ಬ್ರೇಕಿಂಗ್ ನ್ಯೂಸ್
21-06-25 12:03 pm HK News Desk ಕರಾವಳಿ
ಹಾಸನ, ಜೂನ್ 21: ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ರೈಲ್ವೇ ಹಳಿಗೆ ಬೃಹತ್ ಬಂಡೆ ಕಲ್ಲುಗಳು ಕುಸಿದು ಬಿದ್ದಿದ್ದು ಮಂಗಳೂರು - ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಬಂಡೆ ಉರುಳಿ ಬಿದ್ದಿರುವುದರಿಂದ ರೈಲ್ವೇ ಹಳಿ ಡ್ಯಾಮೇಜ್ ಆಗಿದ್ದು ಬೆಂಗಳೂರಿನಿಂದ ಬಂದಿದ್ದ ರೈಲುಗಳು ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ನಿಂತಿವೆ.
ಹಾಸನ ಜಿಲ್ಲೆಯ ಮಲೆನಾಡು ಮತ್ತು ಪಶ್ಚಿಮಘಟ್ಟ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ನಿನ್ನೆ ರಾತ್ರಿ ರೈಲು ಹಳಿಗೆ ಕಲ್ಲು ಬಂಡೆ ಕುಸಿದು ಬಿದ್ದಿದೆ. ಇದರಿಂದಾಗಿ ರಾತ್ರಿಯಿಂದಲೂ ಪ್ರಯಾಣಿಕರು ರೈಲಿನಲ್ಲಿ ಕುಳಿತಿದ್ದು ಹೈರಾಣಾಗಿದ್ದಾರೆ. ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಬೆಳಗ್ಗೆ ಕಾಫಿ, ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ಬೇರೆ ವಾಹನದಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದಾರೆ.
ಬೆಂಗಳೂರು- ಕಣ್ಣೂರು ರೈಲು ಮತ್ತು ಬೆಂಗಳೂರು- ಮುರುಡೇಶ್ವರ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಅರೆಬೆಟ್ಟ ಮತ್ತು ಎಡಕುಮೇರಿ ಮಧ್ಯ ಭಾಗದಲ್ಲಿ ಗುಡ್ಡ ಕುಸಿತವಾಗಿದ್ದು ಪ್ರಯಾಣಿಕರು ನಡುವೆ ಸಿಕ್ಕಿಬೀಳುವಂತಾಗಿದೆ. ರೈಲ್ವೇ ಸಿಬ್ಬಂದಿಗಳು ಗುಡ್ಡ ತೆರವುಗೊಳಿಸುತ್ತಿದ್ದು ಮಧ್ಯಾಹ್ನ ವೇಳೆಗೆ ತೆರವಾಗುವ ಸಾಧ್ಯತೆಯಿದೆ.
ರೈಲು ಹಳಿಯ ಮೇಲೆ ಬಿದ್ದಿದ್ದ ಬಂಡೆಗಳ ಅನತಿ ದೂರದಲ್ಲಿ ರೈಲು ಬಂದು ನಿಂತಿದ್ದು ರಾತ್ರಿ ವೇಳೆ ಲೋಕೊ ಪೈಲಟ್ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ.
Train services between Mangaluru and Bengaluru came to a standstill late Friday night after a large boulder fell onto the railway track near Sakleshpur. The incident occurred along the ghat section, a stretch known for its steep terrain and frequent landslides, especially during the monsoon season.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am