ರಾಮಮಂದಿರ ಶಿಲಾನ್ಯಾಸಕ್ಕೆ ಪೇಜಾವರ ಸ್ವಾಮೀಜಿ, ವೀರೇಂದ್ರ ಹೆಗ್ಗಡೆಗೆ ಆಹ್ವಾನ

03-08-20 07:33 am       Headline Karnataka News Network   ಕರಾವಳಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್ 5 ಭೂಮಿ ಪೂಜೆ ನೆರೆವೇರಲಿದ್ದು ಈ ಪೈಕಿ ಇಬ್ಬರು ಕರಾವಳಿಯ ಧಾರ್ಮಿಕ ಮುಖಂಡರಾಗಿರುವ ಪೇಜಾವರ ಸ್ವಾಮೀಜಿ, ವೀರೇಂದ್ರ ಹೆಗ್ಗಡೆಗೆ ಆಹ್ವಾನಿಸಲಾಗಿದೆ.

ಉಡುಪಿ, ಆ 3: ಐತಿಹಾಸಿಕ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದೆ. ಬಹುವರ್ಷಗಳ ಕನಸಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್ 5 ಭೂಮಿ ಪೂಜೆ ನೆರವೇರಲಿದೆ. ಅಂದು ನಡೆಯುವ ಭೂಮಿ ಪೂಜೆಗೆ ರಾಜ್ಯದಿಂದ ಕೇವಲ ಐವರನ್ನು ಆಹ್ವಾನಿಸಲಾಗಿದೆ. ಈ ಪೈಕಿ ಇಬ್ಬರು ಕರಾವಳಿಯ ಧಾರ್ಮಿಕ ಮುಖಂಡರಾಗಿದ್ದಾರೆ.

ಕೊವೀಡ್ ಕಾರಣಕ್ಕೆ ಕಾರ್ಯಕ್ರಮಕ್ಕೆ ಒಟ್ಟು 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು ರಾಜ್ಯದಿಂದ ರಾಮ ಮಂದಿರ ನಿರ್ಮಾಣ ಟ್ರಸ್ಟಿ ಗಳಲ್ಲಿ ಓರ್ವರಾದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆಯವರಿಗೆ ಅಹ್ವಾನ ನೀಡಲಾಗಿದೆ.

ಇದಲ್ಲದೆ ಶೃಂಗೇರಿ ಮಠ, ಆದಿಚುಂಚನಗಿರಿ ಶ್ರೀಗಳಿಗೆ ಹಾಗೂ ಸುತ್ತೂರು ಮಠಾಧೀಶರಿಗೆ ಆಹ್ವಾನ ಬಂದಿದೆ. ರಾಮಮಂದಿರಕ್ಕೆ 1989 ರಲ್ಲಿ ಶಿಲಾನ್ಯಾಸ ನಡೆದಿತ್ತು. ಈಗ ನಡೆಯುತ್ತಿರುವುದು ಭೂಮಿಪೂಜೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಲಗಳು ತಿಳಿಸಿವೆ.