ಬ್ರೇಕಿಂಗ್ ನ್ಯೂಸ್
24-06-25 01:36 pm Mangalore Correspondent ಕರಾವಳಿ
ಉಳ್ಳಾಲ, ಜೂ.24 : ಓದಿನಲ್ಲಿ ವಿಪರೀತ ಒತ್ತಡಕ್ಕೊಳಗಾಗಿ, ತಲೆನೋವಿನಿಂದ ಬಳಲುತ್ತಿದ್ದ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತಲಪಾಡಿ ದೇವಿಪುರದ ಶಾರದಾ ವಿದ್ಯಾಲಯದ ಆವರಣದ ಸಿಬ್ಬಂದಿ ವಸತಿ ಗೃಹದಲ್ಲಿ ನಡೆದಿದೆ.
ಮಂಗಳೂರು ಬೆಂದೂರ್ ವೆಲ್ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ದ್ವಿತೀಯ ಸಾಲಿನ ಬಿಎ ವ್ಯಾಸಂಗ ನಡೆಸುತ್ತಿದ್ದ ವಿದ್ಯಾರ್ಥಿನಿ ಶ್ರೇಯಾ (19) ಆತ್ಮಹತ್ಯೆಗೈದ ವಿದ್ಯಾರ್ಥಿನಿ.
ತಲಪಾಡಿ ನಾರ್ಲ ನಿವಾಸಿಯಾದ ಶ್ರೇಯಾ ತಾಯಿ ಪುಷ್ಪಲತಾ ಅವರು ದೇವಿಪುರದ ಶಾರದಾ ವಿದ್ಯಾಲಯದಲ್ಲಿ ಅಟೆಂಡರ್ ಕೆಲಸದಲ್ಲಿದ್ದು ಸಂಸ್ಥೆಯ ವಸತಿ ಗೃಹದಲ್ಲೇ ಗಂಡ ಮತ್ತು ಮಕ್ಕಳ ಜೊತೆಯಲ್ಲಿ ನೆಲೆಸಿದ್ದರು.
ಶ್ರೇಯಾ ಎಂದಿನಂತೆ ಸೋಮವಾರ ಬೆಳಗ್ಗೆಯೂ ಕಾಲೇಜಿಗೆ ತೆರಳಿದ್ದಳು. ಸಂಜೆ ಶ್ರೇಯಾ ತಂಗಿ ಶಾಲೆ ಮುಗಿಸಿ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಒಳಗೆ ನೋಡಿದಾಗ ಮನೆಯ ಬೆಡ್ ರೂಂನ ಕಿಟಕಿಗೆ ಶ್ರೇಯ ಶಾಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.
ಸಾವಿಗೂ ಮುನ್ನ ಶ್ರೇಯಾ ಬರೆದಿರುವ ಡೆತ್ ನೋಟ್ ಪೊಲೀಸರಿಗೆ ದೊರೆತಿದ್ದು, ಓದಿನಲ್ಲಿ ಕಳೆದ ಎರಡು ತಿಂಗಳಿನಿಂದ ವಿಪರೀತ ಒತ್ತಡ ಎದುರಿಸುತ್ತಿದ್ದು, ಸಹಿಸದ ತಲೆ ನೋವಿನಿಂದ ಬಳುತ್ತಿದ್ದೇನೆಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಶ್ರೇಯಾ ಇತ್ತೀಚೆಗೆ ಬರೆದಿದ್ದ ಪರೀಕ್ಷೆಯಲ್ಲೂ ಒಂದು ವಿಷಯದಲ್ಲಿ ಫೇಲ್ ಆಗಿದ್ದಳಂತೆ. ಉಳ್ಳಾಲ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
A 19-year-old college student from Mangaluru has allegedly died by suicide, reportedly due to academic stress and health issues. The incident occurred in the staff quarters of a private school in Devipura, Talapady. The student, Shreya, was pursuing her second year of Bachelor of Arts at St. Agnes College, Bendorewell. She was the daughter of a staff member at Sharada Vidyalaya, where the family resided.
29-04-26 10:36 am
HK News Staffer
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
29-04-26 11:10 pm
HK News Staffer
ಬೆಂಗಳೂರಿನಲ್ಲಿ ದಿಢೀರ್ ಮಳೆ ಆರ್ಭಟ ; ಬೌರಿಂಗ್ ಆಸ್ಪ...
29-04-26 08:12 pm
ಆಧಾರ್ ಹಿಡಿದು ಹೋದವರು 8 ತಿಂಗಳಾದರೂ ಸಿಗದ ಸುಳಿವು ;...
29-04-26 07:54 pm
ತ್ರಾಸಿ ಬೀಚ್ ಬಳಿ ಭೀಕರ ಅಪಘಾತ ; ಶಿವಮೊಗ್ಗದ ಪ್ರವಾಸ...
29-04-26 03:50 pm
ಪಹಲ್ಗಾಮ್ ಮಾದರಿಯಲ್ಲೇ ಮುಂಬೈನಲ್ಲಿ ದಾಳಿ ; ಕಲ್ಮಾ ಪ...
29-04-26 02:46 pm