ಬರೋಬ್ಬರಿ 40 ಕೋಟಿ ಮೌಲ್ಯದ ಪ್ರಾಚೀನ ವಿಗ್ರಹಗಳು ವಶಕ್ಕೆ ; ವಿದೇಶಕ್ಕೆ ಮಾರಾಟಕ್ಕೆ ಒಯ್ಯಲು ಪ್ಲಾನ್ ಹಾಕಿದ್ದಾಗಲೇ ದಾಳಿ

13-01-22 08:42 pm       HK Desk news   ದೇಶ - ವಿದೇಶ

ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ ಕಂಚು, ಪಂಚಲೋಹ ಸೇರಿದಂತೆ ವಿವಿಧ ಮಾದರಿಯ ಹಳೆಯ ಹಿಂದು ದೇವರ ವಿಗ್ರಹಗಳನ್ನು ತಮಿಳುನಾಡು ಪೊಲೀಸರು ಮಹಾಬಲಿಪುರಂನಲ್ಲಿ ವಶಕ್ಕೆ ಪಡೆದಿದ್ದಾರೆ.

ಚೆನ್ನೈ, ಜ.13 : ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ ಕಂಚು, ಪಂಚಲೋಹ ಸೇರಿದಂತೆ ವಿವಿಧ ಮಾದರಿಯ ಹಳೆಯ ಹಿಂದು ದೇವರ ವಿಗ್ರಹಗಳನ್ನು ತಮಿಳುನಾಡು ಪೊಲೀಸರು ಮಹಾಬಲಿಪುರಂನಲ್ಲಿ ವಶಕ್ಕೆ ಪಡೆದಿದ್ದಾರೆ.

ನಿಂತ ಭಂಗಿಯ ಪಾರ್ವತಿ ವಿಗ್ರಹ ಒಂದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಒಯ್ಯಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಮಹಾಬಲಿಪುರಂ ಬೀಚ್ ಬಳಿಯ ಐಡಿಯಲ್ ರೆಸಾರ್ಟ್ ನಲ್ಲಿರುವ ಇಂಡಿಯನ್ ಕಾಟೇಜ್ ಎಂಪೋರಿಯಂ ಶಾಪ್ ಗೆ ದಾಳಿ ನಡೆಸಿದಾಗ, ಅಪಾರ ಪ್ರಮಾಣದ ವಿಗ್ರಹಗಳು ಪತ್ತೆಯಾಗಿವೆ.

ಕೊಳಲು ಊದುತ್ತಿರುವ ಕೃಷ್ಣ, ನಟರಾಜ, ನಾಟ್ಯರಾಜ ಶಿವ, ಅರ್ಧ ನಾರೀಶ್ವರ, ಹತ್ತು ತಲೆಯ ರಾವಣ, ಶಿವನ ವಿಗ್ರಹಗಳು, ಭಕ್ತ ಮಹಿಳೆಯರ ಚಿತ್ರಗಳು ಹೀಗೆ ಹಲವು ಮಾದರಿಯ ಪ್ರಾಚೀನ ಕಾಲದ ವಿಗ್ರಹಗಳು ಪತ್ತೆಯಾಗಿದ್ದು, ಪೊಲೀಸರು ಅವನ್ನು ವಶಕ್ಕೆ ಪಡೆದಿದ್ದಾರೆ. ಕಾಶ್ಮೀರ ಮೂಲದ ನಿವಾಸಿ ಜಾವೇದ್ ಶಾ ಎಂಬಾತ ಈ ಶಾಪ್ ಮಾಲಕನಾಗಿದ್ದು, ಆತನನ್ನು ಪಾರ್ವತಿಯ ವಿಗ್ರಹದ ಜೊತೆಗೆ ಬಂಧಿಸಲಾಗಿದೆ. ಪ್ರಾಚ್ಯವಸ್ತು ಇಲಾಖೆಯ ತಜ್ಞ ಶ್ರೀಧರನ್ ಪೊಲೀಸರು ವಶಕ್ಕೆ ಪಡೆದಿರುವ ವಿಗ್ರಹಗಳನ್ನು ಪರಿಶೀಲನೆ ನಡೆಸಿದ್ದು, ಅವುಗಳ ಮೌಲ್ಯ 40 ಕೋಟಿಗೂ ಹೆಚ್ಚು ಎಂದು ಅಂದಾಜಿಸಿದ್ದಾರೆ.

Cops nabbed Javed, along with the Goddess Parvati idol. While Shah will be sent for remand, a probe is underway to trace the origins of the idols and to which temples they belonged.