ಬ್ರೇಕಿಂಗ್ ನ್ಯೂಸ್
20-12-23 12:06 pm Mangalore Correspondent ಕರಾವಳಿ
ಮಂಗಳೂರು, ಡಿ.19: ದೇಶದ ಮುಂಚೂಣಿ ವಿಶ್ವವಿದ್ಯಾನಿಲಯಗಳು, ವಿದೇಶದ ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಇಲ್ಲೊಂದು ಸುವರ್ಣ ಅವಕಾಶ. ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ Wizdom ED ಹೆಸರಲ್ಲಿ ಉನ್ನತ ಶಿಕ್ಷಣ ಮೇಳ ಮಂಗಳೂರಿನಲ್ಲಿ ಆಯೋಜನೆಗೊಂಡಿದೆ.
ಇದೇ ಡಿ.23ರಂದು ನಗರದ ನವಭಾರತ್ ವೃತ್ತದಲ್ಲಿರುವ ಹೊಟೇಲ್ ಓಶ್ಯನ್ ಪರ್ಲ್ ಪೆಸಿಫಿಕ್ ಸಭಾಂಗಣದಲ್ಲಿ ಬೆಳಗ್ಗೆ 9.30ರಿಂದ ಅಪರಾಹ್ನ 3ರ ವರೆಗೆ ಸಮ್ಮೇಳನ ನಡೆಯಲಿದೆ. ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ ಆಗಲಿದ್ದು, ತಾವು ಇಚ್ಚಿಸುವ ವಿವಿಗಳಲ್ಲಿ ಸೇರಲು ಇಲ್ಲಿ ಅವಕಾಶ ದೊರೆಯಲಿದೆ. ಹೈಯಲ್ ಎಜುಕೇಶನ್ ಫೇರ್ ನಲ್ಲಿ ದೇಶ- ವಿದೇಶದ 40ರಷ್ಟು ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಯುನೈಟೆಡ್ ಕಿಂಗ್ ಡಮ್, ಜರ್ಮನಿ, ಫ್ರಾನ್ಸ್, ಇಟಲಿ, ಮಾಲ್ಟಾ, ಹಂಗೇರಿ, ಅಮೆರಿಕ ಮುಂತಾದ ದೇಶಗಳ ಮುಂಚೂಣಿ ವಿವಿಗಳ ಪ್ರತಿನಿಧಿಗಳು ಈ ಫೇರ್ ನಲ್ಲಿ ಭಾಗವಹಿಸಲಿದ್ದಾರೆ.
ಉನ್ನತ ಶಿಕ್ಷಣಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯವನ್ನೂ ಸ್ಥಳದಲ್ಲೇ ಬ್ಯಾಂಕುಗಳು ಮಾಡಿಕೊಡಲಿವೆ. ಯೂನಿಯನ್ ಬ್ಯಾಂಕ್, ಎಚ್ ಡಿಎಫ್ ಸಿ, ಬ್ಯಾಂಕ್ ಆಫ್ ಬರೋಡಾ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯದ ಮಾರ್ಗದರ್ಶನ ನೀಡಲಿದ್ದಾರೆ. ಇದಲ್ಲದೆ, ನುರಿತ ತಜ್ಞರಿಂದ ಉಪನ್ಯಾಸ ಇರಲಿದ್ದು, ಶಿಕ್ಷಣ ಸಾಲ, ಸ್ಕಾಲರ್ ಶಿಪ್, ದೇಶ- ವಿದೇಶದಲ್ಲಿ ಸಿಗಬಲ್ಲ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. 20ರಷ್ಟು ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದ್ದಾರೆ.
ಸಮಾವೇಶದಲ್ಲಿ ಐದು ಮಾದರಿಯ ಸಂವಾದ ಕಾರ್ಯಕ್ರಮ ಇರಲಿದ್ದು, ದುಬೈ ಮೂಲದ ಉದ್ಯಮಿ ಎಜು ಕೇರ್ ಡೈರೆಕ್ಟರ್ ಅಭಿಲಾಶ್ ಕ್ಷತ್ರಿಯ ಭಾಗವಹಿಸಲಿದ್ದಾರೆ. ಜೆಪಿ ಮೋರ್ಗನ್ ಚೇಸ್ ಉಪಾಧ್ಯಕ್ಷ ಬರ್ನಾರ್ಡ್ ಚೆಟ್ಟಿ, ವಿಸ್ಡಮ್ ಎಜು ಕೇರ್ ಸಹ ಸಂಸ್ಥಾಪಕ ಡಾ. ಗುರು ತೇಜ್, ವಿಸ್ಟಮ್ ಎಜು ಸಹ ಸ್ಥಾಪಕ ಡಾ.ಫ್ರಾನ್ಸಿಸ್ ತೇಜ್, ಅಮೆರಿಕದ ಉದ್ಯಮಿ ದೀಪಕ್ ಬೋಳೂರು, ಫ್ರೆಸ್ಟನ್ ನಾಲೆಜ್ ಫೌಂಡೇಶನ್ ಸ್ಥಾಪಕ ನಿರ್ದೇಶಕ ಪೀಟರ್ ಪಿಂಟೋ ತಮ್ಮ ಅನುಭವ, ಮಾಹಿತಿ ಹಂಚಿಕೊಳ್ಳಲಿದ್ದಾರೆ. ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರಲಿದ್ದು, ಬೆಳಗ್ಗೆ 9.30ರಿಂದ ಮಧ್ಯಾಹ್ನ 3.10ರ ವರೆಗೆ ಕಾರ್ಯಕ್ರಮ ನಡೆಯಲಿದೆ.
In a significant stride towards shaping the academic futures of aspiring scholars, WiZdom Ed is set to host a transformative event, the WiZdom Ed Higher Education Fair and Conclave 2023. Scheduled to take place on December 23, at Hotel Ocean Pearl in Mangaluru, this event promises to be a landmark occasion for students seeking to explore educational opportunities both in India and abroad.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am