ಬ್ರೇಕಿಂಗ್ ನ್ಯೂಸ್
03-06-25 08:13 pm Mangalore Correspondent ಕರಾವಳಿ
ಮಂಗಳೂರು, ಜೂನ್.3: ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಮತ್ತು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಟಿಂಟೆಡ್ ಗ್ಲಾಸ್ ಗಳನ್ನು ಅಳವಡಿಸಿದ್ದ ಕಾರುಗಳ ಮೇಲೆ ಮಂಗಳೂರು ಪೊಲೀಸರು ಗದಾಪ್ರಹಾರ ಮಾಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜೂನ್ 2 ಮತ್ತು 3ರಂದು ಸಂಚಾರಿ ಪೊಲೀಸ್ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಯವರು ವಿಶೇಷ ಜಂಟಿ ಕಾರ್ಯಾಚರಣೆ ನಡೆಸಿದ್ದು ಕಾರಿನ ಗ್ಲಾಸ್ಗಳಲ್ಲಿ ಬ್ಲಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಟಿಂಟೆಡ್ ಗ್ಲಾಸ್ಗಳನ್ನು ಅಳವಡಿಸಿ ಸಂಚರಿಸುವ ವಾಹನಗಳ ಮಾಲಕರ/ಚಾಲಕರ ವಿರುದ್ದ ಒಟ್ಟು 223 ಪ್ರಕರಣ ದಾಖಲಿಸಿ, ರೂ. 1,11,500 ರೂ. ದಂಡ ವಿಧಿಸಲಾಗಿದೆ.
ಅಲ್ಲದೆ, 223 ಕಾರುಗಳಿಗೆ ಅಳವಡಿಸಿರುವ ಟಿಂಟೆಡ್ ಗ್ಲಾಸ್ ಹಾಗೂ ಬ್ಲಾಕ್ ಫಿಲ್ಮಂ ಸ್ಟಿಕರ್ ಗಳನ್ನು ವಾಹನ ಚಾಲಕರಿಂದ ತೆಗೆಸಿ ಅವರಿಗೆ ತಿಳುವಳಿಕೆ ನೀಡಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಹಾಗೂ ಪೊಲೀಸ್ ಠಾಣೆಗಳಲ್ಲಿ ಜೂನ್ 3ರಂದು ಕಾರು ಶೋ ರೂಮ್, ಅಕ್ಸೆಸರೀಸ್ ಶಾಪ್, ಗ್ಯಾರೇಜ್, ಸ್ಟಿಕ್ಕರ್ ಅಂಗಡಿಗಳ ಮಾಲಕರ ಸಭೆಯನ್ನು ಆಯೋಜಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅಪರಾಧ ಎಸಗಲು ಆರೋಪಿಗಳು ಟಿಂಟ್ ಅಳವಡಿಸಿರುವ ವಾಹನಗಳನ್ನು ಉಪಯೋಗಿಸುವ ಸಾಧ್ಯತೆ ಇರುವುದರಿಂದ ತಮ್ಮ ಬಳಿ ಬರುವ ಗಿರಾಕಿಗಳ ವಾಹನಗಳ ಗಾಜುಗಳಿಗೆ ಹೆಚ್ಚುವರಿಯಾಗಿ ಟಿಂಟ್ಗಳನ್ನು ಅಳವಡಿಸದಂತೆ ಸೂಚನೆಗಳನ್ನು ನೀಡಲಾಗಿದೆ. ಸದ್ರಿ ವಿಶೇಷ ಕಾರ್ಯಾಚರಣೆ ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
Special Crackdown on Tinted Glass Vehicles in Mangalore, 223 Cases in Two Days, Strict Orders Issued to Showroom and Garage Owners
22-07-26 06:00 pm
HK News Staffer
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
22-07-26 09:18 pm
HK News Desk
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
22-07-26 10:24 pm
HK News Desk
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm
Mysuru Murder, Suicide: ನಾನಿಲ್ಲದೆ ನನ್ನ ಹೆಂಡತಿ...
22-07-26 04:21 pm
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am