ಬ್ರೇಕಿಂಗ್ ನ್ಯೂಸ್
18-07-25 02:36 pm Mangalore Correspondent ಕರಾವಳಿ
ಉಳ್ಳಾಲ, ಜು.18 : ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುವಾರ ರಾತ್ರಿ ತೊಕ್ಕೊಟ್ಟು ಒಳಪೇಟೆಯ ಗತಕಾಲ ವೈಭವದ ಶತಮಾನ ಕಂಡ ಹಳೆಯ ಖಾಸಗಿ ವಾಣಿಜ್ಯ& ವಸತಿ ಸಂಕೀರ್ಣದ ಹಂಚಿನ ಮೇಲ್ಛಾವಣಿ ಧರೆಗುರುಳಿ ಬಿದ್ದಿದೆ. ಮಧ್ಯರಾತ್ರಿ ಘಟನೆ ನಡೆದ ಪರಿಣಾಮ ಸಂಭವನೀಯ ಭಾರೀ ಅನಾಹುತ ತಪ್ಪಿದೆ.
ಮಧ್ಯರಾತ್ರಿ ಎರಡೂವರೆ ಗಂಟೆ ವೇಳೆಗೆ ಕಟ್ಟಡದ ಹಂಚಿನ ಛಾವಣಿ ಧರೆಗುರುಳಿ ಬಿದ್ದಿದೆ. ನೂರು ವರುಷದ ಹಿಂದಿನ ಹಳೆಯ ಶಿಥಿಲ ಕಟ್ಟಡದಲ್ಲಿ ಸ್ಥಳೀಯ ಸಂಘಟನೆಯೊಂದರ ಕಚೇರಿ ಸೇರಿದಂತೆ ಎರಡು ಬೀಡಿ ಬ್ರಾಂಚ್ ಗಳು ಕಾರ್ಯಾಚರಿಸುತ್ತಿತ್ತು. ಕಟ್ಟಡದ ಹಿಂಬದಿ ಭಾಗದಲ್ಲಿ ಎರಡು ಬಾಡಿಗೆ ಮನೆಗಳಿದ್ದು ಮನೆಮಂದಿಗೆ ಘಟನೆಯಿಂದ ಯಾವುದೇ ಹಾನಿಯಾಗಿಲ್ಲ.





ಕಟ್ಟಡದ ಹಂಚಿನ ಮೇಲ್ಚಾವಣಿಯು ತೊಕ್ಕೊಟ್ಟು ಚರ್ಚ್ ಸಂಪರ್ಕದ ಮುಖ್ಯ ರಸ್ತೆಗೆ ಕುಸಿದು ದೊಪ್ಪನೆ ಬಿದ್ದಿರುವ ದೃಶ್ಯ ಸಿಸಿಟಿವಿ ಫೂಟೇಜಲ್ಲಿ ದಾಖಲಾಗಿದೆ. ಹಗಲಿನ ವೇಳೆ ಈ ಕಟ್ಟಡದ ಮುಂಭಾಗದ ರಸ್ತೆಯಿಂದ ಶಾಲಾ ಮಕ್ಕಳು, ಜನಸಾಮಾನ್ಯರು ಸೇರಿದಂತೆ ವಾಹನಗಳು ಹಾದು ಹೋಗುತ್ತಿರುತ್ತವೆ. ಈ ವೇಳೆ ಘಟನೆ ನಡೆದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.
ಉದ್ದವಾದ ಹಳೆಯ ಕಟ್ಟಡದ ಅಳಿದುಳಿದ ಒಂದು ಭಾಗದಲ್ಲಿ ಫ್ಯಾನ್ಸಿ ಸೆಂಟರೊಂದು ವ್ಯವಹಾರ ನಡೆಸುತ್ತಿದ್ದು, ಮತ್ತೊಂದು ಭಾಗದಲ್ಲಿ ಸ್ಥಳೀಯ ಮತ್ತೊಂದು ಸಂಘಟನೆಯ ಕಚೇರಿ ಕಾರ್ಯಚರಿಸುತ್ತಿದೆ. ದಶಕಗಳ ಹಿಂದೆ ಈ ಕಟ್ಟಡದಲ್ಲಿ ತೊಕ್ಕೊಟ್ಟಿನ ಏಕೈಕ ಶೇಂದಿ ಅಂಗಡಿ ವಹಿವಾಟು ನಡೆಸುತ್ತಿದ್ದು, ಶೇಂದಿ ಪ್ರಿಯರ ನೆಚ್ಚಿನ ಕೇಂದ್ರ ಇದಾಗಿತ್ತು. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಸ್ತೆಗೆ ಬಿದ್ದಿದ್ದ ಮೇಲ್ಚಾವಣಿಯ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
Continuous heavy rains over the past two days led to the partial collapse of the roof of a century-old private commercial-cum-residential building in the heart of Tokkottu’s inner market area late Thursday night. Fortunately, the incident occurred around 2:30 AM, preventing what could have been a major tragedy.
01-07-26 09:49 pm
HK News Desk
ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನ...
29-06-26 10:33 pm
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
30-06-26 08:06 pm
HK News Staffer
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
ಮೊಹರಂ ಮೆರವಣಿಗೆಯಲ್ಲಿ 15,000 ಜನರ ಹತ್ಯೆಗೆ ಸ್ಕೆಚ್...
29-06-26 03:35 pm
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
01-07-26 10:37 pm
HK News Desk
ಭಾರಿ ಮಳೆ ; ಜುಲೈ 2 ದಕ್ಷಿಣ ಕನ್ನಡ ಶಾಲೆ - ಕಾಲೇಜಿಗ...
01-07-26 09:58 pm
ನಾಗುರಿ ದುರಂತ ನಮಗೆಲ್ಲ ಎಚ್ಚರಿಕೆ ಕರೆಗಂಟೆ, ವಿಕೋಪಗ...
01-07-26 09:18 pm
Mangalore Garodi Landslide: ನಾಗುರಿ ದುರಂತ ; ಗು...
01-07-26 08:41 pm
ಕಡೆಗೂ ಮಳೆ ಬಿರುಸು ; ತೊಕ್ಕೊಟ್ಟಿನಲ್ಲಿ ಮನೆ ಮೇಲೆರ...
01-07-26 11:46 am
01-07-26 09:34 pm
HK News Desk
ಹೋಂ ಸ್ಟೇನಲ್ಲಿ ಯುವತಿ ನಿಗೂಢ ಸಾವು ; ನನ್ನ ಪ್ರಿಯತಮ...
01-07-26 06:52 pm
ಭಗ್ನ ಪ್ರೇಮಿಯಿಂದ ಕಾರು ಸ್ಫೋಟ ಕೇಸ್ ; ಕಚ್ಚಾ ಬಾಂಬ್...
01-07-26 04:51 pm
ಕಂಕನಾಡಿ ಗರೋಡಿಯಲ್ಲಿ ನಾಲ್ಕು ಬಾಡಿಗೆ ಮನೆಗಳಿದ್ದ ಕಟ...
01-07-26 08:59 am
Panambur Gold Robbery, Update: ಪಣಂಬೂರಿನಲ್ಲಿ ಚ...
30-06-26 11:02 pm