ಬ್ರೇಕಿಂಗ್ ನ್ಯೂಸ್
09-08-25 11:36 am Udupi Correspondent ಕರಾವಳಿ
ಉಡುಪಿ, ಆ.9: ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಇದೀಗ ವಿದೇಶದಲ್ಲಿರುವ ಪತಿ ಅಲ್ಲಿಂದ ಮೊಬೈಲ್‌ನಲ್ಲೇ ತಲಾಖ್ ನೀಡಿದ್ದಾಗಿ ತೆಂಕ ಗ್ರಾಮದ ನಿವಾಸಿ ಸುಹಾನಾ (28) ಎಂಬ ಮಹಿಳೆ ಪೊಲೀಸ್ ದೂರು ನೀಡಿದ್ದು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಎರ್ಮಾಳು ಗುಜ್ಜಿಹೌಸ್‌ನ ಮುಬೀನ್ ಶೇಖ್ ಎಂಬವರನ್ನು 2024ರ ಅಕ್ಟೋಬರ್‌ನಲ್ಲಿ 12.5 ಪವನ್ ಬಂಗಾರ ವರದಕ್ಷಿಣೆ ಮದುವೆ ಮಾಡಿಸಿದ್ದರು. ಮದುವೆಗೆ 20 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಆದರೆ ತಿಂಗಳ ಬಳಿಕ ಪತಿಯ ಮನೆಯವರು ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸತೊಡಗಿದ್ದು, ಆಗಲೇ ವಿದೇಶಕ್ಕೆ ತೆರಳಿದ್ದರು. ಇದೀಗ ಜುಲೈ 15ರಂದು ಇಲ್ಲ ಸಲ್ಲದ ಆರೋಪವೆಸಗಿ ಮೊಬೈಲ್‌ನಲ್ಲೇ ತಲಾಖ್ ನೀಡಿರುವುದಾಗಿ ಸುಹಾನಾ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ನಂತರದಲ್ಲಿ ಪತಿಯ ಮನೆಯಲ್ಲಿ ಮಾವ ಉಮ್ಮರ್ ಸಾಹೇಬ್, ಅತ್ತೆ ಅಬೀದಾ, ಮೈದುನ ಮುಕ್ತಾರ್, ನಾದಿನಿ ರಿಹಾನಾ, ರಶೀನ್ ಹಾಗೂ ರಿಹಾನಾಳ ಪತಿ ಶಾಹೀದ್‌ರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಅನುಭವಿಸಿದ್ದೇನೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಒಂದು ಬಾರಿ ತಂದೆ ನನ್ನನ್ನು ನೋಡಲು ಬಂದಿದ್ದಾಗ ನಾದಿನಿ ರಶೀನ್ ಕೈಯಿಂದ ಅವರ ಬೆನ್ನಿಗೆ ಹೊಡೆದಿದ್ದಾಳೆ. ಕಳೆದ ಡಿಸೆಂಬರ್‌ನಲ್ಲಿ ಪತಿ ವಿದೇಶಕ್ಕೆ ಹೋಗಿದ್ದು, ಆ ಬಳಿಕ ಪತಿಯ ಮನೆಯವರ ವರದಕ್ಷಿಣೆ ಕಿರುಕುಳವೂ ಹೆಚ್ಚಾಗಿತ್ತು. ಇದೀಗ ಪತಿ ಮೊಬೈಲ್ ಮೂಲಕ ತಲಾಖ್ ನೀಡಿದ್ದಾಗಿ ಸುಹಾನಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
A 28-year-old woman from Thenka village has lodged a police complaint alleging dowry harassment and instant divorce via mobile by her husband, who is currently abroad. The Padubidri police have registered a case in this regard.
09-08-25 03:32 pm
HK News Desk
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
Bigg Boss Rajath, Death Threats, Soujanya: ಯೂ...
08-08-25 11:20 am
ಸರ್ಕಾರಿ ಕೆಲಸ ಕೊಡಿಸೋದಾಗಿ 25 ಲಕ್ಷ ಪಡೆದು ವಂಚನೆ ;...
07-08-25 10:18 pm
09-08-25 02:49 pm
HK News Desk
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
09-08-25 02:16 pm
Mangalore Correspondent
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
SIT, Kalleri, Buried Schoolgirl, Dharmasthala...
08-08-25 09:25 pm
ಧರ್ಮಸ್ಥಳ ಸುದ್ದಿ ಪ್ರಸಾರ ನಿರ್ಬಂಧಕ್ಕೆ ಸುಪ್ರೀಂ ನಿ...
08-08-25 08:26 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm