ದುಬೈ ವಿಮಾನ ನಿಲ್ದಾಣದಲ್ಲಿ ಅಲ್ಪದರಲ್ಲಿ ತಪ್ಪಿದ ಅವಘಡ ; ಟೇಕ್ ಆಫ್ ವೇಳೆ ಒಂದೇ ರನ್ ವೇಗೆ ಬಂದಿದ್ದ ಭಾರತದ ಎರಡು ವಿಮಾನ ! 

14-01-22 09:44 pm       HK Desk news   ದೇಶ - ವಿದೇಶ

ದುಬೈ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಹೊರಟಿದ್ದ ಎರಡು ವಿಮಾನಗಳು ಒಂದೇ ರನ್ ವೇಯಲ್ಲಿ ಬಂದು ಕೆಲವೇ ಕ್ಷಣಗಳ ಅಂತರದಲ್ಲಿ ಅವಘಡದಿಂದ ತಪ್ಪಿದ ಘಟನೆ ನಡೆದಿದ್ದು ನೂರಾರು ಜನರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ. 

ನವದೆಹಲಿ, ಜ.14 : ದುಬೈ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಹೊರಟಿದ್ದ ಎರಡು ವಿಮಾನಗಳು ಒಂದೇ ರನ್ ವೇಯಲ್ಲಿ ಬಂದು ಕೆಲವೇ ಕ್ಷಣಗಳ ಅಂತರದಲ್ಲಿ ಅವಘಡದಿಂದ ತಪ್ಪಿದ ಘಟನೆ ನಡೆದಿದ್ದು ನೂರಾರು ಜನರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ. 

ದುಬೈಯಿಂದ ಹೈದರಾಬಾದ್‌ಗೆ ಒಂದು ಎಮಿರೇಟ್ಸ್ ವಿಮಾನ ಭಾನುವಾರ ರಾತ್ರಿ 9.45ಕ್ಕೆ ನಿರ್ಗಮಿಸಲಿದ್ದರೆ, ಬೆಂಗಳೂರಿಗೆ ಹೊರಟಿದ್ದ ಇನ್ನೊಂದು ವಿಮಾನ ಕೂಡ ಅದೇ ಸಮಯಕ್ಕೆ ಹಾರಾಟ ನಡೆಸಲು ಸಿದ್ಧವಾಗಿತ್ತು. ಐದು ನಿಮಿಷಗಳ ಅಂತರದಲ್ಲಿ ಈ ಎರಡೂ ವಿಮಾನಗಳು ಹಾರಾಟ ನಡೆಸಬೇಕಿತ್ತು.

ಆದರೆ ಎರಡೂ ವಿಮಾನಗಳು ಒಂದೇ ರನ್-ವೇ (30ಆರ್) ನಲ್ಲಿದ್ದವು. ಹೈದರಾಬಾದ್‌ಗೆ ಹೊರಟಿದ್ದ ವಿಮಾನವು ಟೇಕ್-ಆಫ್‌ಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ಅದೇ ದಿಕ್ಕಿನಲ್ಲಿ ಭಾರೀ ವೇಗದಲ್ಲಿ ಇನ್ನೊಂದು ವಿಮಾನ ಬರುತ್ತಿರುವುದನ್ನು ಸಿಬ್ಬಂದಿ ಗಮನಿಸಿದ್ದರು. ಕೂಡಲೇ ಎಟಿಸಿಯಿಂದ ಟೇಕ್-ಆಫ್ ಮಾಡದಂತೆ ಹೈದರಾಬಾದ್‌ಗೆ ಹೊರಟಿದ್ದ ವಿಮಾನಕ್ಕೆ ಸೂಚನೆ ಲಭಿಸಿತು. ತಕ್ಷಣ ವಿಮಾನದ ವೇಗ ಕಡಿಮೆಗೊಳಿಸಿ, ಟ್ಯಾಕ್ಸಿವೇ ಎನ್4 ಮೂಲಕ ದೂರ ಸರಿದಿತ್ತು.

ಬೆಂಗಳೂರಿಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ನಂತರ ಮೊದಲು ಟೇಕ್ ಆಫ್ ಮಾಡಿದರೆ ಹೈದರಾಬಾದ್‌ಗೆ ಹೊರಟ ವಿಮಾನ ಐದು ನಿಮಿಷದ ನಂತರ ನಿರ್ಗಮಿಸಿದೆ. ಈ ಲೋಪ ಸಾಕಷ್ಟು ಚರ್ಚೆಗೀಡಾಗಿದ್ದು ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

A massive collision between two India-bound Emirates planes that were scheduled to take off at a difference of five minutes was averted at Dubai airport saving hundreds of lives on Sunday.  According to reports, the possible collision started while both flights, taking off from the Dubai airport, came on one runway.