ಬ್ರೇಕಿಂಗ್ ನ್ಯೂಸ್
09-08-25 10:53 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.9 : ಧರ್ಮಸ್ಥಳ ಹೆಣ ಹೂತ ಆರೋಪ ಪ್ರಕರಣದಲ್ಲಿ ದೂರುದಾರ ತೋರಿಸಿದ್ದ ಬಾಹುಬಲಿ ಬೆಟ್ಟದ ಬಳಿಯೂ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದು, ಶವ ಹೂತ ಬಗ್ಗೆ ಸಾಕ್ಷ್ಯ ಲಭಿಸಿಲ್ಲ.
ಬಾಹುಬಲಿ ಬೆಟ್ಟಕ್ಕೆ ತೆರಳುವ ರಸ್ತೆ ಮಧ್ಯದ ಎಡಭಾಗದಲ್ಲಿ ಜಾಗವನ್ನು ತೋರಿಸಲಾಗಿತ್ತು. ಸ್ಥಳದಲ್ಲಿ 15 ಅಡಿ ಅಗಲ ಮತ್ತು ಉದ್ದಕ್ಕೆ ಸುಮಾರು ಎಂಟು ಅಡಿ ಆಳಕ್ಕೆ ಮಣ್ಣು ತೆರವು ಮಾಡಿ ಶೋಧಿಸಲಾಗಿದೆ. ಆದರೆ ಯಾವೊಂದು ಸಾಕ್ಷ್ಯವೂ ಲಭಿಸದೆ ಎಸ್ಐಟಿ ಅಧಿಕಾರಿಗಳು ಮರಳಿದ್ದಾರೆ. ಬಾಹುಬಲಿ ಬೆಟ್ಟದ ಬಳಿಯ ಈ ಜಾಗವನ್ನು 16ನೇ ನಂಬರ್ ಎಂದು ಮಾರ್ಕ್ ಹಾಕಲಾಗಿತ್ತು.




ನಿನ್ನೆ ಶುಕ್ರವಾರ ಧರ್ಮಸ್ಥಳದಿಂದ ಎರಡು ಕಿಮೀ ದೂರದ ಕಲ್ಲೇರಿ- ಬೋಳಿಯಾರ್ ಕಾಡಿನಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಶಾಲಾ ಸಮವಸ್ತ್ರದಲ್ಲಿಯೇ ಬಾಲಕಿಯ ಶವ ಹೂತಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದ ಈ ಜಾಗದಲ್ಲಿ ಶೋಧ ಕಾರ್ಯ ಮಾಡಲಾಗಿತ್ತು. ಆದರೆ ಅಲ್ಲಿಯೂ ಯಾವುದೇ ಸಾಕ್ಷ್ಯ ಲಭಿಸಿರಲಿಲ್ಲ. ಆ ಜಾಗವನ್ನು 15ನೇ ನಂಬರ್ ಎಂದು ಗುರುತ ಹಾಕಲಾಗಿತ್ತು.
