ಬ್ರೇಕಿಂಗ್ ನ್ಯೂಸ್
12-06-25 10:26 pm Mangalore Correspondent ಕರಾವಳಿ
ಮಂಗಳೂರು, ಜೂನ್ 12 : ಅಹ್ಮದಾಬಾದ್ ಏರ್ಪೋರ್ಟ್ ಬಳಿಯಲ್ಲೇ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಕೋ ಪೈಲಟ್ ಆಗಿದ್ದ ಕ್ಲೈವ್ ಕುಂದರ್ ಮಂಗಳೂರು ಮೂಲದವರು ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಮಂಗಳೂರಿನಲ್ಲಿ ಸರ್ಚ್ ಮಾಡಿದಾಗ, ಕ್ಲೈವ್ ಕುಂದರ್ ಹೆತ್ತವರು, ಕುಟುಂಬಸ್ಥರು ಮುಂಬೈನಲ್ಲಿಯೇ ನೆಲೆಸಿದ್ದಾರೆ ಎಂಬುದು ಖಚಿತವಾಗಿದೆ.
ಮಂಗಳೂರು ಮೂಲದ ಕ್ಲಿಫರ್ಡ್ ಕುಂದರ್ ಮುಂಬೈನ ಕಾಲಿನಾದಲ್ಲಿ ನಿವಾಸಿಯಾಗಿದ್ದು, ಇವರ ಪುತ್ರ ಕ್ಲೈವ್ ಕುಂದರ್ ಏರ್ ಇಂಡಿಯಾ ವಿಮಾನದಲ್ಲಿ ಕೋ ಪೈಲಟ್ ಆಗಿದ್ದರು. ಕುಂದರ್ ಎನ್ನುವ ಸರ್ನೇಮ್ ಇರುವುದರಿಂದ ಇವರು ಮಂಗಳೂರು ಮೂಲದ ಸಿಎಸ್ಐ ಪ್ರೊಟೆಸ್ಟಂಟ್ ಕ್ರೈಸ್ತರು. ಮಂಗಳೂರಿನಲ್ಲಿ ಜಪ್ಪಿನಮೊಗರು, ಬಲ್ಮಠ, ಕಿನ್ನಿಗೋಳಿ ಆಸುಪಾಸಿನಲ್ಲಿ ಇವರು ಹೆಚ್ಚಾಗಿ ನೆಲೆಸಿದ್ದಾರೆ. ಕ್ಲೈವ್ ಕುಂದರ್ ಬಗ್ಗೆ ಜೆಪ್ಪುವಿನ ಕಾಂತಿ ಚರ್ಚ್ ಫಾದರ್ ಗೇಬ್ರಿಯಲ್ ಸ್ಯಾಮುವೆಲ್ ಅವರಲ್ಲಿ ಕೇಳಿದಾಗ, ಹೆಚ್ಚಿನವರು ನಮ್ಮ ಕಾಂತಿ ಚರ್ಚ್ ನವರು ಎಂದು ಫೋನ್ ಮಾಡುತ್ತಿದ್ದಾರೆ. ಆದರೆ ಕ್ಲೈವ್ ಕುಂದರ್ ಕುಟುಂಬ ಇಲ್ಲಿ ನೆಲೆಸಿಲ್ಲ. ಅವರ ಫ್ಯಾಮಿಲಿ ಮುಂಬೈನ ಕುರ್ಲಾದಲ್ಲಿದ್ದಾರೆ. ಕುರ್ಲಾದಲ್ಲಿ ಯುಬಿಎಮ್ ಕಾಂತಿ ಚರ್ಚ್ ಸದಸ್ಯರು ಎಂದು ಹೇಳಿದ್ದಾರೆ.
ಬಲ್ಮಠ ಥಿಯೋಲಾಜಿಕಲ್ ಸೊಸೈಟಿಯವರು ಹೇಳುವ ಪ್ರಕಾರ, ಮಂಗಳೂರು ಮೂಲ ಆಗಿದ್ದರೂ ಬಹಳಷ್ಟು ಸಿಎಸ್ಐ ಕುಟುಂಬಗಳು ಮುಂಬೈನಲ್ಲಿ ನೆಲೆಸಿದ್ದು ಅಲ್ಲಿಯೇ ಸೆಟ್ಲ್ ಆಗಿದ್ದಾರೆ. ಕ್ಲೈವ್ ಕುಂದರ್ ಅವರ ಹೆತ್ತವರು ಕೂಡ ಮುಂಬೈನಲ್ಲಿಯೇ ಇದ್ದಾರೆ. ಕ್ಲೈವ್ ಕುಂದರ್ ಅಮೆರಿಕದ ಫ್ಲೋರಿಡಾದಲ್ಲಿ ಪೈಲಟ್ ತರಬೇತಿ ಪಡೆದಿದ್ದು, ಆನಂತರ ಕೋ ಪೈಲಟ್ ಆಗಿ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದ್ದರು. ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿದ್ದ ಮುಖ್ಯ ಪೈಲಟ್ ಕಮಾಂಡರ್ ಸುಮಿತ್ ಸಬರ್ವಾಲ್ 8200 ಗಂಟೆಗಳ ಪ್ರಯಾಣದ ಅನುಭವ ಹೊಂದಿದ್ದು, ಇತರರಿಗೆ ತರಬೇತಿಯನ್ನೂ ನೀಡುತ್ತಿದ್ದರು. ಕ್ಲೈವ್ ಕುಂದರ್ ಅವರಿಂದಲೂ ತರಬೇತಿ ಪಡೆಯುತ್ತಿದ್ದರು. ಆದರೂ 1100 ಗಂಟೆಗಳ ಪ್ರಯಾಣದ ಅನುಭವ ಹೊಂದಿದ್ದರು.
Following the tragic crash of the Air India flight near Ahmedabad, it was initially believed that co-pilot Clive Kundar hailed from Mangaluru. However, fresh clarification from local church authorities confirms that his family resides in Mumbai and not in Mangaluru.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 06:07 pm
HK News Desk
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm