ಬ್ರೇಕಿಂಗ್ ನ್ಯೂಸ್
24-07-25 11:30 am Mangalore Correspondent ಕರಾವಳಿ
ಮಂಗಳೂರು, ಜುಲೈ 24 : ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಹೃದ್ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು ರಾಜ್ಯದ ಕರಾವಳಿ ಭಾಗದಲ್ಲಿ ಪ್ರಥಮ ಬಾರಿಗೆ ಎರಡು ವಾಲ್ವ್ - ಇನ್- ವಾಲ್ವ್ ಟಿಎವಿಆರ್ (ಟ್ರಾನ್ಸ್ ಕೆಥೇಟರ್ ಓರ್ಟಿಕ್ ವಾಲ್ಡ್ ರಿಪ್ಲೇಸ್ಮೆಂಟ್) ಚಿಕಿತ್ಸೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದೆ.
ಕರ್ನಾಟಕದ ಮೊದಲ ವಾಲ್ವ್ -ಇನ್- ವಾಲ್ವ್ ಪ್ರಕ್ರಿಯೆಯನ್ನು ನಾಲ್ಕು ವರ್ಷಗಳ ಹಿಂದೆ ನಡೆಸಿದ ಹೆಗ್ಗಳಿಕೆಯನ್ನು ಇಂಡಿಯಾನಾ ಆಸ್ಪತ್ರೆ ಹೊಂದಿದೆ. ಆದರೆ ಟಿಎವಿಆರ್ ತಂತ್ರಜ್ಞಾನ ಮಂಗಳೂರಿನಲ್ಲಿ ಈವರೆಗೆ ನಡೆದಿರಲಿಲ್ಲ. ಇದೀಗ ಅತ್ಯಂತ ಸವಾಲಿನ ಮತ್ತು ಕ್ಲಿಷ್ಟ ಶಸ್ತ್ರಚಿಕಿತ್ಸೆಯನ್ನು ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಆರು ವರ್ಷಗಳಿಂದ ಇಂಡಿಯಾನಾ ಆಸ್ಪತ್ರೆ ಕರ್ನಾಟಕ ಕರಾವಳಿ, ಉತ್ತರ ಮಲಬಾರ್ ಮತ್ತು ಮಲೆನಾಡು ಪ್ರದೇಶಗಳ ಜನರಿಗೆ ಹೃದಯ ಸಂಬಂಧಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದು, ಅದರ ಆರನೇ ವಾರ್ಷಿಕೋತ್ಸವವನ್ನು ಈ ವರ್ಷ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದವರು ತಿಳಿಸಿದರು.
ಈ ಹಿಂದೆ ವಾಲ್ವ್ ಚಿಕಿತ್ಸೆಗೊಳಗಾಗಿ ಮತ್ತೆ ತೊಂದರೆಗೀಡಾದ (ತೀವ್ರವಾದ ಆಯೊರ್ಟಿಕ್ ವಾಲ್ವ್) ರೋಗಿಗಳಿಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮೂಲಕ ವಾಲ್ವ್ ಬದಲಾವಣೆ ಮಾಡಲಾಗುತ್ತದೆ. ಸುಮಾರು 10ರಿಂದ 15 ವರ್ಷಗಳಲ್ಲಿ ಆ ವಾಲ್ವ್ ಗಳು ಕುಗ್ಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಪುನಃ ವಾಲ್ವ್ ಬದಲಿಸಲು ಮತ್ತೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಇದು ವಯಸ್ಕ ರೋಗಿಗಳಿಗೆ ಅಪಾಯ ತರುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನೂತನ ತಂತ್ರಜ್ಞಾನ ಮೂಲಕ ಹಳೆಯ ವಾಲ್ವ್ ನೊಳಗೆ ಹೊಸ ವಾಲ್ವ್ ಸ್ಥಾಪಿಸಲಾಗುತ್ತದೆ. ಆದರೆ ಈ ವಿಧಾನ ಸಾಮಾನ್ಯ ಟಿಎವಿಆರ್ ಗಿಂತ ಹೆಚ್ಚು ಜಟಿಲವಾಗಿದ್ದು, ತಾಂತ್ರಿಕ ನೈಪುಣ್ಯತೆಯಿಂದ ನಿಭಾಯಿಸಬೇಕಾಗಿದೆ ಎಂದರು.
72 ವರ್ಷದ ಕೇರಳದ ರೋಗಿಯೊಬ್ಬರು 20 ವರ್ಷ ಹಿಂದೆ ಕೊಚ್ಚಿಯಲ್ಲಿ ಎಸ್ಎವಿಆರ್ ಮಾಡಿಸಿದ್ದರು. ಈಗ ಮತ್ತೆ ತೊಂದರೆ ಕಾಣಿಸಿಕೊಂಡಿದ್ದು, ಇಂಡಿಯಾನಾ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಮತ್ತೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಗಿತ್ತು. ಆದರೆ, ಹೆಚ್ಚಿನ ಅಪಾಯದ ಕಾರಣದಿಂದಾಗಿ ಹಲವು ಆಸ್ಪತ್ರೆಗಳು(ಕೊಚ್ಚಿಯೂ ಸೇರಿ) ನಿರಾಕರಿಸಿದ್ದವು. ಅಂತಿಮವಾಗಿ ಡಾ.ಯೂಸುಫ್ ಕುಂಬ್ಳೆ ಅವರನ್ನು ಸಂಪರ್ಕಿಸಿದಾಗ, ಈ ವಿಶೇಷ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿಸಿ ಪ್ರಕ್ರಿಯೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯಲ್ಲಿ ಡಾ.ಗ್ಯಾರಿ ವೆಲೇರಿಯನ್ ಪಾಯ್ಸ್, ಡಾ. ಆಕಾಶ್ ಜಿ.ನಾಯರ್, ಡಾ.ಸುಖೇನ್ ಎನ್. ಶೆಟ್ಟಿ ಡಾ.ಲತಾ, ವಿಜಿನ್ ಮತ್ತಿತರರು ಸಹಕರಿಸಿದ್ದಾರೆ ಎಂದರು.
ಇನ್ನೊಂದು ಪ್ರಕರಣದಲ್ಲಿ 20 ವರ್ಷ ಹಿಂದೆ ವಾಲ್ವ್ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದ 80 ವರ್ಷದ ಮಹಿಳೆಯೊಬ್ಬರು, ಮತ್ತೆ ಹೃದಯ ತೊಂದರೆಗೆ ಸಿಲುಕಿ ಅವರಿಗೆ ಇನ್ನೊಂದು ಶಸ್ತ್ರಚಿಕಿತ್ಸೆಗೆ ತಯಾರಾಗಿದ್ದರೂ, ಹೆಚ್ಚಿನ ಅಪಾಯದ ಕಾರಣದಿಂದ ಯಾವುದೇ ವೈದ್ಯರು ಆ ಶಸ್ತ್ರಚಿಕಿತ್ಸೆ ಮಾಡಲು ಸಿದ್ದರಾಗಿರಲಿಲ್ಲ. ಬಳಿಕ ಇಂಡಿಯಾನಾ ಆಸ್ಪತ್ರೆಯಲ್ಲಿ ಅವರಿಗೂ ಒಂದು ಗಂಟೆಯೊಳಗೆ ಇದೇ ವಿಧಾನದಲ್ಲಿ ಪ್ರಕ್ರಿಯೆ ನಡೆಸಲಾಯಿತು ಎಂದು ಯೂಸುಫ್ ಕುಂಬ್ಳೆ ಹೇಳಿದರು. ಆಸತ್ರೆಯ ವೈದ್ಯಕೀಯ ಸಲಹೆಗಾರ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
Indiana Hospital in Mangaluru has achieved a remarkable medical milestone by successfully performing the first-ever Valve-in-Valve Transcatheter Aortic Valve Replacement (TAVR) procedure in the coastal Karnataka region. This marks a significant advancement in cardiac care using minimally invasive technology to treat blocked heart valves.
25-07-25 04:07 pm
Bangalore Correspondent
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
25-07-25 04:40 pm
HK News Desk
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
25-07-25 08:25 pm
Mangalore Correspondent
DIG Anucheth Mangalore, SIT Dharmasthala: ಎಸ್...
25-07-25 06:05 pm
Udupi: ಸೊಸೈಟಿಗೆ ಅಡಿಟ್ ಮಾಡಿಕೊಡಲು ಲಂಚ ಬೇಡಿಕೆ ;...
25-07-25 02:25 pm
Terrorist Yasin Bhatkal, Mangalore: 2008ರ ಉಳ್...
24-07-25 10:26 pm
Dharmasthala Case, Investigation, Advocate,...
24-07-25 05:27 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am