ಬ್ರೇಕಿಂಗ್ ನ್ಯೂಸ್
22-07-25 09:42 pm Mangalore Correspondent ಕರಾವಳಿ
ಮಂಗಳೂರು, ಜುಲೈ 22 : ಎಐ ತಂತ್ರಜ್ಞಾನದಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿ. ಪ್ರತಿ ತಾಲೂಕಿನಲ್ಲಿ ಆಯ್ದ 40 ಫಲಾನುಭವಿಗಳಿಗೆ ತಲಾ 20 ಸಾವಿರ ರೂ. ಮೌಲ್ಯದ ಎಐ ಶಿಕ್ಷಣ ಕಿಟ್ ಉಚಿತವಾಗಿ ವಿತರಿಸುವ ಪೈಲಟ್ ಯೋಜನೆ ಆರಂಭಿಸಿದೆ ಎಂದು ಯತಿಕಾರ್ಪ್ ಸಂಸ್ಥೆಯ ಮುಖ್ಯಸ್ಥ ಯತೀಶ್ ಕೆ.ಎಸ್ ತಿಳಿಸಿದ್ದಾರೆ.
ಪ್ರತಿ ತಾಲೂಕಿನಲ್ಲಿ 10 ಉದ್ಯೋಗಾಕಾಂಕ್ಷಿಗಳು, ಐವರು ಪ್ರಗತಿಪರ ಕೃಷಿಕರು, 15 ವಿದ್ಯಾರ್ಥಿಗಳು, ಐವರು ಪೊಲೀಸ್ ಅಧಿಕಾರಿಗಳು, ಐವರು ಪತ್ರಕರ್ತರು ಸೇರಿದಂತೆ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗುವುದು. ರಾಜ್ಯದಲ್ಲಿ ಒಟ್ಟು ಹತ್ತು ಸಾವಿರ ಫಲಾನುಭವಿಗಳನ್ನು ಗುರುತಿಸಿ ಎಐ ಶಿಕ್ಷಣ ಕಿಟ್ ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ವಿಶೇಷ ಪೈಲಟ್ ಯೋಜನೆ ಕಾರ್ಯಕ್ರಮದ ಮೂಲಕ ಆರು ತಿಂಗಳಲ್ಲಿ ರಾಜ್ಯದಲ್ಲಿ ನಾನಾ ಕ್ಷೇತ್ರಗಳ 10 ಸಾವಿರ ಎಐ ತಂತ್ರಜ್ಞರನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. 'ಎಐ ಈಗ ಆಯ್ಕೆಯಲ್ಲ, ಅವಶ್ಯಕತೆ' ಎನ್ನುವ ಧ್ಯೇಯವಾಕ್ಯದೊಂದಿಗೆ ಯತಿಕಾರ್ಪ್ ಸಂಸ್ಥೆಯು ಕರ್ನಾಟಕದಲ್ಲಿ ಎಐ ಸಾಕ್ಷರತಾ ಅಭಿಯಾನ ಆರಂಭಿಸಿದೆ.
ಎಐ ಕಿಟ್ನಲ್ಲಿ ಆ್ಯಕ್ಷನ್ ಕಾರ್ಡ್, ಎಐ ಪ್ರಿಂಟೆಡ್ ಹ್ಯಾಂಡ್ಬುಕ್, ಡಿಜಿಟಲ್ ಆ್ಯಕ್ಸೆಸ್ ಮೆಟೀರಿಯಲ್, ಎಐ ವರ್ಕ್ ಬುಕ್, ನೋಟ್ ಪ್ಯಾಡ್, ಮಾಸ್ಕಾಟ್ ಬ್ಯಾಡ್ಜ್ ವೆಲ್ಕಮ್ ಲೆಟರ್, ಸರ್ಟಿಫಿಕೆಟ್ ಆಫ್ ಎನ್ ರೋಲ್ಮೆಂಟ್, ಲರ್ನಿಂಗ್ ಟ್ರ್ಯಾಕ್ಟರ್ ಮತ್ತಿತರ 20ಕ್ಕೂ ಅಧಿಕ ಟೂಲ್ ಬಳಕೆಯ ಎಐ ತರಬೇತಿ ನೀಡಲಾಗುವುದು. ಫಲಾನುಭವಿಗಳನ್ನು ರೋಟರಿ, ಲಯನ್ಸ್, ಜೇಸಿಐ, ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸರಕಾರೇತರ ಸಂಸ್ಥೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದವರು ಹೇಳಿದರು.
ವಿಶ್ವದ ಮೊದಲ ಎಐ ಕಾರ್ಡ್
ಯತಿಕಾರ್ಪ್ ಸಂಸ್ಥೆಯ ತಂತ್ರಜ್ಞರು ನಿರಂತರ ಸಂಶೋಧನೆ ನಡೆಸಿ, ವಿಶ್ವದ ಮೊದಲ ಎಐ ಕಾರ್ಡ್ ಅನ್ನು ಅಭಿವೃದ್ಧಿ ಪಡಿಸಿದೆ. ಅಮೆರಿಕದ ಎಐ ವಿಜ್ಞಾನಿ ಪ್ರೊ.ಎಸ್.ಎಸ್.ಅಯ್ಯಂಗಾರ್ ಮಾರ್ಗದರ್ಶನದಲ್ಲಿ ಎಐ ಕಾರ್ಡ್ ಅಭಿವೃದ್ಧಿಪಡಿಸಲಾಗಿದೆ. ಎಐ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಪ್ರತಿಯೊಬ್ಬರಲ್ಲಿ ಬೆಳೆಸುವುದು ಅನಿವಾರ್ಯವಾಗಿದೆ. ಈಗಾಗಲೇ ವಿವಿಧ ಕ್ಷೇತ್ರಗಳ ಒಂದು ಲಕ್ಷಕ್ಕೂ ಹೆಚ್ಚು ಬಳಕೆದಾರರಿದ್ದು ವೈದ್ಯರು, ವಕೀಲರು, ಪತ್ರಕರ್ತರು ಸೇರಿ 32 ವಿವಿಧ ಕ್ಷೇತ್ರಗಳ ವೃತ್ತಿಪರರು ಈ ಕಾರ್ಡ್ ನಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಕೃಪಾ ಕೆ., ಪ್ರತಿನಿಧಿಗಳಾದ ನವ್ಯಾ ಅಮೈ, ಭೂಮಿ ಪೂಜಾರಿ, ಶ್ರೀನಿಧಿ ಸಿ, ರೆತಿಕ್, ಜಿತೇಶ್ ಶೆಟ್ಟಿ ಉಪಸ್ಥಿತರಿದ್ದರು.
In a major step toward promoting AI literacy in Karnataka, Yathicorp India Pvt. Ltd., a leading name in AI innovation, has launched a pilot initiative to distribute AI Education Kits worth ₹20,000 each—completely free of cost—to selected beneficiaries across every taluk in the state. The initiative was announced by Yatheesh K.S., CEO of Yathicorp, at a press conference on Monday.
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am