ಹರೇಕಳದ ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ನಾಟಿ ; ಇಂಗ್ಲಿಷ್ ಮೀಡಿಯಂ ಶಾಲೆ ಶಿಕ್ಷಕರಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕೃಷಿ ಪಾಠ 

11-08-23 06:55 pm       Mangalore Correspondent   ಕರಾವಳಿ

ಕೃಷಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಹರೇಕಳದ ಕುತ್ತಿಮುಗೇರು ಎಂಬಲ್ಲಿ ಹಡಿಲು ಬಿದ್ದಿದ್ದ ನಾಲ್ಕು ಗದ್ದೆಗಳಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಂದಲೇ ಭತ್ತದ ನಾಟಿಯನ್ನು ನಡೆಸಿ ಗಮನ ಸೆಳೆದಿದ್ದಾರೆ.  

ಉಳ್ಳಾಲ, ಆ.11: ಕೃಷಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಹರೇಕಳದ ಕುತ್ತಿಮುಗೇರು ಎಂಬಲ್ಲಿ ಹಡಿಲು ಬಿದ್ದಿದ್ದ ನಾಲ್ಕು ಗದ್ದೆಗಳಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಂದಲೇ ಭತ್ತದ ನಾಟಿಯನ್ನು ನಡೆಸಿ ಗಮನ ಸೆಳೆದಿದ್ದಾರೆ.  

ಶುಕ್ರವಾರ ಬೆಳಗ್ಗೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸುಮಾರು 80ರಷ್ಟು ಹೈಸ್ಕೂಲ್ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಗದ್ದೆಯಲ್ಲಿ ಭತ್ತದ ನಾಟಿ ನಡೆಸಿದರು.
ವಿದ್ಯಾರತ್ನ ಶಾಲಾ ಸಂಚಾಲಕರು, ಕೃಷಿಕರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ವಿದ್ಯಾರ್ಥಿಗಳಿಗೆ ಭತ್ತದ ನಾಟಿಯ ಬಗ್ಗೆ ಮಾಹಿತಿ ನೀಡಿದರು. ಕೃಷಿಯೇ ನಮ್ಮ‌ ಮೂಲ. ನಮ್ಮ‌‌ ಹಿರಿಯರು ಕಷ್ಟ ಪಟ್ಟು ಬೇಸಾಯ ಮಾಡಿದ್ದರಿಂದ ನಾವಿಂದು ಈ ಸ್ಥಾನಕ್ಕೆ ಬರುವಂತಾಗಿದೆ. ಇಂದಿನ ದಿವಸಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ಆಳುಗಳೇ ಸಿಗದೇ ಯಂತ್ರಗಳ ಮೊರೆ ಹೋಗುವಂತಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲೇ ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಪ್ರತೀ ವರ್ಷ ನಡೆಸುತ್ತಿದ್ದು ಇಂದು ನೆಟ್ಟ ಪೈರು ದೊಡ್ಡದಾದಾಗ ಭತ್ತದ ಕಟಾವನ್ನೂ ವಿದ್ಯಾರ್ಥಿಗಳಿಂದಲೇ ನಡೆಸಲಾಗುವುದು ಎಂದರು. ವಿದ್ಯಾರ್ಥಿನಿ ರಿಷಲ್ ರಿಯೋನ ಡಿಸೋಜ ಮಾತನಾಡಿ ನನ್ನ ತಂದೆ, ಅಜ್ಜಂದಿರು ಕೃಷಿಕರಾದರೂ ಇತ್ತೀಚಿಗೆ ನಾವು ಕೃಷಿಯಿಂದ ವಿಮುಕ್ತರಾಗಿದ್ದೇವೆ. ಶಾಲಾ ಶಿಕ್ಷಕರು ಮತ್ತೆ ಕೃಷಿಯನ್ನ ನೆನಪಿಸುವ ಉತ್ತಮ‌ ಕಾರ್ಯ ನಡೆಸಿದ್ದು ಸಂತಸವಾಗಿದೆ ಎಂದರು.

Mangalore Agriculture lessons for high school students from English medium school teachers at Ullal.