಯ ರೈತರು ಮತ್ತು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ಅಲ್ಲದೆ, ಒಟ್ಟು ಬಜೆಟನ್ನು ಮಧ್ಯಮ ವರ್ಗದ ಜನರ ಉತ್ತೇಜನಕ್ಕಾಗಿ ಹಲವು ಉಪಕ್ರ‌ಮಗಳನ್ನು ಘೋಷಣೆ ಮಾಡಿದ್ದಾರೆ. 

ಬಜೆಟ್ ಭಾಷಣದ ಮುಖ್ಯಾಂಶಗಳು 

ಎಲ್ಲಾ MSME ಸಣ್ಣ ಕೈಗಾರಿಕೆಗಳ ವರ್ಗೀಕರಣಕ್ಕಾಗಿ ಹೂಡಿಕೆ ಮತ್ತು ವಹಿವಾಟು ಮಿತಿಗಳನ್ನು ಕ್ರಮವಾಗಿ 2.5 ಮತ್ತು 2 ಪಟ್ಟು ಹೆಚ್ಚಿಸಲಾಗುವುದು. ಇದು ನಮ್ಮ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲಿದೆ. 

Government Revises MSME Classification, Doubles Investment and Turnover  Limits in Budget 2025-26

ಕ್ರೆಡಿಟ್ ಗ್ಯಾರಂಟಿ ಕವರ್ ಅನ್ನು ಹೆಚ್ಚಿಸಲಾಗುವುದು. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ 5 ರಿಂದ 10 ಕೋಟಿ ರೂ.ಗಳ ವರೆಗೆ ಮುಂದಿನ 5 ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲದ ನೆರವು ನೀಡಲಾಗುವುದು. ಸ್ಟಾರ್ಟಪ್‌ಗಳಿಗೆ, 10 ಕೋಟಿ ರೂ.ಗಳಿಂದ ಆತ್ಮನಿರ್ಭರ ಭಾರತಕ್ಕೆ ಮುಖ್ಯವಾದ 27 ಫೋಕಸ್ ವಲಯಗಳಲ್ಲಿನ ಸಾಲಗಳಿಗೆ ಶೇ.1ರಷ್ಟು ಗ್ಯಾರಂಟಿ ಶುಲ್ಕದೊಂದಿಗೆ 20 ಕೋಟಿ ರೂ. ಮೀಸಲಿಡಲಾಗುವುದು.  

A brief about FDI in India - iPleaders

ಉದ್ಯಮ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸೂಕ್ಷ್ಮ ಉದ್ಯಮಗಳಿಗೆ 5 ಲಕ್ಷ ರೂ. ಮಿತಿಯೊಂದಿಗೆ ಕಸ್ಟಮೈಸ್ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸಲಾಗುವುದು. 

ವಿಮಾ ವಲಯದ ಎಫ್‌ಡಿಐ ಮಿತಿಯನ್ನು ಶೇ.74ರಿಂದ ಶೇ.100ಕ್ಕೆ ಹೆಚ್ಚಿಸಲಾಗುವುದು. ಭಾರತದಲ್ಲಿ ಸಂಪೂರ್ಣ ಪ್ರೀಮಿಯಂ ಅನ್ನು ಹೂಡಿಕೆ ಮಾಡುವ ಕಂಪನಿಗಳಿಗೆ ಈ ಮಿತಿಯ ಲಾಭ ಸಿಗಲಿದೆ. ವಿದೇಶಿ ಹೂಡಿಕೆಗೆ ಸಂಬಂಧಿಸಿದ ಪ್ರಸ್ತುತ ನಿಯಮಗಳು ಮತ್ತು ಷರತ್ತುಗಳನ್ನು ಸರಳೀಕರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. 

Budget 2025 LIVE: Sitharaman makes income up to ₹12 lakh tax free, Shah  says middle class 'always in PM's heart' | Hindustan Times

ದೇಶದ ಮಧ್ಯಮ ವರ್ಗಕ್ಕೆ ಭರ್ಜರಿ ಕೊಡುಗೆ ನೀಡಿರುವ ನಿರ್ಮಲಾ ಸೀತಾರಾಮನ್‌, ವೇತನ ತೆರಿಗೆ ವಿನಾಯ್ತಿಯನ್ನು 12.75 ಲಕ್ಷಕ್ಕೆ ಏರಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ತೆರಿಗೆ ವಿನಾಯ್ತಿಯು 7 ಲಕ್ಷ ರೂ. ಇತ್ತು. ಆದರೆ ಇದು ಕೇವಲ ವೇತನ ಮೇಲಿನ ತೆರಿಗೆಯಾಗಿದ್ದು, ಹೂಡಿಕೆ ಮೇಲಿನ ತೆರಿಗೆಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. 

5 ಲಕ್ಷ ಮಹಿಳೆಯರು, ಎಸ್‌ಸಿ ಮತ್ತು ಎಸ್‌ಟಿ ಉದ್ಯಮಿಗಳಿಗೆ ಸರ್ಕಾರ ಎರಡು ಕೋಟಿ ರೂ.ಗಳ ಅವಧಿ ಸಾಲವನ್ನು ಪ್ರಾರಂಭಿಸಲಾಗುವುದು. 

Special loan facility for SC/ST entrepreneurs women- Budget 2025 - CMS  College.in

2025-26ರ ಸಾಲಿನಲ್ಲಿ ಎಸ್‌ಎಂಇ ಮತ್ತು ದೊಡ್ಡ ಕೈಗಾರಿಕೆಗಳಿಗೆ ಉತ್ಪಾದನಾ ಮಿಷನ್ ಸ್ಥಾಪಿಸಲಾಗುವುದು.‌ ಕಾರ್ಮಿಕ ಪ್ರೋತ್ಸಾಹಿತ ವಲಯಗಳ ಉತ್ಪಾದಕತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. 

ಕ್ರೆಡಿಟ್ ಗ್ಯಾರಂಟಿ ಕವರ್ ಅನ್ನು 20 ಕೋಟಿ ರೂ.ಗಳಿಗೆ ದ್ವಿಗುಣಗೊಳಿಸಲಾಗುವುದು, ಗ್ಯಾರಂಟಿ ಶುಲ್ಕವನ್ನು ಶೇಕಡಾ 1ಕ್ಕೆ ಮಿತಿಗೊಳಿಸಲಾಗುವುದು.‌ 

Union Budget: Bihar To Get National Institute Of Food Technology,  Entrepreneurship And Management – Patna Press

ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆಯ ಸಂಸ್ಥೆಯನ್ನು ಸ್ಥಾಪಿಸಲಾಗುವುದು.

ಕೃಷಿಕರ ಉತ್ತೇಜನಕ್ಕಾಗಿ ಪ್ರಧಾನ ಮಂತ್ರಿ ಧನ್ ಧ್ಯಾನ್ ಕೃಷಿ ಯೋಜನೆಯನ್ನು ಘೋಷಿಸಿದ್ದಾರೆ. ಇದು ಕಡಿಮೆ ಇಳುವರಿ, ಆಧುನಿಕ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳಲಿದೆ. ಯೋಜನೆಯಿಂದ 1.7 ಕೋಟಿ ರೈತರಿಗೆ ಪ್ರಯೋಜನ ನೀಡಲಿದೆ.

Finance Minister Nirmala Sitharaman presented a record 8th consecutive Union Budget on Saturday (February 1, 2025), focusing on four engines: Agriculture, MSME, Investment, and Exports, to drive the goal of Viksit Bharat.