ಬ್ರೇಕಿಂಗ್ ನ್ಯೂಸ್
04-07-25 11:46 am Mangalore Correspondent ಕರಾವಳಿ
ಉಳ್ಳಾಲ, ಜು.4 : ಕುಡಿದ ಮತ್ತಿನಲ್ಲಿ ಮನೆಗೆ ಬಂದು ತಂದೆ ಮತ್ತು ಸಹೋದರನಲ್ಲಿ ಗಲಾಟೆ ಮಾಡಿದ ವ್ಯಕ್ತಿಯೋರ್ವ ಮನೆಯ ಬಾಲ್ಕನಿಗೆ ಅಳವಡಿಸಿದ್ದ ಅಲ್ಯುಮಿನಿಯಮ್ ಗಾಜಿಗೆ ಆವೇಶದಿಂದ ಕೈಯನ್ನ ಬಡಿದ ಪರಿಣಾಮ ರಕ್ತಸ್ರಾವದಿಂದ ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ಉಳ್ಳಾಲ ಠಾಣೆ ವ್ಯಾಪ್ತಿಯ ಮಾಡೂರು ಅರಸುನಗರ ಎಂಬಲ್ಲಿ ನಡೆದಿದೆ.
ಮಾಡೂರು ಅರಸುನಗರ ನಿವಾಸಿ ನಿತೇಶ್ ನಾಯಕ್(36) ಸಾವನ್ನಪ್ಪಿದ ವ್ಯಕ್ತಿ. ನಿತೇಶ್ ಅವರು ತಂದೆ ಸತೀಶ್ ನಾಯಕ್ ಮತ್ತು ಸಹೋದರ ದುರ್ಗೇಶ್ ಜೊತೆ ಮಾಡೂರು ಅರಸುನಗರದಲ್ಲಿ ವಾಸವಾಗಿದ್ದು ತಂದೆ ಮಕ್ಕಳು ಕರಿದ ತಿಂಡಿ ತಿನಿಸುಗಳನ್ನ ತಯಾರಿಸಿ ಅಂಗಡಿಗಳಿಗೆ ವಿತರಿಸುವ ಉದ್ಯಮ ನಡೆಸುತ್ತಿದ್ದರು.
ನಿತೇಶ್ ಅವರಿಗೆ ಮದುವೆಯಾಗಿದ್ದು 2023 ರಲ್ಲಿ ಪತ್ನಿಯಿಂದ ವಿಚ್ಚೇದನ ಪಡಿದಿದ್ದರು ಎನ್ನಲಾಗಿದೆ. ನಿತೇಶ್ ನಿತ್ಯವೂ ಮದ್ಯಪಾನ ಮಾಡಿ ಬಂದು ಮನೆಯಲ್ಲಿ ತಂದೆ ಮತ್ತು ಅಣ್ಣನಲ್ಲಿ ಗಲಾಟೆ ನಡೆಸಿ ಕಿಟಕಿಗಳ ಗಾಜನ್ನು ಪುಡಿ ಮಾಡುತ್ತಿದ್ದರಂತೆ. ನಿನ್ನೆ ರಾತ್ರಿಯೂ ಸುಮಾರು 9 ಗಂಟೆ ವೇಳೆ ಮನೆಯಲ್ಲಿ ಗಲಾಟೆ ನಡೆದಿದೆ. ನಿತೇಶ್ ತಾಯಿ, ತಂದೆ, ಅಣ್ಣ ಮನೆಯಲ್ಲಿದ್ದ ವೇಳೆ ಗಲಾಟೆ ನಡೆದಿದ್ದು, ಈ ವೇಳೆ ನಿತೇಶ್ ಮನೆಯ ಬಾಲ್ಕನಿಗೆ ಅಳವಡಿಸಿದ್ದ ಅಲ್ಯುಮಿನಿಯಮ್ ಪಾರ್ಟಿಷನ್ ನ ಗಾಜಿಗೆ ಬಲವಾಗಿ ಕೈಯಿಂದ ಹೊಡೆದಿದ್ದು ರಕ್ತ ಸ್ರಾವವಾಗಿದೆ. ಮನೆ ಮಂದಿ ಎಂದಿನಂತೆ ಇರುವ ಗಲಾಟೆ ಎಂದು ಗ್ರಹಿಸಿ ಕೋಣೆಯೊಳಗೆ ಸೇರಿದ್ದಾರೆ.
ಕೆಲಹೊತ್ತಿನ ಬಳಿಕ ನಿತೇಶ್ ರಕ್ತಸ್ರಾವವಾಗಿ ಪ್ರಾಣ ಸಂಕಟದಿಂದ ಚೀರಾಡಿದ್ದು ಆತನ ಕೂಗು ಕೇಳಿಸಿ ಮನೆಯ ಕೆಳ ಅಂತಸ್ತಿನಲ್ಲಿ ವಾಸವಿದ್ದ ನಿತೇಶ್ ನ ಚಿಕ್ಕಪ್ಪನ ಮಗಳು ಮೇಲಕ್ಕೆ ಓಡಿ ಬಂದಿದ್ದಾರೆ. ರಕ್ತದ ಮಡುವಿನಲ್ಲಿದ್ದ ನಿತೇಶನ್ನು ಸ್ಥಳೀಯ ಬಜರಂಗದಳದ ಮುಖಂಡ ಅರ್ಜುನ್ ಮಾಡೂರು ಮತ್ತು ಸ್ನೇಹಿತರು ಆಂಬುಲೆನ್ಸಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿತೇಶ್ ಸಾವನ್ನಪ್ಪಿದ್ದಾರೆ.
ವಿಧಿ ವಿಜ್ಞಾನ ತಂಡ ಮತ್ತು ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
In a tragic incident reported from Arasunagara in Madur, Ullal police limits, a 36-year-old man died due to excessive bleeding after slamming his hand on a glass partition in a fit of rage during a drunken altercation with his father and brother on Wednesday night.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm