ಬ್ರೇಕಿಂಗ್ ನ್ಯೂಸ್
15-01-22 08:56 pm HK Desk news ದೇಶ - ವಿದೇಶ
ಲಂಡನ್, ಜ.15 : 10ನೇ ಶತಮಾನದ್ದು ಎನ್ನಲಾದ ಉತ್ತರ ಪ್ರದೇಶದ ಬುಂದೇಲಖಂಡ ಜಿಲ್ಲೆಯ ಲೋಖಾರಿ ದೇವಸ್ಥಾನದಿಂದ ಕಳವಾಗಿದ್ದ ಮೇಕೆ ಮುಖಧಾರಿ, ಯೋಗ ಭಂಗಿಯಲ್ಲಿರುವ ಯೋಗಿನಿ ದೇವಿಯ ವಿಗ್ರಹ ಲಂಡನ್ನಲ್ಲಿ ಪತ್ತೆಯಾಗಿದ್ದು, ಅದನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.
1980ರಲ್ಲಿ ಬುಂದೇಲಖಂಡದ ಲೋಖಾರಿ ದೇವಸ್ಥಾನದಿಂದ ನಾಪತ್ತೆಯಾಗಿದ್ದ ಯೋಗಿನಿ ವಿಗ್ರಹವನ್ನು ಅಕ್ರಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಮೂಲಕ ಲಂಡನ್ನಿಗೆ ಒಯ್ಯಲಾಗಿತ್ತು. ಅಲ್ಲಿನ ಗಾರ್ಡನ್ ಒಂದರಲ್ಲಿ ಪತ್ತೆಯಾಗಿರುವ ವಿಗ್ರಹವನ್ನು ಉತ್ತರ ಪ್ರದೇಶದಲ್ಲಿ ಕಳವಾಗಿದ್ದ ಯೋಗಿನಿ ವಿಗ್ರಹವೆಂದು ಗುರುತಿಸಲಾಗಿದ್ದು, ಅದನ್ನು ಭಾರತೀಯ ಹೈಕಮಿಷನರ್ ಗಾಯತ್ರಿ ಕುಮಾರ್ ಅವರಿಗೆ ಔಪಚಾರಿಕವಾಗಿ ಹಸ್ತಾಂತರ ಮಾಡಲಾಗಿದೆ. ವಿಗ್ರಹವನ್ನು ಭಾರತೀಯ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರ ಮಾಡಲಿದ್ದಾರೆ.
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಪುರಾತನ ವಿಗ್ರಹವೊಂದನ್ನು ಮರಳಿ ಪಡೆಯುವ ಯೋಗ ಸಿಕ್ಕಿದ್ದು ಅತ್ಯಂತ ಸಂತಸ ತಂದಿದೆ. ಕಳೆದ ಅಕ್ಟೋಬರ್ ನಲ್ಲಿ ಈ ವಿಗ್ರಹ ಪತ್ತೆಯಾಗಿತ್ತು. ಆನಂತರ ಇದನ್ನು ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿತ್ತು. ಭಾರತದಲ್ಲಿ ನ್ಯಾಶನಲ್ ಮ್ಯೂಸಿಯಂನಲ್ಲಿ ವಿಗ್ರಹವನ್ನು ಸಂರಕ್ಷಿಸಿಡುವ ಬಗ್ಗೆ ಇಂಗ್ಲೆಂಡ್ ಸರಕಾರಕ್ಕೆ ಭರವಸೆ ನೀಡಲಾಗಿದೆ ಎಂದು ಗಾಯತ್ರಿ ಕುಮಾರ್ ತಿಳಿಸಿದ್ದಾರೆ.
ಗಾಯತ್ರಿ ಕುಮಾರ್ ಈ ಹಿಂದೆ ಫ್ರಾನ್ಸ್ ನಲ್ಲಿ ಹೈಕಮಿಷನರ್ ಆಗಿದ್ದಾಗಲೂ ಪ್ಯಾರಿಸ್ ನಲ್ಲಿ ಲೋಖಾರಿ ದೇವಸ್ಥಾನದಿಂದ ಕಳವಾಗಿದ್ದ ಪುರಾತನ ವಿಗ್ರಹ ಪತ್ತೆಯಾಗಿತ್ತು. 2013ರಲ್ಲಿ ಪತ್ತೆಯಾದ ಕೋಣದ ಮುಖದ ವೃಷಾಣನ ಯೋಗಿನಿ ಎಂಬ ವಿಶಿಷ್ಟ ವಿಗ್ರಹವನ್ನು ಬಳಿಕ ಭಾರತಕ್ಕೆ ಹಸ್ತಾಂತರಿಸಿ, ದೆಹಲಿಯ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಇಡಲಾಗಿತ್ತು. ಈ ಬಾರಿಯೂ ಅದೇ ದೇವಸ್ಥಾನದ ಮತ್ತೊಂದು ವಿಗ್ರಹ ಪತ್ತೆಯಾಗಿದ್ದು ನಿಜಕ್ಕೂ ಕಾಕತಾಳೀಯ ಎಂದು ಗಾಯತ್ರಿ ಕುಮಾರ್ ಸ್ಮರಿಸಿದ್ದಾರೆ.
ತಂತ್ರ ವಿದ್ಯೆಯ ಪೂಜೆಗಳಲ್ಲಿ ಆರಾಧಿಸಲ್ಪಡುವ ಅತ್ಯಂತ ಕಾರಣಿಕ ಸ್ತ್ರೀ ದೇವತೆಗಳಲ್ಲಿ ಯೋಗಿನಿ ಕೂಡ ಒಂದು. 64 ಸ್ತ್ರೀ ದೇವತೆಗಳನ್ನು ಸಮೂಹ ನೆಲೆಯಲ್ಲಿ ಆರಾಧಿಸುವುದರಿಂದ ಅಪರಿಮಿತ ಶಕ್ತಿ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಮೇಕೆ ಮುಖದ ವಿಗ್ರಹವು ಲೋಖಾರಿ ದೇಗುಲದಿಂದ 1980ರಲ್ಲಿ ನಾಪತ್ತೆಯಾಗಿದ್ದು, ಆನಂತರ 1988ರಲ್ಲಿ ಲಂಡನ್ನಿನ ಆರ್ಟ್ ಮಾರ್ಕೆಟ್ ನಲ್ಲಿ ವಿಗ್ರಹವನ್ನು ಪತ್ತೆ ಮಾಡಲಾಗಿತ್ತು. ಆನಂತರ ವಿಗ್ರಹದ ಮಾಹಿತಿ ಇರಲಿಲ್ಲ.
ಲಂಡನ್ನಲ್ಲಿ ಕ್ರಿಸ್ ಮೆರಿನಲ್ಲೋ ಎಂಬ ಮಹಿಳೆ 15 ವರ್ಷಗಳ ಹಿಂದೆ ದೊಡ್ಡ ಬಂಗಲೆಯನ್ನು ಖರೀದಿಸಿದ್ದರು. ಅದರಲ್ಲಿ ಬೃಹತ್ ಮನೆ ಮತ್ತು ಸುಂದರ ಗಾರ್ಡನ್ ಇತ್ತು. ಹಿಂದಿನ ಮಾಲೀಕರು ಆ ಗಾರ್ಡನಲ್ಲಿ ಅಪರೂಪದ ವಿಗ್ರಹಗಳು, ಪ್ರತಿಮೆಗಳನ್ನು ಇರಿಸಿದ್ದರು. ಆ ಪೈಕಿ ಭಾರತೀಯ ಮೂಲದ ವಿಗ್ರಹದ ಬಗ್ಗೆ ಕುತೂಹಲ ಉಂಟಾಗಿ ಮೆರಿನಲ್ಲೋ, ಭಾರತದ ಪ್ರಾಚ್ಯವಸ್ತು ಆಸಕ್ತರ ಗಮನಕ್ಕೆ ತಂದಿದ್ದರು. ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ಸಂಸ್ಥೆಯ ಸಹ ಸಂಸ್ಥಾಪಕ ವಿಜಯ ಕುಮಾರ್ ಈ ಬಗ್ಗೆ ತಿಳಿದು ವಿಗ್ರಹದ ಬಗ್ಗೆ ಅಧ್ಯಯನ ನಡೆಸಿದ್ದರು. ಈ ವೇಳೆ, ಮೇಕೆ ಮುಖದ ವಿಗ್ರಹ ಲೋಖಾರಿ ದೇಗುಲದಿಂದ ಕಳವಾಗಿದ್ದ ಯೋಗಿನಿ ವಿಗ್ರಹ ಎಂಬುದು ತಿಳಿದುಬಂದಿತ್ತು. ಆನಂತರ, ಸದ್ರಿ ಮಹಿಳೆ ವಿಗ್ರಹವನ್ನು ಭಾರತಕ್ಕೆ ಯಾವುದೇ ಷರತ್ತಿಲ್ಲದೆ ಹಸ್ತಾಂತರಿಸಲು ಒಪ್ಪಿಕೊಂಡಿದ್ದರು. ಅದರಂತೆ, ಹಸ್ತಾಂತರ ಪ್ರಕ್ರಿಯೆ ನಡೆದಿತ್ತು.
An Indian idol dating back to the 10th century, which was illegally removed from a village temple in Uttar Pradesh over 40 years ago and discovered in a garden in England, was returned to India on the occasion of Makar Sankranti on January 14.
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
16-12-25 10:35 pm
Mangalore Correspondent
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am