ಬ್ರೇಕಿಂಗ್ ನ್ಯೂಸ್
05-07-25 04:19 pm Mangalore Correspondent ಕರಾವಳಿ
ಮಂಗಳೂರು, ಜುಲೈ 5 : ಮಂಗಳೂರು ಎನ್ನುವುದು ಬ್ರಾಂಡ್ ನೇಮ್ ಆಗಿದ್ದು, ದೇಶ- ವಿದೇಶದಲ್ಲಿ ಹೆಸರಿದೆ. ಮಂಗಳೂರು ಎಂದರೆ ಶಿಕ್ಷಣ ಕಾಶಿಯಾಗಿ ಹೆಸರು ಮಾಡಿದೆ. ಅಭಿವೃದ್ಧಿ, ಆಕರ್ಷಣೆ, ದೂರದೃಷ್ಟಿಯ ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯೆಂದು ಮರು ನಾಮಕರಣ ಮಾಡಬೇಕು. ನಂದಿಹಿಲ್ಸ್ ಬಳಿಕ ವಿಜಯಪುರದಲ್ಲಿ ಸಚಿವ ಸಂಪುಟ ಸಭೆ ಇದೆ. ಆನಂತರ ಕರಾವಳಿಯ ಮಂಗಳೂರಿನಲ್ಲೂ ಸಚಿವ ಸಂಪುಟ ಸಭೆ ನಡೆಸಬೇಕು. ಅದರಲ್ಲಿಯೇ ಮಂಗಳೂರು ಹೆಸರು ಬದಲಾವಣೆ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಪ್ಯಾಕೇಜ್ ಘೋಷಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಇತ್ತೀಚೆಗಷ್ಟೇ ನಂದಿಹಿಲ್ಸ್ ನಲ್ಲಿ ಸಚಿವ ಸಂಪುಟ ಸಭೆ ನಡೆಸಿ ಆ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ರೀತಿ ಕರಾವಳಿ ಜಿಲ್ಲೆಗಳ ಬಗ್ಗೆಯೂ ಚರ್ಚೆಯಾಗಬೇಕು. ಎಲ್ಲ ಸಚಿವರೂ ಬಂದು ಈ ಭಾಗದ ಶಾಸಕರು, ಅಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಅಧಿಕಾರಿಗಳು ಜೊತೆಗೂಡಿ ಚರ್ಚೆ ನಡೆಸಲು ವೇದಿಕೆಯಾಗಬೇಕು. ಬ್ರಾಂಡ್ ನೇಮ್ ಉದ್ದೇಶಕ್ಕೆ ಬೆಂಗಳೂರು ಉತ್ತರ, ದಕ್ಷಿಣ ಮಾಡಿದ್ದಾರೆ. ಬಾಗೇಪಲ್ಲಿ ಇದ್ದುದನ್ನು ಭಾಗ್ಯ ನಗರ ಎಂದು ಬದಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಆಗಿ ಬದಲಿಸಬೇಕು. ಅದರಿಂದ ನಮ್ಮ ಜಿಲ್ಲೆಗೆ ಇನ್ನಷ್ಟು ಬ್ರಾಂಡ್ ಬರುತ್ತದೆ. ಈಗಾಗಲೇ ಈ ಕುರಿತು ಅಭಿಪ್ರಾಯಗಳು ಬರುತ್ತಿದ್ದು, ಇದರ ಬಗ್ಗೆ ಮುಖ್ಯಮಂತ್ರಿ ಗಮನಕ್ಕೂ ತರುತ್ತೇನೆ ಎಂದಿದ್ದಾರೆ.
ಕರಾವಳಿಯಲ್ಲಿ ಪ್ರವಾಸೋದ್ಯಮ ನೆಲೆಯಲ್ಲಿ ಅಭಿವೃದ್ಧಿ ಚಟುವಟಿಕೆ ಮಾಡಬೇಕೆಂದು ಈಗಾಗಲೇ ಮನವಿ ಕೊಟ್ಟಿದ್ದೇವೆ. ಮಂಗಳೂರು ಹೆಸರಿನಲ್ಲೇ ಯುನಿವರ್ಸಿಟಿ ಇದ್ದು ಅದನ್ನು ಇನ್ನಷ್ಟು ಉತ್ತಮ ಪಡಿಸಲು ಪ್ಯಾಕೇಜ್ ಮಾಡಬೇಕಾಗಿದೆ. ಇವೆಲ್ಲದರ ಬಗ್ಗೆ ರೂಪುರೇಷೆ ತಯಾರಿಸಲು ಸಚಿವ ಸಂಪುಟ ಸಭೆಯನ್ನೇ ಇಲ್ಲಿ ನಡೆಸಿದರೆ ಉತ್ತಮ. ಆಡಳಿತಕ್ಕೂ ಚುರುಕು ಸಿಕ್ಕಂತಾಗುತ್ತದೆ ಎಂದು ಐವಾನ್ ಡಿಸೋಜ ಹೇಳಿದ್ದಾರೆ. ಪಾಲಿಕೆಯಲ್ಲಿ ನೋಂದಣಿ ದಾಖಲೆಯನ್ನು ನಕಲಿ ಮಾಡಿ, ಭ್ರಷ್ಟಾಚಾರ ಎಸಗಿರುವ ಬಗ್ಗೆ ಕಮಿಷನರ್ ಅವರಲ್ಲಿ ಮಾಹಿತಿ ಕೇಳಿದ್ದೇನೆ. ನಕಲಿ ಆಗಿದ್ದರೆ ತನಿಖೆಗೆ ಸೂಚಿಸುತ್ತೇನೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇದೇ ವೇಳೆ, ತನ್ನ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ಐದು ಜನರಿಗೆ 4,09943 ರೂ. ಪರಿಹಾರ ಧನ ವಿತರಿಸಿದ್ದಾರೆ. ಮಿಸ್ಬಾ ಅಬ್ದುಲ್ ಖಾದರ್ ಉಡುಪಿ ಇವರಿಗೆ 2 ಲಕ್ಷ ರೂ., ಕುಂಜತ್ತಬೈಲ್ ಕುದ್ರುತ್ತಲ್ಲ ಇವರಿಗೆ 94,943 ರೂ., ಆಸೀದಾ ಬಾನು ಬಜ್ಪೆ ಇವರಿಗೆ 64 ಸಾವಿರ, ರೊಬಾರ್ಟ್ ನಜರತ್ ಬಿಜೈ ಇವರಿಗೆ 35 ಸಾವಿರ ರೂ., ಸಫ್ನಾಜ್ ಫರಂಗಿಪೇಟೆ ಇವರಿಗೆ 16 ಸಾವಿರ ಪರಿಹಾರ ಧನವನ್ನು ಶಾಸಕರ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.
Mangaluru has established itself as a global brand known for its educational excellence and growing development potential. To further enhance the district’s brand value and attract greater development opportunities, the district should be officially renamed as Mangaluru District, suggested Legislative Council member Ivan D’Souza.
10-07-25 09:53 pm
Bangalore Correspondent
ED Raid Congress MLA Subba Reddy: ಮಲೇಶ್ಯಾ, ಬ್...
10-07-25 12:45 pm
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
10-07-25 07:23 pm
Mangalore Correspondent
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
10-07-25 08:09 pm
HK News Desk
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm