ಬ್ರೇಕಿಂಗ್ ನ್ಯೂಸ್
11-06-25 11:06 pm Mangalore Correspondent ಕರಾವಳಿ
ಮಂಗಳೂರು, ಜೂನ್ 11 : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಆಯುಕ್ತರಾಗಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿದ್ದ ಮೊಹಮ್ಮದ್ ನಜೀರ್ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರು ಮುಡಾ ಕಮಿಷನರ್ ನೂರ್ ಝಹರಾ ಖಾನಂ ಅವರನ್ನು ವರ್ಗಾವಣೆ ಮಾಡಿದ್ದಾಗಲೀ, ಬೇರೆ ಹುದ್ದೆಯನ್ನು ತೋರಿಸಿಲ್ಲವಾದರೂ, ಅವರ ಕಮಿಷನರ್ ಹುದ್ದೆಯನ್ನು ವಹಿಸಿಕೊಳ್ಳುವಂತೆ ನಜೀರ್ ಅವರಿಗೆ ಸೂಚಿಸಿ ರಾಜ್ಯ ಸರಕಾರ ಆದೇಶ ಮಾಡಿದೆ.
ಒಂದು ವರ್ಷದಿಂದ ಮಂಗಳೂರು ಮುಡಾ ಆಯುಕ್ತರಾಗಿದ್ದ ನೂರ್ ಜಹರಾ ಖಾನಂ ಅವರನ್ನು ಬೇರಾವುದೇ ಇಲಾಖೆಗೆ ವರ್ಗಾವಣೆ ಮಾಡಿಲ್ಲ. ಮುಡಾದಲ್ಲಿ ಬ್ರೋಕರುಗಳನ್ನು ನಿಯಂತ್ರಿಸಲು ಗಂಭೀರ ಕ್ರಮ ಕೈಗೊಂಡಿದ್ದ ನೂರ್ ಜಹರಾ ಅವರನ್ನು ವರ್ಗಾವಣೆ ಮಾಡದೆಯೇ ಅವರ ಹುದ್ದೆಗೆ ಇನ್ನೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಮೊಹಮ್ಮದ್ ನಜೀರ್ ಅವರಿಗೆ ಈ ಹುದ್ದೆ ಪರ್ಮನೆಂಟ್ ಅಲ್ಲ, ಅನ್ಯಸೇವೆಯ ಅಧಿಕಾರಿಯನ್ನು ತಾತ್ಕಾಲಿಕ ನೆಲೆಯಲ್ಲಿ ನಿಯೋಜಿಸಲಾಗಿದ್ದು ಯಾವುದೇ ಸಂದರ್ಭದಲ್ಲಿ ಮೂಲ ಹುದ್ದೆಗೆ ಅಥವಾ ಬೇರೆಡೆಗೆ ವರ್ಗಾವಣೆ ಮಾಡಬಹುದು ಎನ್ನುವ ಷರತ್ತನ್ನೂ ಹಾಕಿರುವುದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹೆಡ್ ಲೈನ್ ಕರ್ನಾಟಕ ಎರಡು ದಿನಗಳ ಹಿಂದೆಯೇ ಕಮಿಷನರ್ ನೂರ್ ಝಹರಾ ಖಾನ್ ಅವರ ಜಾಗಕ್ಕೆ ಮೊಹಮ್ಮದ್ ನಜೀರ್ ಅವರನ್ನು ಕರೆತರಲು ಬ್ರೋಕರುಗಳೇ ತೀವ್ರ ಕಸರತ್ತು ಮಾಡುತ್ತಿದ್ದಾರೆ ಎಂದು ವರದಿ ಮಾಡಲಾಗಿತ್ತು. ಮೂಲಗಳನ್ನು ಆಧರಿಸಿ ಮಾಡಿದ್ದ ವರದಿ ಈಗ ನಿಜವಾಗಿದ್ದು, ನಿವೃತ್ತಿ ಅಂಚಿನಲ್ಲಿರುವ ನಜೀರ್ ಅವರನ್ನು ಅಧಿಕೃತವಾಗಿ ನಗರಾಭಿವೃದ್ಧಿ ಇಲಾಖೆಗೆ ಒಳಪಟ್ಟ ಮುಡಾ ಆಯುಕ್ತ ಸ್ಥಾನಕ್ಕೆ ತರಲಾಗಿದೆ.