ಇಂದು ಬೆಳಗ್ಗೆ ಧರ್ಮಸ್ಥಳ ಆವರಣದ ಒಳಗಡೆ ಬರುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರಿಗೆ ಅಚ್ಚರಿ ಉಂಟಾಗಿತ್ತು. ಮುಸುಕು ಹಾಕಿದ್ದ ದೂರುದಾರ ನೇರವಾಗಿ ಮಹಾದ್ವಾರದ ಬಳಿಯಿರುವ ಬಾಹುಬಲಿ ಬೆಟ್ಟದ ಬಳಿಯ ರಸ್ತೆಯಲ್ಲಿ ಕರೆದೊಯ್ದು ಅಲ್ಲಿನ ಗುಡ್ಡದ ಒಂದು ಬದಿಯನ್ನು ತೋರಿಸಲಾಗಿತ್ತು. ಆದರೆ ಅಲ್ಲಿ ಯಾವುದೇ ಸಾಕ್ಷ್ಯ ಸಿಗದೇ ಇರುವುದು ಶೋಧ ನಡೆಸಿದ ತಂಡಕ್ಕೂ ನಿರಾಸೆ ಮೂಡಿಸಿದೆ. ಈವರೆಗೆ ಒಟ್ಟು 15 ಕಡೆಗಳಲ್ಲಿ ಅಗೆತ ಮಾಡಲಾಗಿದ್ದು ಒಂದು ಕಡೆ ಮಾತ್ರ ಶವದ ಸಾಕ್ಷ್ಯ ಲಭಿಸಿತ್ತು. ಆನಂತರ, ಗುಡ್ಡದ ಮೇಲ್ಭಾಗದಲ್ಲಿ ಒಂದು ಅಸ್ಥಿಪಂಜರ ಸಿಕ್ಕಿತ್ತು. ಇದೇ ವೇಳೆ, ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಮತ್ತಿಬ್ಬರು ದೂರುದಾರ ಹೆಣ ಹೂತಿದ್ದನ್ನು ನೋಡಿದ್ದೇವೆಂದು ಸಾಕ್ಷಿಗಾರರೆಂದು ಹೇಳಿ ಇಬ್ಬರು ಬಂದು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ, ಬೆಳ್ತಂಗಡಿ ಠಾಣೆಯಲ್ಲಿ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಮತ್ತು ಧರ್ಮಸ್ಥಳ ಪರವಾಗಿ ಹೋರಾಟ ನಡೆಸುತ್ತಿರುವ ಉಡುಪಿ ಮೂಲದ ವಸಂತ ಗಿಳಿಯಾರ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಾಲತಾಣದಲ್ಲಿ ಅಶ್ಲೀಲ ಮತ್ತು ಜನರನ್ನು ಎತ್ತಿಕಟ್ಟುವ ರೀತಿ, ಧರ್ಮ ಧರ್ಮಗಳ ನಡುವೆ ದ್ವೇಷ ಮೂಡುವ ರೀತಿ ಹೇಳಿಕೆ ನೀಡಿ ವಿಡಿಯೋ ಹರಿಯಬಿಟ್ಟಿದ್ದಾರೆಂದು ಇಬ್ಬರು ದೂರು ನೀಡಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
In the ongoing Dharmasthala human remains investigation, the Special Investigation Team (SIT) carried out another search near Bahubali Hill, a location pointed out by the complainant. Despite excavating an area 15 feet in length and width and around 8 feet deep, no evidence of buried remains was found, leaving the team disappointed. This site had been marked as Location No. 16.
18-02-26 09:02 pm
HK Desk
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್...
17-02-26 10:33 pm
Mohan Das Pai: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾ...
17-02-26 09:12 pm
ಫೇಲಾದವರನ್ನು ಪಾಸು ಮಾಡುವುದೇ ತಪ್ಪು ; ಕೇರಳದಲ್ಲಿ ಶ...
17-02-26 08:56 pm
17-02-26 08:50 pm
HK Desk
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
18-02-26 11:24 pm
Mangaluru Staffer
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ್ ಔಟ್ ಪೋಸ್ಟ್...
18-02-26 10:46 pm
MIR Group, Mangalore: ಮಂಗಳೂರಿನಲ್ಲಿ ಇಟಲಿಯ ಮೀರ್...
18-02-26 10:24 pm
CA Raghavendra Rao, Death: ಶ್ರೀನಿವಾಸ ಸಮೂಹ ಶಿಕ...
18-02-26 11:19 am
Parameshwara in Mangalore: ಶಾಸಕರು ವಿದೇಶಕ್ಕೆ ತ...
17-02-26 12:42 pm
18-02-26 09:16 pm
Mangaluru Staffer
Mangalore Shivabagh Suicide: ಕೈ ಕೊಯ್ದುಕೊಂಡು ರ...
18-02-26 07:42 pm
Hassan Murder: ಆಸ್ತಿ ವಿಚಾರಕ್ಕೆ ತಕರಾರು, ಕೋರ್ಟ್...
18-02-26 07:10 pm
ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ, ಹಡಗುಗಳ ರಹಸ್ಯ ಮಾ...
18-02-26 01:52 pm
ಬೆಚ್ಚಿಬೀಳಿಸಿದ ಎಂಬಿಎ ವಿದ್ಯಾರ್ಥಿನಿ ಹತ್ಯೆ ಪ್ರಕರಣ...
17-02-26 03:03 pm