ಬ್ರೇಕಿಂಗ್ ನ್ಯೂಸ್
20-12-23 06:50 pm Mangalore Correspondent ಕರಾವಳಿ
ಉಳ್ಳಾಲ, ಡಿ.20: ಕರಾವಳಿಯಲ್ಲಿ ಶಾಲೆಯ ವಾರ್ಷಿಕೋತ್ಸವದಲ್ಲೂ ಧರ್ಮದಂಗಲ್ ಸದ್ದು ಮಾಡಿದೆ. ಕೋಟೆಕಾರಿನ ಕಾರ್ಮೆಲ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದಂದು ಶಾಲಾಡಳಿತವು ವಾಹನಗಳನ್ನ ರಸ್ತೆಗಳಲ್ಲೇ ನಿಲ್ಲಿಸಿ ಹಿಂದೂ ವ್ಯಾಪಾರಿಗಳಿಗೆ ಅಡ್ಡಿ ಪಡಿಸಿದ್ದಲ್ಲದೆ ಪೊಲೀಸರನ್ನ ಕರೆಸಿ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರನ್ನ ಓಡಿಸಲು ಪ್ರಯತ್ನಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಕೋಟೆಕಾರಿನ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಸಂಜೆ ಶಾಲಾ ವಾರ್ಷಿಕೋತ್ಸವವನ್ನ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷವೂ ಶಾಲಾ ವಾರ್ಷಿಕೋತ್ಸವದಂದು ಬಡ ಚರುಂಬುರಿ ಮತ್ತು ಐಸ್ ಕ್ರೀಂ ವ್ಯಾಪಾರಿಗಳು ಶಾಲೆಯ ಗೇಟಿನ ಹೊರಗಡೆ ವ್ಯಾಪಾರ ನಡೆಸುತ್ತಿದ್ದರು. ಆದರೆ ಈ ಬಾರಿ ಶಾಲಾಡಳಿತವು ವಾರ್ಷಿಕೋತ್ಸವಕ್ಕೆ ಬಂದ ಪೋಷಕರ ವಾಹನಗಳನ್ನ ಗೇಟ್ ಒಳಗಡೆ ಬಿಡದೆ ಗೇಟಿಗೆ ಬೀಗ ಜಡಿದಿದೆ. ಶಾಲೆಯ ಕ್ಯಾಂಪಸ್ ಒಳಗಡೆ ಪಾರ್ಕಿಂಗ್ ಲಾಟ್ ಅಲ್ಲದೆ ವಿಶಾಲ ಮೈದಾನವಿದ್ದರೂ ಉದ್ದೇಶ ಪೂರ್ವಕವಾಗಿ ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲೇ ಪೋಷಕರು ವಾಹನಗಳನ್ನ ಪಾರ್ಕ್ ಮಾಡುವಂತೆ ಮಾಡಿದ್ದಾರೆ. ಶಾಲೆಯ ಗೇಟ್ ಬಳಿ ವ್ಯಾಪಾರ ಶುರು ಹಚ್ಚಿದ್ದ ಚರ್ಮುರಿ ಸ್ಟಾಲ್ ಗಳ ಮುಂದೆಯೇ ವಾಹನಗಳನ್ನ ಪಾರ್ಕ್ ಮಾಡಲಾಗಿದೆ.
ಇಷ್ಟಲ್ಲದೆ ಶಾಲಾಡಳಿತವು ಸ್ಥಳಕ್ಕೆ ಉಳ್ಳಾಲ ಪೊಲೀಸರನ್ನ ಕರೆಸಿ ವ್ಯಾಪಾರಿಗಳನ್ನ ಓಡಿಸಲು ಪ್ರಯತ್ನಿಸಿದೆ. ಸ್ಥಳಕ್ಕೆ ಬಂದ ಉಳ್ಳಾಲ ಎಎಸ್ ಐ ವೆಂಕಟೇಶ್ ಚಂದ್ರಗಿರಿ ಎಂಬವರು ಬಡಪಾಯಿ ಚರ್ಮುರಿ ವ್ಯಾಪಾರಸ್ಥ ಮಹಿಳೆಯರಿಗೆ ಆವಾಝ್ ಹಾಕಿ ಸ್ಥಳದಿಂದ ತೆರಳುವಂತೆ ಗದರಿದ್ದಾರೆ. ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲೇ ವಾಹನಗಳನ್ನ ಪಾರ್ಕ್ ಮಾಡಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ ಶಾಲಾಡಳಿತದ ಪರವೇ ಬ್ಯಾಟ್ ಬೀಸಿದ ಎಎಸ್ ಐ ವೆಂಕಟೇಶನನ್ನ ವ್ಯಾಪಾರಿಗಳು ತರಾಟೆಗೆ ತೆಗೆದಿದ್ದು ವೆಂಕಟೇಶ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ನಾವು ಬೀದಿ ಬದಿ ವ್ಯಾಪಾರಿಗಳು. ಸರಕಾರವೇ ನಮಗೆ ಸಾಲ ನೀಡಿದ್ದು. ಸಣ್ಣ ವ್ಯಾಪಾರ ಮಾಡುತ್ತಿದ್ದೇವೆ. ಇಂತವರು ನಮ್ಮನ್ನ ವ್ಯಾಪಾರ ಮಾಡಲು ಬಿಡದಿದ್ದರೆ ನಾವು ಸಾಲವನ್ನ ಮರು ಪಾವತಿಸುವುದಾದರೂ ಹೇಗೆಂದು ಚರ್ಮುರಿ ವ್ಯಾಪಾರಸ್ಥ ಮಹಿಳೆಯರು ಅಲವತ್ತು ತೋಡಿದ್ದಾರೆ. ಹೆದ್ದಾರಿಯ ಸರ್ವಿಸ್ ರಸ್ತೆಯುದ್ದಕ್ಕೂ ಪಾರ್ಕಿಂಗ್ ಮಾಡಿ ಸಂಚಾರಕ್ಕೆ ತೊಡಕುಂಟು ಮಾಡಿದ ಶಾಲಾಡಳಿತದ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತೆ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ಹಿಂದು ಸಮುದಾಯದ ಮೇಲೆ ಹಗೆ ಸಾಧನೆ..?
ಕಾರ್ಮೆಲ್ ಶಾಲೆಯಲ್ಲಿ ತಿಂಗಳ ಹಿಂದೆ ಶಾಲಾಡಳಿತವೇ ತಲೆ ತಗ್ಗಿಸುವಂತಹ ಘಟನೆ ನಡೆದಿದ್ದು ಆ ವಿಚಾರ ಪಿಟಿಎ ಸಭೆಯಲ್ಲೂ ಪ್ರಸ್ತಾಪವಾಗಿತ್ತು. ಪಿಟಿಎ ಸಭೆಯಲ್ಲಿ ಪ್ರಸ್ತಾಪವಾದ ವಿಚಾರವು ಮಾಧ್ಯಮಗಳಿಗೆ ಆಹಾರವಾದದ್ದು ಹೇಗೆಂದು ಶಾಲಾ ಪ್ರಾಂಶುಪಾಲರು ಹಿಂದೂ ಸಿಬ್ಬಂದಿಗಳ ಮೇಲೆಯೇ ಅನುಮಾನ ಪಟ್ಟು ವ್ಯಗ್ರರಾಗಿದ್ದರು ಎನ್ನಲಾಗಿದೆ. ಬುಧವಾರ ನಡೆದ ವಾರ್ಷಿಕೋತ್ಸವಕ್ಕೂ ಮೈಕ್, ಕ್ಯಾಟರಿಂಗ್, ವಿಡಿಯೋ ರೆಕಾರ್ಡಿಂಗನ್ನು ಕ್ರೈಸ್ತ ಧರ್ಮೀಯರಿಗೆ ಶಾಲಾಡಳಿತ ನೀಡಿದ್ದು ಹಿಂದೂಗಳನ್ನ ದೂರ ಇಟ್ಟಿರೋದಾಗಿ ತಿಳಿದು ಬಂದಿದೆ. ಹಿಂದೂ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿರುವ ಶಾಲೆಯಲ್ಲಿ ಧರ್ಮ ದಂಗಲ್ ಶುರುವಾದದ್ದು ವಿಪರ್ಯಾಸ.
Mangalore Kotekar Carmel school annual day, fight for Hindu Muslim stalls. Muslim stalls have been given first priority whereas Hindu stalls have been said to vacate place by Police.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am