ಗುತ್ತಿಗೆದಾರರ ಬಿಲ್ ಬಗ್ಗೆಯೇ ತನಿಖೆ ; ಕಾಮಗಾರಿ ಗುಣಮಟ್ಟ ಚೆಕ್ ಮಾಡಿಯೇ ಬಿಲ್ ಪಾಸ್ ಮಾಡೋದು ; ಸಚಿವ ದಿನೇಶ್ ಗುಂಡೂರಾವ್ 

11-08-23 03:21 pm       Mangalore Correspondent   ಕರಾವಳಿ

ಗುತ್ತಿಗೆದಾರರ ಬಿಲ್ ಬಾಕಿ ವಿಚಾರದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಕೆಲಸ ಆಗದೇ ಬಿಲ್ ಗಳಾಗಿರುವ ಬಗ್ಗೆ, ಅನವಶ್ಯಕ ಕೆಲಸ, ಹೆಚ್ಚು ಹಣ ಪಡೆದ ಕೆಲಸಗಳ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಮಂಗಳೂರು, ಆಗಸ್ಟ್ 11: ಗುತ್ತಿಗೆದಾರರ ಬಿಲ್ ಬಾಕಿ ವಿಚಾರದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಕೆಲಸ ಆಗದೇ ಬಿಲ್ ಗಳಾಗಿರುವ ಬಗ್ಗೆ, ಅನವಶ್ಯಕ ಕೆಲಸ, ಹೆಚ್ಚು ಹಣ ಪಡೆದ ಕೆಲಸಗಳ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿರುವ ಕಮಿಷನ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೇಲಿನಂತೆ ಉತ್ತರ ನೀಡಿದ್ದಾರೆ. ಬೆಂಗಳೂರಿನ ರಸ್ತೆಗಳು, ಸಿವಿಲ್ ವಿಚಾರ ಮಾತ್ರವಲ್ಲ ಕಸದ ವಿಚಾರದ ಬಗ್ಗೆಯೂ ತನಿಖೆ ಮಾಡುತ್ತೇವೆ. ಉತ್ತಮ ಅಧಿಕಾರಿಗಳ ನೇತೃತ್ವದಲ್ಲಿ ಈ ತನಿಖೆ ನಡೀತಾ ಇದೆ. ನಿಷ್ಪಕ್ಷಪಾತ ತನಿಖೆ ಮಾಡುವುದಕ್ಕಾಗಿ ಅಧಿಕಾರಿಗಳ ತಂಡ ರಚನೆಯಾಗಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗದೇ ಇರೋದು ದೊಡ್ಡ ಸಮಸ್ಯೆ. ಆದರೆ ಅದು ಈಗಿನ ಸಮಸ್ಯೆ ಅಲ್ಲ, ಎರಡು ವರ್ಷದಿಂದ ಆಗಿಲ್ಲ. 

ಬಿಲ್ ಪಾವತಿಗೆ ತೊಂದರೆ ಇಲ್ಲ, ಆದರೆ ಕೆಲಸಗಳು ಆಗಿದ್ಯಾ ಎಂಬ ಬಗ್ಗೆ ತನಿಖೆ ಆಗುತ್ತದೆ.‌ ಮುಂದಿನ ಮೂವತ್ತು‌ ದಿನಗಳ ಒಳಗಡೆ ತನಿಖಾ ವರದಿ ಸಿಗಲಿದೆ.‌ ನ್ಯಾಯಯುತವಾಗಿ ಆಗಿರುವ ಕೆಲಸಗಳಿಗೆ ಬಿಲ್ ಪಾವತಿ ಆಗಲಿದೆ.‌ ಕಳಪೆ ಮತ್ತು ಕೆಲಸ ಆಗದೇ ಇದ್ರೆ ನಾವು ಬಿಲ್ ಕೊಡಲ್ಲ. ಸಾರ್ವಜನಿಕರ ಹಣ ಅದು, ನಾವು ನೋಡಿ ಕೊಡ್ತೇವೆ ಎಂದರು ದಿನೇಶ್ ಗುಂಡೂರಾವ್. 

ಡಿಸಿಎಂ ವಿರುದ್ಧ ಆರೋಪ ಮಾಡಿರುವುದಕ್ಕೆ ಯಾವುದೇ ಹುರುಳಿಲ್ಲ. ಕೆಲವರು ಅನಾವಶ್ಯಕವಾಗಿ ಪ್ರಚಾರ ಮಾಡ್ತಾ ಇದಾರೆ. ನಮ್ಮ ಗ್ಯಾರಂಟಿ ಸ್ಕೀಮ್ ಜನರಿಗೆ ಮುಟ್ಟುತ್ತಿದೆ, ಅನುಕೂಲ ಆಗ್ತಾ ಇದೆ. ಜನರ ಅಭಿಪ್ರಾಯಕ್ಕೆ ಮಸಿ ಬಳಿಯಲು, ಕೆಟ್ಟ ಹೆಸರು ತರಲು ಈ ಆರೋಪ ಮಾಡ್ತಿದಾರೆ. ನಮ್ಮತ್ರ ಪೆನ್ ಡ್ರೈವ್ ಇದೆ, ಸಿಡಿ ಇದೆ, ದಾಖಲೆ ಇದೆ ಅಂತ ಸುಮ್ಮನೆ ಹೇಳ್ತಾ ಇದಾರೆ. ನಾವು ಅಥವಾ ಡಿಸಿಎಂ ಭ್ರಷ್ಟಾಚಾರ ತಡೆಯಲು ಪ್ರಯತ್ನ ಮಾಡ್ತಾ ಇದೀವಿ. ಆದರೆ ವಿರೋಧ ಪಕ್ಷದವರು ಜನರ ದಾರಿ ತಪ್ಪಿಸಲು ಆಧಾರ ರಹಿತವಾಗಿ ಮಾತನಾಡ್ತಿದಾರೆ. ತನಿಖೆ ಶುರುವಾಗಿದೆ, ಬಿಜೆಪಿಯ ಕರ್ಮಕಾಂಡ ಹೊರಗೆ ಬರಲು ಹೆಚ್ಚು ಸಮಯ ಬೇಕಾಗಿಲ್ಲ‌ ಎಂದು ಹೇಳಿದ್ದಾರೆ.

A thorough probe will be conducted into the issue of pending bills of contractors. Health Minister Dinesh Gundu Rao said that the government will conduct an inquiry into the non-work bills, unnecessary work and over-paid works.