Mangalore Annamalai, Naxals: ನಕ್ಸಲ್ ಶರಣಾಗತಿ ಬಗ್ಗೆ ಗೃಹ ಸಚಿವರಿಗೇ ಮಾಹಿತಿ ಇಲ್ಲ, ಉಲ್ಟಾ ಪಲ್ಟಾ ಮಾತಾಡುತ್ತಾರೆ, ಒಟ್ಟು ಪ್ರಕ್ರಿಯೆ ಸಂಶಯ ಮೂಡಿಸುತ್ತದೆ ; ಅಣ್ಣಾಮಲೈ ಟೀಕೆ 

11-01-25 12:44 pm       Mangaluru Correspondent   ಕರಾವಳಿ

ರಾಜ್ಯದಲ್ಲಿ ನಡೆದ ಆರು ಮಂದಿ ನಕ್ಸಲರ ಶರಣಾಗತಿ ಪ್ರಕ್ರಿಯೆ ಸಂಶಯ ಮೂಡಿಸುತ್ತಿದೆ. ವಿಕ್ರಂ ಗೌಡ ಎನ್ಕೌಂಟರ್ ನಡೆಸಿದ್ದೂ ಸಂಶಯ ಮೂಡಿಸುವಂತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ. ‌

ಮಂಗಳೂರು, ಜ.11: ರಾಜ್ಯದಲ್ಲಿ ನಡೆದ ಆರು ಮಂದಿ ನಕ್ಸಲರ ಶರಣಾಗತಿ ಪ್ರಕ್ರಿಯೆ ಸಂಶಯ ಮೂಡಿಸುತ್ತಿದೆ. ವಿಕ್ರಂ ಗೌಡ ಎನ್ಕೌಂಟರ್ ನಡೆಸಿದ್ದೂ ಸಂಶಯ ಮೂಡಿಸುವಂತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ. ‌

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ಈ ಹಿಂದೆಯೂ ನಕ್ಷಲರು ಶರಣಾಗತಿ ಆಗಿದ್ದಾರೆ. ನಾನು ಚಿಕ್ಕಮಂಗಳೂರು ಎಸ್ಪಿ ಆಗಿದ್ದ ಸಂದರ್ಭದಲ್ಲಿ ನಕ್ಸಲರು ಶರಣಾಗಿದ್ದರು. ಶರಣಾಗತಿ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿದ್ದೆ. ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಎಸ್ಪಿ ಎದುರು ನಕ್ಸಲರು ಶರಣಾಗಬೇಕು. ಆನಂತರ ಬೇರೆಲ್ಲ ಪ್ರಕ್ರಿಯೆಗಳು ನಡೆಯುತ್ತದೆ‌. ಈ ಬಾರಿ ರಾಜಕೀಯ ಮೈಲೇಜ್ ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಹೇಳಿದ್ದಾರೆ. 

ನಕ್ಸಲ್ ಬೆಂಬಲಿಗರು ಸರ್ಕಾರದ ಮೇಲೆ ಪ್ರಭಾವ ಬೀರಿದ್ದಾರೆ. ಇವರು ನಾಗರಿಕ ಸಮಾಜದ ಮೇಲೂ ಪ್ರಭಾವ ಬೀರಲಿದ್ದಾರೆ. ನಕ್ಸಲರು ಶರಣಾದಾಗ ಅವರ ಬಗ್ಗೆ ಜನರಿಗೆ ವಿಶ್ವಾಸ ಬರಬೇಕು. ಈ ನಕ್ಸಲರ ಶರಣಾಗತಿಯ ಬಗ್ಗೆ ಜನರಿಗೆ ವಿಶ್ವಾಸವಿಲ್ಲ. ಶರಣಾಗತಿ ಬಗ್ಗೆ ಗೃಹ ಸಚಿವರೇ ಮಾಹಿತಿ ಕೊರತೆ ಇದ್ದಂತೆ ಉಲ್ಟಾ ಪಲ್ಟಾ ಮಾತನಾಡುತ್ತಾರೆ. 

ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ. ಈಶಾನ್ಯ ರಾಜ್ಯಗಳಲ್ಲೂ ಭಯೋತ್ಪಾದಕರು ಶರಣಾಗುತ್ತಾರೆ. ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳೆದರು ಶರಣಾಗುತ್ತಾರೆ. ಆ ಬಳಿಕ ಗೃಹ ಸಚಿವರು, ಮುಖ್ಯಮಂತ್ರಿಗಳೆದುರು ಬರುತ್ತಾರೆ. 

ಸಿದ್ದರಾಮಯ್ಯ ಸರಕಾರದ ಈ ಹಿಂದಿನ ಇತಿಹಾಸ ಗೊತ್ತಿದೆ. ಗೌರಿ ಲಂಕೇಶ್ ಹಾಗೂ ಇತರರು ಪ್ರಭಾವ ಬೀರಿದ್ದ ಇತಿಹಾಸ ಗೊತ್ತಿದೆ. ಇಡೀ ಶರಣಾಗತಿ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಸರ್ಕಾರದ ಮೇಲೆ ಯಾರೋ ಪ್ರಭಾವ ಬೀರಿದ್ದಾರೆ. ಇವರು ನಾಗರಿಕ ಸಮಾಜಕ್ಕೆ ಬಂದು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಾರೆಂಬ ಭೀತಿ ಜನರಲ್ಲಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಮಂಗಳೂರಿಗೆ ಬಂದಿರುವ ಅಣ್ಣಾಮಲೈ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದಾರೆ.

Tamil Nadu BJP president Annamalai has raised serious concerns over the Naxal surrender process, specifically pointing to doubts surrounding the encounter of Vikram Gowda. Speaking during his visit to Mangaluru at the residence of MLA Vedavyas Kamath ahead of his participation in a literary festival, Annamalai expressed scepticism about the transparency and integrity of the current surrender procedures.