ನಾಲ್ಕು ತಿಂಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಯುಕ್ತರಾಗಿದ್ದ ಆನಂದ್ ಅವರನ್ನು ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿತ್ತು. ಅವರ ಜಾಗಕ್ಕೆ ರವಿಚಂದ್ರ ನಾಯಕ್ ಅವರನ್ನು ನೇಮಿಸಲಾಗಿತ್ತು. ಆನಂದ್ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿದ್ದರೂ, ಅವರಿಗೆ ಈವರೆಗೂ ಹುದ್ದೆ ತೋರಿಸದೆ ಸತಾಯಿಸುತ್ತಿರುವುದಾಗಿ ಮಾಹಿತಿ ಇದೆ. ಈಗ ನೂರ್ ಝಹರಾ ಖಾನ್ ಅವರನ್ನೂ ಅದೇ ರೀತಿ ವರ್ಗಾವಣೆ ಮಾಡದೆಯೂ, ಹುದ್ದೆಯನ್ನೂ ತೋರಿಸದೆ ಇಲ್ಲಿಂದ ಎಬ್ಬಿಸಿದ ರೀತಿ ಕಾಣುತ್ತಿದೆ. ಬ್ರೋಕರುಗಳದ್ದೇ ಕಾರುಬಾರು ಇಲ್ಲಿ ಕೆಲಸ ಮಾಡಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇಲಾಖಾ ಮಟ್ಟದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಭಾರೀ ದೊಡ್ಡ ಪೇಮೆಂಟ್ ಆಗಬೇಕು ಎನ್ನುವ ಮಾತು ಈಗ ಗಟ್ಟಿ ಧ್ವನಿಯಲ್ಲಿ ಕೇಳಿಬರುತ್ತಿದ್ದು, ಇದೇ ಕಾರಣದಿಂದ ಅಧಿಕಾರಿಗಳು ಭ್ರಷ್ಟರಾಗುತ್ತಿದ್ದಾರೆ. ಮತ್ತು ತೀವ್ರ ತೆರನಾದ ಒತ್ತಡಕ್ಕೆ ಒಳಗಾಗುತ್ತಿದ್ದಾರಂತೆ. ಕೆಲವೊಮ್ಮೆ ಮೇಲಧಿಕಾರಿಗಳ ಅಥವಾ ಆಡಳಿತಗಾರರ ಕೆಂಗಣ್ಣಿಗೆ ಗುರಿಯಾಗಿ ವರ್ಗಾವಣೆಯಾದರೆ ಅಂಥವರಿಗೆ ಸೂಕ್ತ ಹುದ್ದೆಯೂ ಸಿಗುವುದಿಲ್ಲ. ಅವರಿಗೆ ಯಾವುದೇ ಕರ್ತವ್ಯ ಇಲ್ಲದೆಯೂ ಸರಕಾರಿ ಸಂಬಳ ನಡೆಯುತ್ತಿದ್ದರೂ, ಮಾನಸಿಕ ಹಿಂಸೆಗೂ ಗುರಿಯಾಗುತ್ತಾರೆ. ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದಾಗ ದಕ್ಷ ಅಧಿಕಾರಿಗಳೂ ಅನಿವಾರ್ಯತೆಗೆ ಒಗ್ಗಿಕೊಂಡು ಕೆಲಸ ಮಾಡಬೇಕಾಗುತ್ತದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ.
ಮೊಹಮ್ಮದ್ ನಜೀರ್ ಅವರು ಈ ಹಿಂದೆ ಮಂಗಳೂರು ಪಾಲಿಕೆ ಕಮಿಷನರ್, ಸ್ಮಾರ್ಟ್ ಸಿಟಿ ಎಂಡಿ, ಮುಡಾ ಆಯುಕ್ತರಾಗಿಯೂ ಕೆಲಸ ಮಾಡಿದ್ದರು.
In a sudden and controversial administrative move, the Karnataka state government has appointed Mohammed Nazeer as the new Commissioner of the Mangalore Urban Development Authority (MUDA), replacing incumbent Noor Zahara Khanam. Notably, Khanam has not been officially transferred nor assigned a new post, raising questions about the transparency and intent behind the decision.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 06:07 pm
HK News Desk
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm