ಬ್ರೇಕಿಂಗ್ ನ್ಯೂಸ್
04-08-25 10:34 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.4 : 15 ವರ್ಷಗಳ ಹಿಂದೆ ಪೊಲೀಸ್ ಅಧಿಕಾರಿಯೇ ಒಬ್ಬರು 13ರಿಂದ 15 ವರ್ಷದ ಬಾಲಕಿಯನ್ನು ಹೂತು ಹಾಕಿದ್ದನ್ನು ನೋಡಿದ್ದೇನೆ. ಪೊಲೀಸ್ ಅಧಿಕಾರಿಯೇ ಇಂಥ ಕೆಲಸ ಮಾಡುತ್ತಿದ್ದಾರೆ ಎಂದ ಮೇಲೆ ನಾವು ಯಾರಲ್ಲಿ ದೂರು ಕೊಡಬೇಕಿತ್ತು. ಹಾಗಾಗಿ ದೂರು ಕೊಟ್ಟಿರಲಿಲ್ಲ. ಈಗ ಧರ್ಮಸ್ಥಳ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ, ಕೇಸನ್ನು ರಿಜಿಸ್ಟರ್ ಮಾಡಿ ಎಸ್ಐಟಿಗೆ ವರ್ಗಾಯಿಸುವುದಾಗಿ ಹೇಳಿದ್ದಾರೆ ಎಂಬುದಾಗಿ ಬೆಳ್ತಂಗಡಿಯ ಆರ್ಟಿಐ ಕಾರ್ಯಕರ್ತ ಜಯನ್ ಟಿ. ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ 15 ವರ್ಷದ ಬಾಲಕಿಯನ್ನು ಯಾವುದೇ ಪ್ರಕರಣ ದಾಖಲಿಸದೆ ಹೂತು ಹಾಕಿರುವ ಬಗ್ಗೆ ಜಯನ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಎರಡು ದಿನಗಳ ಹಿಂದೆಯೇ ಜಯನ್ ಈ ವಿಚಾರವನ್ನು ಮಾಧ್ಯಮಕ್ಕೆ ತಿಳಿಸಿದ್ದರು. ಬೆಳ್ತಂಗಡಿ ಎಸ್ಐಟಿ ಕಚೇರಿಗೆ ತೆರಳಿದಾಗ, ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಿದ್ದರಿಂದ ಅದರಂತೆ ಜಯನ್ ದೂರು ನೀಡಿದ್ದಾರೆ.
ಇದೇ ವೇಳೆ, ಜಯನ್ ಮಲಯಾಳಿ, ಕೇರಳ ಸರಕಾರದ ದುಷ್ಪ್ರೇರಣೆಯಿಂದ ದೂರು ನೀಡುತ್ತಿದ್ದಾರೆಂದು ಕೆಲವರು ಆರೋಪ ಮಾಡುತ್ತಿರುವ ಬಗ್ಗೆ ಕೇಳಿದಾಗ ಸಿಟ್ಟಿಗೆದ್ದ ಜಯನ್, ಅವರಪ್ಪ ಮಲಯಾಳಿ. ನಾನು ಇಲ್ಲಿಯೇ ಹುಟ್ಟಿದವನು. ನನ್ನ ತಾಯಿಯೂ ಇಲ್ಲಿಯೇ ಹುಟ್ಟಿದವರು. ಏನು ಮಲಯಾಳಿ. ಯಾರು ಆ ರೀತಿ ಹೇಳುತ್ತಿದ್ದಾನೋ ಅವನೇ ಮಲಯಾಳಿ. ನಾನು ಯಾವುದೇ ದೇವಸ್ಥಾನದ ಬಗ್ಗೆ, ಕ್ಷೇತ್ರದ ಬಗ್ಗೆ ಆರೋಪ ಮಾಡುತ್ತಿಲ್ಲ. ನಾನು ಕಣ್ಣಾರೆ ನೋಡಿದ್ದನ್ನು ಹೇಳುತ್ತಿದ್ದೇನೆ. ಒಬ್ಬ ಪೊಲೀಸ್ ಅಧಿಕಾರಿಯೇ ಅರಣ್ಯ ಜಾಗದಲ್ಲಿ ನಾಯಿ ತರ ಬಾಲಕಿಯನ್ನು ಎಳೆದೊಯ್ದು ಶವವನ್ನು ಹೂತು ಹಾಕಿದ್ದ. ಯಾರ ಪ್ರೇರಣೆಯಿಂದ ಆ ರೀತಿ ಮಾಡಿದ್ದ ಅನ್ನುವುದನ್ನು ತನಿಖೆ ಮಾಡಲಿ ಎಂದರು.
ಬಾಲಕಿಯನ್ನು ಯಾರು ಕೊಂದಿದ್ದರು, ಆಕೆಯ ಮೇಲೆ ಅತ್ಯಾಚಾರ ಆಗಿತ್ತೇ ಎನ್ನುವುದು ಗೊತ್ತಿಲ್ಲ. ಯಾವ ಜಾಗದಲ್ಲಿ ಹೂಳಲಾಗಿತ್ತು ಎನ್ನುವುದನ್ನು ತೋರಿಸುತ್ತೇನೆ. ಅದನ್ನು ಹೊರ ತೆಗೆದು ತನಿಖೆ ಮಾಡುವಂತೆ ಕೋರುತ್ತಿದ್ದೇನೆ. ಈಗ ಎಸ್ಐಟಿ ರಚನೆಯಾಗಿದ್ದರಿಂದ ವಿಶ್ವಾಸ ಬಂದಿದೆ, ಹಾಗಾಗಿ ದೂರು ನೀಡುತ್ತಿದ್ದೇನೆ ವಿನಾ ಬೇರಾವುದೇ ದುರುದ್ದೇಶವಿಲ್ಲ ಎಂದು ಹೇಳಿದರು. 2002ರಲ್ಲಿ ಬಿಸಿ ರೋಡಿನಲ್ಲಿ ಬಾಲಕಿ ನಾಪತ್ತೆಯಾಗಿದ್ದ ಕೇಸು ದಾಖಲಾಗಿತ್ತು. ಅದೇ ಬಾಲಕಿಯಾ ಎನ್ನುವುದು ಗೊತ್ತಿಲ್ಲ. ನಾನು ಇದರ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಮಾಹಿತಿ ಕೇಳಿದರೆ ಅಲ್ಲಿ ಮಾಹಿತಿ ನಾಶವಾಗಿದೆ. ನನ್ನ ಅಂದಾಜಿನಲ್ಲಿ ಬಾಲಕಿ ಬಿಸಿ ರೋಡ್ ಮೂಲದ್ದೇ ಆಗಿರಬೇಕು. ಯಾರಾದ್ರೂ ಇದ್ದರೆ ಮುಂದೆ ಬರಲಿ. ನಾನು ಸೇರಿ ಮೂರ್ನಾಲ್ಕು ಜನ ನೋಡಿದವರಿದ್ದೇವೆ ಎಂದು ಜಯನ್ ಹೇಳಿದ್ದಾರೆ.
In a startling revelation that adds a new dimension to the Dharmasthala human remains case, RTI activist Jayan T. has alleged that he personally witnessed a police officer dragging and burying the body of a teenage girl in a forested area near Dharmasthala about 15 years ago.
29-08-25 10:51 pm
HK News Desk
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 10:54 pm
Mangalore Correspondent
Talapady Accident, Ksrtc, Death, Mangalore: ತ...
29-08-25 09:08 pm
Mangalore, Eric Ozario, Konkani, Death: ಮಾಂಡ್...
29-08-25 08:13 pm
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm